ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆ ಸಾಧ್ಯತೆ: ರೆಡ್‌ ಅಲರ್ಟ್‌ ಘೋಷಣೆ

ಮಳೆಗೆ 127 ಮನೆಗಳಿಗೆ ಹಾನಿ; ಸಿಡಿಲು ಬಡಿದು ಎಮ್ಮೆ ಸಾವು
Last Updated 13 ಅಕ್ಟೋಬರ್ 2020, 12:15 IST
ಅಕ್ಷರ ಗಾತ್ರ

ವಿಜಯಪುರ: ಜಿಲ್ಲೆಯಲ್ಲಿ ಗುಡುಗು, ಸಿಡಿಲಿನೊಂದಿಗೆ ಮಂಗಳವಾರವೂ ಧಾರಾಕಾರ ಮಳೆಯಾಗಿದೆ.

ಬುಧವಾರ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆಯು ಜಿಲ್ಲೆಯಲ್ಲಿ ರೆಡ್‌ ಅಲರ್ಟ್‌ ಹಾಗೂ ಅ.15 ಮತ್ತು 16ರಂದು ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲೇ ಇದ್ದು, ಪ್ರವಾಹ ಪರಿಸ್ಥಿತಿ ಮತ್ತು ಮಳೆಯಿಂದ ಆಗಬಹುದಾದ ಅನಾಹುತಗಳಿಗೆ ತಕ್ಷಣ ಸ್ಪಂದಿಸುವಂತೆ ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌ ಸೂಚಿಸಿದ್ದಾರೆ.

ಸಂಪರ್ಕ ಕಡಿತ: ಡೋಣಿ ನದಿಯ ಪ್ರವಾಹದಿಂದ ತಾಳಿಕೋಟೆ–ಹಡಗಿನಾಳ ನೆಲಮಟ್ಟದ ಸೇತುವೆ ಹಾಗೂಸಾತಿಹಾಳದಲ್ಲಿ ದೇವರಹಿಪ್ಪರಗಿ–ಬಸವನ ಬಾಗೇವಾಡಿ ಮುಖ್ಯ ರಸ್ತೆಯಲ್ಲಿರುವ ಸಂಪರ್ಕ ಸೇತುವೆ ಜಲಾವೃತವಾಗಿದೆ.

ಸಿಡಿಲಿಗೆ ಎಮ್ಮೆ ಸಾವು: ಚಡಚಣ ತಾಲ್ಲೂಕಿನ ಹಾಲಳ್ಳಿ ಗ್ರಾಮದ ಶಿವರಾಜ ಮೋಟೆ ಎಂಬುವವರಿಗೆ ಸೇರಿದ ಎಮ್ಮೆಗೆ ಸೋಮವಾರ ರಾತ್ರಿ ಸಿಡಿಲು ಬಡಿದು ಸಾವಿಗೀಡಾಗಿದೆ.

127 ಮನೆಗಳಿಗೆ ಹಾನಿ: ಬಬಲೇಶ್ವರ 3, ತಿಕೋಟಾ 15, ಬಸವನ ಬಾಗೇವಾಡಿ 12, ಕೋಲ್ಹಾರ 24, ನಿಡಗುಂದಿ 12, ಮುದ್ದೇಬಿಹಾಳ 21, ತಾಳಿಕೋಟೆ 11, ಇಂಡಿ 5, ಸಿಂದಗಿ 20 ಮತ್ತು ದೇವರ ಹಿಪ್ಪರಗಿ ತಾಲ್ಲೂಕಿನಲ್ಲಿ 3 ಮನೆಗಳು ಸೇರಿದಂತೆಜಿಲ್ಲೆಯಲ್ಲಿ 127 ಮನೆಗಳಿಗೆ ಭಾಗಶಃ ಹಾನಿಯಾಗಿದೆ.

ಮಳೆ ವಿವರ: ಬಸವನ ಬಾಗೇವಾಡಿ 2.1 ಸೆಂ.ಮೀ. ಮಳೆಯಾಗಿದೆ. ಉಳಿದಂತೆ, ಮನಗೂಳಿ 3.5,ಆಲಮಟ್ಟಿ 3, ಹೂವಿನ ಹಿಪ್ಪರಗಿ 2.5, ಅರೇಶಂಕರ 1, ಮಟ್ಟಿಹಾಳ 2.5, ವಿಜಯಪುರ 2.1,ಭೂತನಾಳ 4.3, ಹಿಟ್ನಳ್ಳಿ 2, ತಿಕೋಟಾ 3.4, ಮಮದಾಪೂರ 1.8,ಕನ್ನೂರ 3.1,ಬಬಲೇಶ್ವರ 3.7,ಇಂಡಿ 1.4, ನಾದ ಬಿ. ಕೆ.1.5, ಹೊರ್ತಿ2.4,ಹಲಸಂಗಿ 1.6, ಚಡಚಣ 3.6,ತಾಳಿಕೋಟಿ 1.5,, ಸಿಂದಗಿ 2.5, ಆಲಮೇಲ 2.5,ರಾಮನಹಳ್ಳಿ 3.6, ಕಡ್ಲೆವಾಡ 1.5, ದೇವರಹಿಪ್ಪರಗಿ 2, ಕೊಂಡಗೂಳಿ 1.7 ಸೆಂ.ಮೀ. ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT