ಆ.23 ರೊಳಗಾಗಿ ಮನೆಗಳನ್ನು ತೆರವುಗೊಳಿಸಬೇಕು. ಈ ಕುರಿತು ನಿವಾಸಿಗಳಿಗೆ ತಿಳಿ ಹೇಳುವಂತೆ ಡಿ.ಸಿ ಸೂಚನೆ ನೀಡಿದ್ದಾರೆ. ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಬೇಕು. ಅಹಿತಕರ ಘಟನೆ ನಡೆಯಬಾರದು
ಅನುರಾಧಾ ವಸ್ತ್ರದ, ಉಪವಿಭಾಗಾಧಿಕಾರಿ, ಇಂಡಿ
ತೆರವುಗೊಳಿಸದ ಕಾರಣ ಕೋರ್ಟ್ ನ್ಯಾಯಾಧೀಶರು ನನ್ನ ಮೇಲೆ ಬಂಧನ ವಾರೆಂಟ್ ಹೊರಡಿಸಿದ್ದಾರೆ. ನೀವಾಗಿಯೇ ತೆರುವುಗೊಳಿಸದಿದ್ದರೆ ನಾವು ತೆರುವುಗೊಳಿಸುವುದು ಅನಿವಾರ್ಯವಾಗುತ್ತದೆ
ರಾಜಶೇಖರ ಎಸ್. ಮುಖ್ಯಾಧಿಕಾರಿ, ಪುರಸಭೆ
ಕಳೆದ 20 ವರ್ಷಗಳಿಂದ ಈ ಜಾಗದಲ್ಲಿ ನಿವಾಸಿಗಳು ವಾಸ ಮಾಡುತ್ತಿದ್ದಾರೆ. ಇಂದೇ ಮೊದಲನೆಯ ನೋಟಿಸ್ ನೀಡಿ ಮನೆ ಖಾಲಿ ಮಾಡಿ ಎನ್ನುವುದು ನ್ಯಾಯೋಚಿತವಲ್ಲ. ಮೂರು ನೋಟಿಸ್ ನೀಡಿ ಕಾಲಾವಕಾಶ ಕೊಡಬೇಕು