ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ ಮಹಾನಗರ ಪಾಲಿಕೆ: ಮೀಸಲಾತಿ ಪ್ರಕಟ

ಚುನಾವಣೆಗೆ ಗರಿಗೆದರಿದ ರಾಜಕೀಯ ಚಟುವಟಿಕೆ
Last Updated 8 ಆಗಸ್ಟ್ 2022, 13:36 IST
ಅಕ್ಷರ ಗಾತ್ರ

ವಿಜಯಪುರ: ಮೂರು ವರ್ಷಗಳಿಂದ ಚುನಾವಣೆ ನಡೆಯದೇ ನನೆಗುದಿಗೆ ಬಿದ್ದಿದ್ದ ಹಾಗೂ ಅಧಿಕಾರಿಗಳ ದರ್ಬಾರಿಗೆ ಕಾರಣವಾಗಿದ್ದ ವಿಜಯಪುರ ಮಹಾನಗರ ಪಾಲಿಕೆಗೆ ಕೊನೆಗೂ ಕಾಲ ಕೂಡಿಬಂದಿದೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಬಳಿಕ ಚುನಾವಣೆ ನಡೆಸಲು ರಾಜ್ಯ ಸರ್ಕಾರ ಭರದ ಸಿದ್ಧತೆ ನಡೆಸಿದೆ.ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಆಕ್ಷೇಪ ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ರಾಜ್ಯ ಸರ್ಕಾರವು 35 ವಾರ್ಡ್‌ಗಳಿಗೆ ಸೋಮವಾರ ಮೀಸಲಾತಿ ಪ್ರಕಟಿಸಿದ್ದು, ನಗರದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ.

2011ರ ಜನಗಣಿತಿಯ ಆಧಾರದ ಮೇರೆಗೆ ನಗರಾಭಿವೃದ್ಧಿ ಪ್ರಾಧಿಕಾರವು ವಿಜಯಪುರ ಮಹಾನಗರ ಪಾಲಿಕೆಗೆ ಸಂಬಂಧಿಸಿದಂತೆ ವಾರ್ಡ್‌ವಾರು ಕರಡು ಮೀಸಲಾತಿಯನ್ನು ಪ್ರಕಟಿಸಿದೆ.‌

ಆಕ್ಷೇಪಣೆ ಸಲ್ಲಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಸಲಹೆ ಅಥವಾ ಆಕ್ಷೇಪಣೆ ಸಲ್ಲಿಸುವವರು ಲಿಖಿತವಾಗಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕದೊಳಗೆ ವಿಜಯಪುರ ಜಿಲ್ಲಾಧಿಕಾರಿ ಅವರಿಗೆ ಸಲ್ಲಿಸಬೇಕೆಂದು ಸೂಚಿಸಲಾಗಿದೆ.

ವಾರ್ಡ್‌ವಾರು ಮೀಸಲಾತಿ:

ವಾರ್ಡ್ ನಂ.1: ಹಿಂದುಳಿದ ವರ್ಗ ’ಎ’ ಮಹಿಳೆ, ವಾರ್ಡ್ ನಂ.2: ಪರಿಶಿಷ್ಟ ಜಾತಿ, ವಾರ್ಡ್ ನಂ.3: ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.4: ಸಾಮಾನ್ಯ, ವಾರ್ಡ್ ನಂ.5: ಹಿಂದುಳಿದ ವರ್ಗ ‘ಬಿ’ ಮಹಿಳೆ, ವಾರ್ಡ್ ನಂ.6: ಸಾಮಾನ್ಯ, ವಾರ್ಡ್ ನಂ.7: ಹಿಂದುಳಿದ ವರ್ಗ ‘ಎ’, ವಾರ್ಡ್ ನಂ.8: ಸಾಮಾನ್ಯ ಮಹಿಳೆ, ವಾರ್ಡ್ ನಂ.9: ಹಿಂದುಳಿದ ವರ್ಗ ‘ಬಿ’, ವಾರ್ಡ್ ನಂ.10: ಸಾಮಾನ್ಯ.

ವಾರ್ಡ್ ನಂ.11: ಪರಿಶಿಷ್ಟ ಜಾತಿ, ವಾರ್ಡ್ ನಂ.12: ಸಾಮಾನ್ಯ, ವಾರ್ಡ್ ನಂ.13: ಹಿಂದುಳಿದ ವರ್ಗ ‘ಎ’, ವಾರ್ಡ್ ನಂ.14: ಪರಿಶಿಷ್ಟ ಜಾತಿ ಮಹಿಳೆ, ವಾರ್ಡ್ ನಂ.15: ಸಾಮಾನ್ಯ ಮಹಿಳೆ, ವಾರ್ಡ್ ನಂ.16: ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ನಂ.17: ಸಾಮಾನ್ಯ, ವಾರ್ಡ್ ನಂ.18: ಪರಿಶಿಷ್ಟ ಪಂಗಡ, ವಾರ್ಡ್ ನಂ.19: ಸಾಮಾನ್ಯ, ವಾರ್ಡ್ ನಂ.20: ಹಿಂದುಳಿದ ವರ್ಗ ’ಎ’.

ವಾರ್ಡ್ ನಂ.21: ಸಾಮಾನ್ಯ ಮಹಿಳೆ, ವಾರ್ಡ್ ನಂ.22: ಹಿಂದುಳಿದದ ವರ್ಗ ‘ಎ’ ಮಹಿಳೆ, ವಾರ್ಡ್ ನಂ.23: ಸಾಮಾನ್ಯ, ವಾರ್ಡ್ ನಂ.24: ಸಾಮಾನ್ಯ, ವಾರ್ಡ್ ನಂ.25: ಹಿಂದುಳಿದ ವರ್ಗ ‘ಎ’, ವಾರ್ಡ್ ನಂ.26: ಸಾಮಾನ್ಯ ಮಹಿಳೆ, ವಾರ್ಡ್ ನಂ.27: ಹಿಂದುಳಿದ ವರ್ಗ ‘ಎ’ ಮಹಿಳೆ, ವಾರ್ಡ್ ನಂ.28: ಸಾಮಾನ್ಯ, ವಾರ್ಡ್ ನಂ.29: ಪರಿಶಿಷ್ಟ ಜಾತಿ, ವಾರ್ಡ್ ನಂ.30: ಹಿಂದುಳಿದ ವರ್ಗ ‘ಎ’.

ವಾರ್ಡ್ ನಂ.31: ಸಾಮಾನ್ಯ ಮಹಿಳೆ, ವಾರ್ಡ್ ನಂ.32: ಸಾಮಾನ್ಯ ಮಹಿಳೆ, ವಾರ್ಡ್ ನಂ.33: ಸಾಮಾನ್ಯ ಮಹಿಳೆ, ವಾರ್ಡ್ ನಂ 34: ಸಾಮಾನ್ಯ ಮಹಿಳೆ, ವಾರ್ಡ್ ನಂ.35: ಸಾಮಾನ್ಯ ಮಹಿಳೆಗೆ ಮೀಸಲಿರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT