ಬುಧವಾರ, ಜುಲೈ 28, 2021
29 °C

ವಿಜಯಪುರ: ಗೋಳಗುಮ್ಮಟ ವೀಕ್ಷಣೆಗೆ ಮುಕ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಯಪುರ: ಇಲ್ಲಿನ ಪ್ರಸಿದ್ಧ ಪ್ರವಾಸಿ ತಾಣಗಳಾದ ಗೋಳಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ಆದಿಲ್ ಶಾಹಿಗಳ ಎಲ್ಲ ಸ್ಮಾರಕಗಳು ಪ್ರವಾಸಿಗರ ವೀಕ್ಷಣೆಗೆ ಸೋಮವಾರದಿಂದ ಮುಕ್ತವಾಗುತ್ತಿವೆ.

ಬೆಳಿಗ್ಗೆ 6ರಿಂದ ಸಂಜೆ 6ರ ವರೆಗೆ ವೀಕ್ಷಣೆಗೆ ಅವಕಾಶ ಇದೆ. ಪ್ರವಾಸಿಗರಿಗೆ ಗ್ರೂಪ್ ಫೋಟೊ ತೆಗೆಯಲು ಅವಕಾಶ ಇರುವುದಿಲ್ಲ. ಪರಸ್ಪರ ಅಂತರ ಕಾಯ್ದುಕೊಳ್ಳಬೇಕು, ಪ್ರವೇಶ ಶುಲ್ಕವನ್ನು ಕ್ಯೂಆರ್ ಕೋಡ್ ಸ್ಕ್ಯಾನ್‌ ಮಾಡಿ ಪೇ ಮಾಡಬೇಕು. ಸ್ಯಾನಿಟೈಜಿಂಗ್, ಮಾಸ್ಕ್ ಕಡ್ಡಾಯವಾಗಿ ಧರಿಸಬೇಕು ಎಂಬ ನಿರ್ಬಂಧ ವಿಧಿಸಲಾಗಿದೆ ಎಂದು ಭಾರತೀಯ ಸರ್ವೇಕ್ಷಣಾಲಯ(ಎಎಸ್ಐ) ಅಧಿಕಾರಿಗಳು ತಿಳಿಸಿದ್ದಾರೆ. 

ಇದೇ ವೇಳೆ ಆಲಮಟ್ಟಿ ಉದ್ಯಾನ ವೀಕ್ಷಣೆಗೆ ಸದ್ಯ ನಿರ್ಬಂಧ ತೆರವುಗೊಳಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು