ನಿಯಮಬಾಹಿರ ಬಡ್ತಿ: ಶಿಸ್ತು ಕ್ರಮದ ಭರವಸೆ
ವಿಜಯಪುರ: 2015 2018 ಮತ್ತು 2020ರಲ್ಲಿ ಕಿರಿಯ ಎಂಜಿನಿಯರ್ ಹುದ್ದೆಗೆ ನಿಯಮ ಬಾಹಿರವಾಗಿ ಪದೋನ್ನತಿ ನೀಡಿರುವ ಪ್ರಕರಣದ ತನಿಖಾ ವರದಿಯನ್ನು ಪರಿಶೀಲಿಸಿ ಇಂಧನ ಸಚಿವರೊಂದಿಗೆ ಚರ್ಚಿಸಿ ತಪ್ಪಿತ್ಥರ ವಿರುದ್ಧ ಶಿಸ್ತು ಕ್ರಮಕೈಗೊಳ್ಳಲಾಗುವುದು ಎಂದು ಹೆಸ್ಕಾಂ ಅಧ್ಯಕ್ಷ ಸಯ್ಯದ್ ಅಜೀಮಪೀರ ಎಸ್.ಖಾದ್ರಿ ಭರವಸೆ ನೀಡಿದರು. ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ನಿಯಮ ಬಾಹಿರವಾಗಿ ಪದೋನ್ನತಿ ನೀಡಿರುವುದು ನನ್ನ ಗಮನಕ್ಕೆ ಬಂದಿರಲಿಲ್ಲ. ಈ ಬಗ್ಗೆ ವರದಿಯನ್ನು ಪಡೆದು ಶೀಘ್ರಕ್ರಮಕೈಗೊಳ್ಳಲಾಗುವುದು ಎಂದರು.