ತಾಳಿಕೋಟೆ: ಪಟ್ಟಣದಿಂದ ಮೂಕಿಹಾಳ ವರೆಗೆ ರಸ್ತೆ ದುರಸ್ತಿ ಕಾರ್ಯ ನಡೆದಿದ್ದು, ಪ್ರಯಾಣಿಕರಿಗಾಗಿ ಪಕ್ಕದ ಜಮೀನಿನಲ್ಲಿ ನಿರ್ಮಿಸಿರುವ ಸಮಾಂತರ ರಸ್ತೆಯಲ್ಲಿ ಮಂಗಳವಾರ ಟ್ರ್ಯಾಕ್ಟರ್ನ ಚಕ್ರಗಳು ಕೆಸರಲ್ಲಿ ಹೂತುಹೋಗಿ ಪ್ರಯಾಣಿಕರು ಪರದಾಡಿದರು.

ಟ್ರ್ಯಾಕ್ಟರ್ನ ಟ್ರಾಲಿಯಲ್ಲಿದ್ದ ಪ್ರಯಾಣಿಸುತ್ತಿದ್ದ 30ಕ್ಕೂ ಅಧಿಕ ಗ್ರಾಮಸ್ಥರು ಮಂಗಳವಾರ ಸಂಜೆ ಪರಿಪಾಟಲು ಅನುಭವಿಸುತ್ತ ತಮ್ಮ ಮಕ್ಕಳು, ಸರಂಜಾಮುಗಳನ್ನು ಹೊತ್ತು ಕೆಸರಲ್ಲೇ ಒಂದು ಕಿ.ಮೀ ದೂರದ ತಮ್ಮೂರು ಹಡಗಿನಾಳಕ್ಕೆ ಪಯಣಿಸಬೇಕಾಯಿತು.

ರಸ್ತೆ ಮಧ್ಯೆ ಸಿಡಿ(ಸೇತುವೆ) ನಿರ್ಮಾಣಕ್ಕಾಗಿ ರಸ್ತೆ ಅಗೆದಿದ್ದು ಪ್ರಯಾಣಿಕರಿಗಾಗಿ ಪಕ್ಕದ ಕಪ್ಪುಮಣ್ಣಿನ ಜಮೀನಿನಲ್ಲಿ ಸಮಾಂತರ ರಸ್ತೆ ಮಾಡಲಾಗಿದ್ದು ಮಳೆಯಿಂದ ನೀರು ನಿಂತು ಕೆಸರಿನ ರಸ್ತೆಯಾಗಿ ಪರಿಣಮಿಸಿತ್ತು. ಇದನ್ನು ತಿಳಿಯದೇ ಬಂದ ಟ್ರ್ಯಾಕ್ಟರ್ ಕೆಸರಲ್ಲೇ ನಿಲ್ಲಬೇಕಾಯ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.