ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಡೀ ಸುರಿದ ಭಾರೀ ಮಳೆಗೆ ಹಳ್ಳ,ಕೊಳ್ಳಗಳು ಉಕ್ಕಿ ಹರಿದಿವೆ.
ತಿಕೋಟಾ ತಾಲ್ಲೂಕಿನ ಕಳ್ಳಕವಟಗಿ ಗ್ರಾಮದ ಸಂಗಮನಾಥ ಹಳ್ಳವು ಬರಪೂರ ಹರಿಯುತ್ತಿದ್ದು ಸೇತುವೆ ಮೇಲಿಂದ ನೀರು ಹರಿಯುತ್ತಿದೆ.
ವಿಜಯಪುರಕ್ಕೆ ಹೋಗುವ ಜಾಲಗೇರಿ, ಹುಬನೂರ ರಸ್ತೆಗಳಲ್ಲಿ ಸಂಚಾರ ಕೆಲಕಾಲ ಸ್ಥಗಿತವಾಗಿತ್ತು.
ಗರ್ಭಗುಡಿಗೆ ನುಗ್ಗಿದ ನೀರು:
ಸಂಗಮನಾಥ ದೇವಸ್ಥಾನದಲ್ಲಿ ಏಳೆಂಟು ಅಡಿ ನೀರು ಗರ್ಭಗುಡಿಯಲ್ಲಿ ನಿಂತಿದ್ದರಿಂದ ಇಂದಿನ ಪೂಜಾ ಕೈಂಕರ್ಯ ನೆರವೇರಿಲ್ಲ.
ಮಧ್ಯಾಹ್ನ ನೀರು ಗರ್ಭಗುಡಿಯಲ್ಲಿ ಇಳಿಕೆಯಾದರೆ ಪೂಜೆ ನೆರವೇರುವದು ಎಂದು ಅರ್ಚಕ ಮಲ್ಲಯ್ಯ ಹಿರೇಮಠ ತಿಳಿಸಿದರು.
ಸಂಗಮನಾಥನ ಆವರಣ ಸಂಪೂರ್ಣ ನೀರಿನಿಂದ ತುಂಬಿದ್ದು ದರ್ಶನ ಇಲ್ಲದಂತಾಗಿದೆ. ದೂರಿನಿಂದಲೇ ಜನ ನಮಸ್ಕಾರ ಮಾಡುತ್ತಿದ್ದಾರೆ.