ಕೊಲ್ಹಾರ: ಸದ್ಗುಣಿಗಳೂ ಮತ್ತು ವಿಷಯ ಸಂಪನ್ನರಾದ ಶಿಕ್ಷಕರು ಮಕ್ಕಳ ಪಾಲಿಗೆ ವರದಾನವಾಗಿದ್ದಾರೆ. ಗುರುವಿನಿಂದಲೇ ಶಿಷ್ಯರಿಗೆ ಮೋಕ್ಷ ಪ್ರಾಪ್ತವಾಗುವುದೆಂದು ನಿವೃತ್ತ ಪೊಲೀಸ್ ಅಧಿಕಾರಿ ಬಿ.ಆಯ್.ಪಾಟೀಲ ಹೇಳಿದರು.

ಮುಳವಾಡ ಗ್ರಾಮದಲ್ಲಿ ಶನಿವಾರ ಶ್ರೀ ಮಲ್ಲಿಕಾರ್ಜುನ ವಿದ್ಯಾವರ್ಧಕ ಸಂಘದ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆಯ ನೂತನ ಕಟ್ಟಡ ಉದ್ಘಾಟನ ಸಮಾರಂಭದ ಜ್ಯೋತಿ ಬೆಳಗಿಸಿ ಮಾತನಾಡಿದರು.

ಸಂಘದ ಕಾರ್ಯದರ್ಶಿಗಳಾದ ಜಂಬುನಾಥ ಕಂಚ್ಯಾಣಿ ಮಾತನಾಡಿ, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳು ದೇಶದ ಆರೋಗ್ಯಕರವಾದ ಅಭಿವೃದ್ಧಿಗೆ ಪರೋಕ್ಷವಾಗಿ ಶ್ರಮಿಸುತ್ತಿರುವವೆಂದು ಹೇಳಿದರು.

ನಿವೃತ್ತ ಪ್ರಾಚಾರ್ಯರ ವಿ.ಡಿ.ಐಹೊಳ್ಳಿ ಮಾತನಾಡಿ, ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಪಡೆಯಲು ಮಕ್ಕಳು ಮಾಡಬೇಕಾದ ಪ್ರಯತ್ನ ಮತ್ತು ಅಧ್ಯಯನದ ತಂತ್ರಗಳನ್ನು ಹೇಳಿಕೊಟ್ಟರು.

ಸಾಹೇಬಗೌಡ ಪಾಟೀಲರು ಹಾಗೂ ವರ್ಲ್ಡ ಬುಕ್ ಆಫ್ ರೆಕಾರ್ಡ್ಸ ನಲ್ಲಿ ಸೇರ್ಪಡೆಗೊಂಡ ಸ್ಥಳೀಯ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕರಾದ ಡಿ.ಎಸ್.ಖಿಲಾರಿ ಮತ್ತು ಖಗೋಳ ದೂರದರ್ಶಕವನ್ನು ತಯಾರಿಸಿದ ಪ್ರತಿಭಾವಂತ ವಿದ್ಯಾರ್ಥಿ ಕೃಷ್ಣ ಕುಂಬಾರ ಹಾಗೂ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸಂಗಮೇಶ ಬುರ್ಲಿ ಮತ್ತು ಕಾರ್ಯದರ್ಶಿ ರಾಘವೇಂದ್ರ ಮಿಸಾಳೆ ಅವರನ್ನು ಸನ್ಮಾನಿಸಲಾಯಿತು.

ಸಾನ್ನಿಧ್ಯ ವೇ.ಮೂ.ಶ್ರೀ ರಾಚಯ್ಯನವರು, ಅಧ್ಯಕ್ಷತೆ ಅಪ್ಪಣ್ಣ ಐಹೊಳ್ಳಿ ಹಾಗೂ ಬಾಳು ಚಿನಕೇಕರ, ರಾವುತಪ್ಪ ಐಹೊಳ್ಳಿ, ಈರಣ್ಣ ಗುಚ್ಚೆಟ್ಟಿ, ಮಲ್ಲಯ್ಯ ಕಾಖಂಡಕಿ, ಅಶೋಕ ಕಳಸಗೊಂಡ, ಸಂಗನಗೌಡ ಪಾಟೀಲ, ಸಂಗಪ್ಪ ಸರಶೆಟ್ಟಿ, ಮಲ್ಲೇಶಪ್ಪ ಐಹೊಳ್ಳಿ, ಸಂಗಮೇಶ ಮತ್ತು ನಂದಪ್ಪ ಮಂಟೂರ, ವಿನೋದ ಕಲ್ಯಾಣಶೆಟ್ಟಿ, ಚೈತ್ರಾ ನಾಯಕ, ಜ್ಯೋತಿ ನಾಯಕ, ಅಶೋಕ ಚವ್ಹಾಣ, ವಿವೇಕಾನಂದ ಐಹೊಳ್ಳಿ, ಜಗನ್ನಾಥ ಇಂಗಳೇಶ್ವರ, ಅಣ್ಣುಗೌಡ ಬಿರಾದಾರ, ಸಿದ್ದನಗೌಡ ಬಿರಾದಾರ, ಶಿವಪುತ್ರಪ್ಪ ಜಾಡರ, ಸಿದ್ದಣ್ಣ ಕೆಂಗನಾಳ ಭಾಗವಹಿಸಿದ್ದರು.

ಶಾಲಾ ಮಕ್ಕಳಾದ ಸಂಚಿತ ಐಹೊಳ್ಳಿ, ಪ್ರಥಮ ಹತ್ತಿ, ನಕ್ಷತ್ರಾ ಮಂಟೂರ, ಅಟಲ್ ಬಬಲೇಶ್ವರ, ನಾನಾ ಸಬರದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.