ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ | ಸಿಡಿಲು ಬಡಿದು ಮೆಹತರ್‌ ಮಹಲ್‌ ಮಿನಾರ್‌ಗೆ ಹಾನಿ

Published 18 ಏಪ್ರಿಲ್ 2024, 14:23 IST
Last Updated 18 ಏಪ್ರಿಲ್ 2024, 14:23 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಜುಮ್ಮಾ ಮಸೀದಿ ರಸ್ತೆಯಲ್ಲಿರುವ ಆದಿಲ್‌ ಶಾಹಿ ಅರಸರ ಕಾಲದ ಐತಿಹಾಸಿಕ ಸ್ಮಾರಕ ಮೆಹತರ್‌ ಮಹಲ್‌ಗೆ ಗುರುವಾರ ಸಂಜೆ ಸಿಡಿಲು ಬಡಿದು, ಮಿನಾರ್‌ನ ಗೋಪುರಕ್ಕೆ ಹಾನಿಯಾಗಿದೆ. 

ಮೆಹತರ್‌ ಮಹಲ್‌ ಎದುರು ರಸ್ತೆಯಲ್ಲಿ ನಿಲ್ಲಿಸಿದ್ದ ಒಂದು ಕಾರು, ಎರಡು ಬೈಕುಗಳ ಮೇಲೆ ಮಿನಾರ್‌ನ ಕಲ್ಲುಗಳು ಬಿದ್ದು, ಜಖಂ ಆಗಿವೆ. ಈ ಸಂದರ್ಭದಲ್ಲಿ ಸ್ಥಳದಲ್ಲಿ ಯಾರೂ ಇರದ ಕಾರಣ ಭಾರೀ ಅನಾಹುತ ತಪ್ಪಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸುಪರ್ದಿಯಲ್ಲಿರುವ ಈ ಸ್ಮಾರಕವನ್ನು 17ನೇ ಶತಮಾನದಲ್ಲಿ ಎರಡನೇ ಇಬ್ರಾಹಿಂ ಆದಿಲ್‌ಶಾಹ ನಿರ್ಮಿಸಿದ್ದರು. ಕಲೆ ಮತ್ತು ಸೌಂದರ್ಯಕ್ಕೆ ಈ ಸ್ಮಾರಕವು ಹೆಸರಾಗಿತ್ತು. 

‘ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಈ ಸ್ಮಾರಕಕ್ಕೆ ಸಿಡಿಲು ನಿರೋಧ ಯಂತ್ರವನ್ನು ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದ ಪರಿಣಾಮ ಘಟನೆ ನಡೆದಿದೆ. ಹಾನಿಯಾಗಿರುವ ಮಿನಾರ್‌ ಅನ್ನು ದುರಸ್ತಿಗೊಳಿಸಿ, ಅದರ ರಕ್ಷಣೆಗೆ ಆದ್ಯತೆ ನೀಡಬೇಕು’ ಎಂದು ಸ್ಥಳೀಯರಾದ ಪೀಟರ್‌ ಅಲೆಕ್ಸಾಂಡರ್‌ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT