ಕೊಲ್ಹಾರ: ಗೊಬ್ಬರ ಅಂಗಡಿ ಮಾಲೀಕರು ರೈತರಿಗೆ ಸಕಾಲದಲ್ಲಿ ಯೂರಿಯಾ ನೀಡಬೇಕು. ಅನಧಿಕೃತವಾಗಿ ಗೊಬ್ಬರ ಸಂಗ್ರಹಿಸಿದ್ದರೆ ಅಂತಹ ಅಂಗಡಿಯ ಪರವಾನಗಿ ರದ್ದು ಮಾಡಲಾಗುವುದು ಎಂದು ವಿಜಯಪುರ ಎ.ಸಿ ಗುರುನಾಥ ದಡ್ಡೆ ತಿಳಿಸಿದರು.

ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಹಾಗೂ ಕರವೇ ಕಾರ್ಯಕರ್ತರು ರೈತರಿಗೆ ಯೂರಿಯಾ ಗೊಬ್ಬರ ಮತ್ತು ಬೆಳೆ ಪರಿಹಾರ ಬೇಡಿಕೆಗಳ ಈಡೇರಿಕೆಗೆಗಾಗಿ ಸೋಮವಾರ ನಡೆದ ಪ್ರತಿಭಟನೆ ವೇಳೆ ಅವರು ಮಾತನಾಡಿದರು.

ರೈತರ ಬೆಳೆಗಳಿಗೆ ಬೆಳೆಹಾನಿ ಕುರಿತು ಶೀಘ್ರದಲ್ಲೇ ವರದಿ ಪಡೆದು ಪರಿಹಾರ ನೀಡಲಾಗುವುದು. ಬಳೂತಿ ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಾಣವಾದರೂ ಹಕ್ಕುಪತ್ರ ವಿತರಣೆ ಹಾಗೂ ಹಳ್ಳದ ಗೆಣ್ಣೂರ ಗ್ರಾಮದಲ್ಲಿನ ಸಾರ್ವಜನಿಕ ಸ್ಥಳಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ಹೋರಾಟ ಸ್ಥಳಕ್ಕೆ ಆಗಮಿಸಿದ ಕೊಲ್ಹಾರ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ‘ರೈತರಿಗೆ ಸರಿಯಾದ ಸಮಯಕ್ಕೆ ಗೊಬ್ಬರ ಹಾಗೂ ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಕ್ಕರೆ ಸರ್ಕಾರಕ್ಕೆ ರೈತ ಸಾಲ ಕೊಡಬಲ್ಲ. ಆದರೆ ಇಂದು ರೈತ ತನ್ನ ಗೊಬ್ಬರ ಪಡೆಯಲು ಹೋರಾಟ ಮಾಡಿ ಪಡೆಯುವ ದುಸ್ಥಿತಿ ಬಂದಿದೆ’ ಎಂದು ಹೇಳಿದರು.

ಪಟ್ಟಣದ ಮುಖಂಡ ಟಿ.ಟಿ ಹಗೇದಾಳ, ಜಿಲ್ಲಾ ರೈತ ಸಂಘದ ಅಧ್ಯಕ್ಷ ಸಂಗಮೇಶ ಸಗರ,ಕರವೇ ತಾಲ್ಲೂಕು ಅಧ್ಯಕ್ಷ ಮಹಾಂತೇಶ ಗಿಡ್ಡಪ್ಪಗೋಳ, ರವಿ ಗೊಳಸಂಗಿ, ಪ್ರದೀಪಗೌಡ ಪಾಟೀಲ, ತಹಶೀಲ್ದಾರ ಎಸ್.ಎಂ.ಮ್ಯಾಗೇರಿ, ಪಿಎಸ್ಐ ಎಂ.ಬಿ.ಬಿರಾದಾರ, ಉಪ ಕೃಷಿ ನಿರ್ದೇಶಕ ಶರಣಗೌಡ ಮಾತನಾಡಿದರು.

ಶಶಿಕಾಂತ ಬಿರಾದಾರ, ಮುದಕಪ್ಪ ಚಲವಾದಿ, ಶ್ರೀಶೈಲ ಬೆಣ್ಣೂರ, ಸುರೇಶ ಗಿಡ್ಡಪ್ಪಗೋಳ,ಗೋಪಾಲ ಕಾಖಂಡಕಿ, ಕಲ್ಲಪ್ಪ ಗಿಡ್ಡಪ್ಪಗೋಳ, ಬಸವರಾಜ ನ್ಯಾಮಗೊಂಡ,ಗುಳಪ್ಪ ಗುಗ್ಗರಿ,ಸತ್ಯಪ್ಪ ಕುಳೊಳ್ಳಿ ನೂರಾರು ರೈತರು ಹಾಗೂ ಕರವೇ ಕಾರ್ಯಕರ್ತರು ಪಾಲ್ಗೊಂಡಿದ್ದರು.

ರೈತರಿಗೆ ಶೀಘ್ರ ಯೂರಿಯಾ ಒದಗಿಸಿಕೊಡುವುದು ಮತ್ತು ಬೆಳೆಹಾನಿ ಪರಿಹಾರಕ್ಕೆ ಆದೇಶ ಮಾಡಬೇಕು ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಸರ್ಕಾರವೇ ಜವಾಬ್ದಾರಿ
ಸೋಮು ಬಿರಾದಾರ ಅಧ್ಯಕ್ಷ ಕರ್ನಾಟಕ ರಾಜ್ಯ ರೈತ ಸಂಘ ಕೊಲ್ಹಾರ

ಬಳೂತಿ ಗ್ರಾಮದ ಆಶ್ರಯ ಯೋಜನೆಯಲ್ಲಿ ನಿರ್ಮಿಸಿದ ಮನೆಯ ಮುಖ್ಯಸ್ಥರು ತಮ್ಮ ಮೂಲ ದಾಖಲೆಗಳನ್ನು ನೀಡಿದರೆ ತಕ್ಷಣ ಹಕ್ಕುಪತ್ರ ನೀಡುತ್ತೇವೆ
ಸುನೀಲ ಮದ್ದಿನ ಕಾರ್ಯನಿರ್ವಹಣಾಧಿಕಾರಿ ತಾಲ್ಲೂಕು ಪಂಚಾಯಿತಿ ಕೊಲ್ಹಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.