ಇಂಡಿ: ಪ್ರತಿ ಟನ್ ಕಬ್ಬಿಗೆ ₹3,000 ದರ ನೀಡುವುದಾಗಿ ಕಾರ್ಖಾನೆ ಅಧಿಕಾರಿಗಳು ಘೋಷಿಸಿದ ಹಿನ್ನೆಲೆ ತಾಲ್ಲೂಕಿನ ನಾದ (ಕೆಡಿ) ಗ್ರಾಮದ ಜಮಖಂಡಿ ಸುಗರ್ಸ್ ಘಟಕ-2ರ ಎದುರು ಕಳೆದೊಂದು ವಾರದಿಂದ ನಡೆಸುತ್ತಿದ್ದ ಧರಣಿ ಸತ್ಯಾಗ್ರಹವನ್ನು ಕಬ್ಬು ಬೆಳೆಗಾರರು ಶನಿವಾರ ವಾಪಸ್ ಪಡೆದರು.

ಶನಿವಾರ ಸಂಜೆ ಧರಣಿ ಸ್ಥಳಕ್ಕೆ ತಹಶೀಲ್ದಾರ್ ಬಿ.ಎಸ್. ಕಟಕಭಾವಿ ಸಮ್ಮುಖದಲ್ಲಿ ಕಾರ್ಖಾನೆ ಅಧಿಕಾರಿಗಳು ಭೇಟಿ ನೀಡಿದರು.

ಕಾರ್ಖಾಖೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಂ. ಸೋಮಶೇಖರ ಮಾತನಾಡಿ, ‘ಈ ಭಾಗದಲ್ಲಿ ಕಬ್ಬಿಗೆ ರಿಕವರಿ ಕಡಿಮೆ ಇದ್ದು, ಹೆಚ್ಚಿನ ದರ ನೀಡಲು ಸಾಧ್ಯವಾಗಲ್ಲ. ರೈತರು ಕಾರ್ಖಾನೆಯೊಂದಿಗೆ ಸಹಕರಿಸಬೇಕು. ಕಾರ್ಖಾನೆಗೆ ರೈತರೇ ಆಸ್ತಿ. ಈ ಬಗ್ಗೆ ನೀವು ಅರಿಯದಿದ್ದರೆ ಮುಂದೆ ಕಾರ್ಖಾನೆ ನಡೆಸುವುದು ಕಷ್ಟವಾಗುತ್ತದೆ’ ಎಂದು ಹೇಳಿದರು.

ಹೋರಾಟ ಸಮಿತಿಯ ಬಾಳು ಮುಳಜಿ ಮಾತನಾಡಿ, ‘ಕಾರ್ಖಾನೆಯವರು ನಮ್ಮ ಹೋರಾಟಕ್ಕೆ ಸ್ಪಂದಿಸಿದ್ದು, ನಾವು(ರೈತರು) ಕಾರ್ಖಾನೆ ಉಳಿವಿನ ಬಗ್ಗೆಯೂ ಯೋಚನೆ ಮಾಡೋಣ. ಅವರು ಪ್ರತೀ ಟನ್ ಕಬ್ಬಿಗೆ ₹3 ಸಾವಿರ ನೀಡುವುದಾಗಿ ತಿಳಿಸಿದ್ದು, ಇದಕ್ಕೆ ಒಪ್ಪಿಕೊಳ್ಳೋಣ’ ಎಂದರು.

ಈ ವೇಳೆ ರೈತರು ರೈತರು ಜಯಘೋಷ ಮೊಳಗಿಸಿ ಒಪ್ಪಿಗೆ ಸೂಚಿಸಿದರು.

ಕೆಪಿಆರ್ ಕಾರ್ಖಾನೆಯ ಶಿವಾನಂದ ಮಾವಿನಳ್ಳಿ, ಬಿ.ಎಸ್. ಮೈಗೂರ, ರೈತರಾದ ಕಾಸುಗೌಡ ಬಿರಾದಾರ, ಎಸ್.ಟಿ.ಪಾಟೀಲ, ಸಿದ್ದು ತಳವಾರ, ಎಂ.ಎಸ್.ಮುಲ್ಲಾ, ಕಲ್ಯಾಣಿ ಹಿಟ್ನಳ್ಳಿ, ಶ್ರೀಮಂತ ಖಸ್ಕಿ, ಶ್ರೀಶೈಲ ಮದರಿ, ಯಲ್ಲು ಹಳ್ಳಿ, ಸಂಗಣ್ಣ ದೇವರಮನಿ, ಸುರೇಶ ಪಾಟೀಲ, ವಿಠ್ಠಲ ಬಿರಾದಾರ, ಅಜೀಜ ದೇಸಾಯಿ, ಶಂಕರಗೌಡ ಬಂಡಿ, ಅಂಬುರಾಯ ಕವಟಗಿ, ಹಣಮಂತ ಬಿಸನಾಳ, ಸಂಗಮೇಶ ಪಾಸೋಡಿ, ರಾಜು ದೇವರಮನಿ, ರವಿ ರೋಡಗಿ, ಶೇಖರ ಮಂದೋಲಿ, ಮಲ್ಲನಗೌಡ ಬಿರಾದಾರ, ಪ್ರದೀಪ ಬೊರುಟಗಿ, ಕಾಂತು ನಾದ ಇದ್ದರು.

ಕಬ್ಬಿನ ದರ ನಿಗದಿಗೆ ಆಗ್ರಹಿಸಿ ಸಾವಿರಾರು ರೈತರು ಕಳೆದೊಂದು ವಾರದಿಂದ ನಾದ ಗ್ರಾಮದ ಜಮಖಂಡಿ ಶುಗರ್ಸ್ ಕಾರ್ಖಾನೆ ಎದುರು ಹೋರಾಟ ನಡೆಸುತ್ತಿದ್ದರು. ನಾದ ಕೆ.ಡಿ ಗ್ರಾಮದ ಬಳಿ ಎರಡು ದಿನ ರಸ್ತೆ ಬಂದ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.