ಗುರುವಾರ , ನವೆಂಬರ್ 26, 2020
21 °C

ಹುಲಿ, ಕೃಷ್ಣಮೃಗ ಚರ್ಮ, ಉಗುರು ವಶ: ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ನಗರದಲ್ಲಿ ಹುಲಿ ಮತ್ತು ಕೃಷ್ಣ ಮೃಗದ ಚರ್ಮ ಹಾಗೂ ಹುಲಿಯ ಎರಡು ಉಗುರುಗಳನ್ನು ಮನೆಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿದ್ದ ಖಚಿತ ಮಾಹಿತಿ‌ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ, ಆರೋಪಿ ಮಹೇಶ ಹಿರೇಮಠ ಎಂಬಾತನನ್ನು ಬಂಧಿಸಿದೆ.

ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು  ಡಿಎಫ್‌ಒ ಅಶೋಕ ಪಾಟೀಲ ತಿಳಿಸಿದ್ದಾರೆ.

ಕಾರ್ಯಶಚರಣೆಯಲ್ಲಿ ಎಸಿಎಫ್ ಬಿ.ಪಿ.ಚವ್ಹಾಣ, ವಲಯ ಅರಣ್ಯ ಅಧಿಕಾರಿ ಪ್ರಭುಲಿಂಗ ಭುಯ್ಯಾರ, ಉಪ ವಲಯ ಅರಣ್ಯಾಧಿಕಾರಿ ಗುರು ಲೋಣಿ, ಸಿಬ್ಬಂದಿಗಳಾದ ಮಹಾದೇವಿ‌ ನಿಡಗುಂದಿ ಮಠ, ಬಸಮ್ಮ ಗೋನಾಳ, ಶಿವಾನಂದ ಮೇತ್ರಿ, ರವಿ ರಾಠೋಡ, ಆರ್.ಎಚ್. ಜಮಾದಾರ, ಅನೀಲ ಲೋಣಿ, ಸಿ.ಎಂ.ಪಟ್ಟಣಶಟ್ಟಿ, ಪ್ರವೀಣ ಅಂಗಡಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.