ಸಿಂದಗಿ: ವಿಜಯದಶಮಿ ಹಬ್ಬದ ದಿನದಂದು ಮಂಗಳವಾರ ಪಟ್ಟಣದ ಸಾರಂಗಮಠದ ಪದ್ಮರಾಜ ವಿದ್ಯಾವರ್ಧಕ ಸಂಸ್ಥೆಯ ಕಾಲೇಜು ಆವರಣದಲ್ಲಿ ಬನ್ನಿ ಮಹಾಂಕಾಳಿ ಮರದ ಕೆಳಗೆ ಸೀಮೋಲ್ಲಂಘನೆ ಕಾರ್ಯಕ್ರಮ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯಿತು.
ಇಲ್ಲಿಯ ಸಾರಂಗಮಠದದಿಂದ ಶ್ರೀಗಳು ಧರ್ಮದಂಡ ಹಿಡಿದುಕೊಂಡು ಭಕ್ತರ ಸಮೇತ ಬನ್ನಿ ಮಹಾಂಕಾಳಿ ಮರದ ಹತ್ತಿರ ಆಗಮಿಸಿದರು.
ಬನ್ನಿ ಮರದಡಿ ಧರ್ಮದಂಡ, ಶ್ರೀಮಠದ ಆಯುಧಗಳನ್ನು ಇಟ್ಟು ಪೂಜಿಸಲಾಯಿತು.
ಈ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು.
ಅಖಿಲ ಭಾರತೀಯ ವೀರಶೈವ ಮಹಾಸಭೆ ತಾಲ್ಲೂಕು ಶಾಖೆ ಅಧ್ಯಕ್ಷ ಅಶೋಕ ವಾರದ, ಲಿಂಬೆ ಅಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಅಶೊಕ ಅಲ್ಲಾಪೂರ, ಡಾ.ಮಹಾಂತೇಶ ಹಿರೇಮಠ, ವಿ.ಡಿ.ವಸ್ತ್ರದ, ಪ್ರೊ.ಎಂ.ಎಸ್.ಹಯ್ಯಾಳಕರ, ಸಾಹಿತಿ ಚನ್ನಪ್ಪ ಕಟ್ಟಿ, ಪ್ರಾಚಾರ್ಯ ವಿಮಲಾಕಾಂತ ಪಾಟೀಲ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ತಾಲ್ಲೂಕು ಶಾಖೆ ಅಧ್ಯಕ್ಷ ಶರಣಬಸವ ಜೋಗೂರ, ವಿವೇಕಾನಂದ ಸಾಲಿಮಠ, ಚಂದ್ರಶೇಖರ ಜೋಗೂರ, ಶ್ರೀಶೈಲ ನಂದಿಕೋಲ, ವಿಶ್ವನಾಥ ಜೋಗೂರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.