ವಿಜಯಪುರ: ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಟ್ಯಾಂಕರ್‌ನಿಂದ ಸೋರಿಕೆಯಾದ ಡಿಸೇಲ್ ತುಂಬಿಕೊಳ್ಳಲು ಜನ ಮುಗಿ ಬಿದ್ದಿರುವ ಘಟನೆ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಹೈಪರ್ ಮಾರ್ಟ್ ಬಳಿ ಡಿಸೇಲ್ ಟ್ಯಾಂಕರ್ ಉರುಳಿ ಬಿದ್ದಿದೆ. ಸ್ಥಳಕ್ಕೆ ಭೇಟಿ ನೀಡಿದ ಸುತ್ತಮುತ್ತಲಿನ ಜನರು ತಮ್ಮ ಬಳಿ ಇದ್ದ ಬಾಟಲ್, ಬಕೆಟ್, ಸಿಕ್ಕಿ ಸಿಕ್ಕ ವಸ್ತುಗಳಲ್ಲಿ ಡೀಸೆಲ್ ತುಂಬಿಕೊಂಡು ಹೋದರು.

ಟ್ಯಾಂಕರ್‌ನಿಂದ ಅಪಾರ ಪ್ರಮಾಣದ ಡೀಸೆಲ್ ಸೋರಿಕೆಯಾಗಿದ್ದು, ರಸ್ತೆ ಪಕ್ಕದ ಗುಂಡಿಯಲ್ಲಿ ಶೇಖರವಾಗಿದೆ. ಅಲ್ಲಿಯೂ ಜನರು ಮುಗಿಬಿದ್ದು ಡೀಸೆಲ್ ತುಂಬಿಕೊಂಡು ಹೋದರು.

ಸ್ಥಳಕ್ಕೆ ಗೋಳಗುಮ್ಮಟ ಪೊಲೀಸರು ಭೇಟಿ ನೀಡಿ, ಜನರನ್ನು ದೂರ ಚದುರಿಸಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಯಾವುದೇ ಅನಾಹುತವಾಗದಂತೆ ಎಚ್ಚರಿಕೆ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.