ವಿಜಯಪುರ: ಸಾರ್ವಜನಿಕ ಗಣಪತಿ ವಿಸರ್ಜನೆಯನ್ನು ಡಿಜೆ ಅಬ್ಬರದಲ್ಲಿ ರಾತ್ರಿ, ಬೆಳಗಿನವರೆಗೆ ಮಾಡುವ ಬದಲಿಗೆ ಆದಷ್ಟು ಹಗಲು ಹೊತ್ತಿನಲ್ಲೇ ದೇಸಿ ಕಲಾತಂಡಗಳೊಂದಿಗೆ ರಾತ್ರಿ 10 ಗಂಟೆ ಒಳಗೆ ವಿಸರ್ಜಿಸಲು ಆದ್ಯತೆ ನೀಡಿದರೆ ಸಾರ್ವಜನಿಕರು ವೀಕ್ಷಿಸಿ, ಆನಂದಿಸುತ್ತಾರೆ. ಇದರಿಂದ ಎಲ್ಲರಿಗೂ ಅನುಕೂಲವಾಗಲಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹೇಳಿದರು.

ಜಿಲ್ಲಾಡಳಿತದಿಂದ ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಗಣೇಶೋತ್ಸವ, ಈದ್ ಮಿಲಾದ್ ಅಂಗವಾಗಿ ಆಯೋಜಿಸಿದ್ದ ಜಿಲ್ಲಾಮಟ್ಟದ ಶಾಂತಿ ಪಾಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ 2,751 ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆ ಆಗಲಿವೆ ಹಾಗೂ 35 ಕಡೆ ಈದ್ ಮಿಲಾದ್ ಮೆರವಣಿಗೆ ನಡೆಯಲಿದೆ. ಹಬ್ಬಗಳ ಸಂದರ್ಭದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಜಿಲ್ಲೆಯಾದ್ಯಂತ ಸಾರ್ವಜನಿಕರು, ಅಧಿಕಾರಿಗಳು, ಪೊಲೀಸರ ಜೊತೆಗೂಡಿ 150 ಶಾಂತಿ ಪಾಲನಾ ಸಭೆ ನಡೆಸಲಾಗಿದೆ’ ಎಂದರು.

‘ಸಾರ್ವಜನಿಕ ಸ್ಥಳಗಳಲ್ಲಿ ಗಣೇಶ ಮೂರ್ತಿ ಕೂರಿಸುವಾಗ ಸಾರ್ವಜನಿಕರಿಗೆ ಯಾವುದೇ ರೀತಿ ಅಡಚಣೆ, ಸಂಚಾರ ಅಡಚಣೆ ಆಗುವಂತಿಲ್ಲ, ಮೂರ್ತಿ ಮೆರವಣಿಗೆ ಸಾಗುವ ಮಾರ್ಗಗಳಲ್ಲಿ ಕಟ್ಟೆಚ್ಚರ ವಹಿಸಬೇಕಾಗುತ್ತದೆ’ ಎಂದರು.

‘ಗಣೇಶ ಮೂರ್ತಿ ಕೂರಿಸಲು ಪಾಲಿಕೆ, ಪುರಸಭೆ, ಹೆಸ್ಕಾಂ, ಪೊಲೀಸ್ ಸೇರಿದಂತೆ ಅಗತ್ಯ ಇಲಾಖೆಗಳ ಅನುಮತಿ ಪಡೆಯಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ತಿಳಿಸಿದರು.

‘ಗಣಪತಿ ಕೂರಿಸುವ ಸ್ಥಳದಲ್ಲಿ 24x7 ಕಡ್ಡಾಯವಾಗಿ ಸಂಘಟಕರೇ ಕಾವಲಿಗೆ ಇರಬೇಕು, ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು, ಗಣಪತಿ ವಿಸರ್ಜನೆ ಬಳಿಕ ಅದೇ ಸಿಸಿಟಿವಿ ಕ್ಯಾಮೆರಾಗಳನ್ನು ನಿಮ್ಮ ಓಣಿಗಳಲ್ಲಿ ಅಥವಾ ಅಗತ್ಯ ಇರುವಲ್ಲಿ ಅಳವಡಿಸಿಕೊಳ್ಳಬಹುದಾಗಿದೆ’ ಎಂದರು.

ಹೆಸ್ಕಾಂ ಸಿಬ್ಬಂದಿ ಗಣಪತಿ ಕೂರಿಸುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಅಗ್ನಿ ಅನಾಹುತ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು, ವಿಸರ್ಜನಾ ಸ್ಥಳಗಳನ್ನು ಮೊದಲೇ ಗುರುತಿಸಬೇಕು, ಅಲ್ಲಿ ಬೆಳಕಿನ ವ್ಯವಸ್ಥೆ ಆಗಬೇಕು, ಯಾವುದೇ ಅವಘಡ ಆಗದಂತೆ ಮುಂಜಾಗ್ರತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಫೇಸ್ ಬುಕ್, ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು, ಪ್ರಚೋದನಾಕಾರಿ, ತಪ್ಪು ಮಾಹಿತಿ ಹಾಗೂ ಇನ್ನೊಂದು ಸಮಾಜವನ್ನು ಕೆರಳಿಸುವ ಮಾಹಿತಿ ಹಂಚಿಕೊಳ್ಳುವಂತಿಲ್ಲ, ಊಹಾಪೂಹಗಳಿಗೆ ಕಿವಿಗೊಡಬಾರದು ಶಾಂತಿ, ಸೌಹಾರ್ದದಿಂದ ಹಬ್ಬ ಅಚರಿಸಬೇಕು ಎಂದು ಹೇಳಿದರು.

‘ಫ್ಲೆಕ್ಸ್, ಬ್ಯಾನರ್, ಕಟೌಟ್ಗಳನ್ನು ಮುದ್ರಿಸುವ ಮುನ್ನಾ ಪ್ರಿಂಟಿಂಗ್ ಪ್ರೆಸ್ ಮಾಲೀಕರು ಜಾಗೃತಿ ವಹಿಸಬೇಕು. ಮುದ್ರಣಕ್ಕಿಂತ ಮೊದಲು ವಿಷಯವನ್ನು ಓದಬೇಕು, ಸಮಾಜದ ಶಾಂತಿ ಕದಡುವ ವಿಷಯ ಮುದ್ರಿಸುವಂತಿಲ್ಲ, ಈ ಬಗ್ಗೆ ಪೊಲೀಸ್ ಗಮನಕ್ಕೆ ತರಬೇಕು’ ಸೂಚಿಸಿದರು.

ಹಬ್ಬದ ವೇಳೆ ಇಸ್ಪೀಟ್ ಸೇರಿದಂತೆ ಯಾವುದೇ ಜೂಜಾಟಗಳನ್ನು ಆಡಲು ಅವಕಾಶವಿಲ್ಲ, ಕಾನೂನು ಬಾಹಿರ ಚಟುವಟಿಕೆಗಳಿಗೆ ಅವಕಾಶವಿಲ್ಲ ಎಂದರು.

ಗಣೇಶ ವಿಸರ್ಜನೆ ವೇಳೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವಂತಿಲ್ಲ, ಮಾಡಿದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

‘ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಬದಲಿಗೆ ದೇಸಿ ಕಲಾತಂಡಗಳಿಗೆ ಅವಕಾಶ ಕಲ್ಪಿಸುವುದು ಉತ್ತಮ. ಇದರಿಂದ ನಮ್ಮ ಜಾನಪದ ಕಲಾತಂಡಗಳಿಗೆ ಪ್ರೋತ್ಸಾಹ ಸಿಗುವುದರಿಂದ ಅವುಗಳು ಉಳಿದು, ಬೆಳೆಯಲು ಸಹಕಾರಿಯಾಗಲಿದೆ. ಕಲಾತಂಡಗಳಿಗೂ ಆದಾಯ ಸಿಗಲಿದೆ’ ಎಂದು ಸಲಹೆ ನೀಡಿದವರು.

ಪಟಾಕಿ ಮಾರಾಟಗಾರರು ಸುರಕ್ಷತಾ ಕ್ರಮಕೈಗೊಳ್ಳಬೇಕು. ಯಾವುದೇ ದುರ್ಘಟನೆಗಳಿಗೆ ಆಸ್ಪದ ಸಿಗದಂತೆ ಎಚ್ಚರ ವಹಿಸಬೇಕು ಎಂದರು.

ಮಣ್ಣಿನಿಂದ ತಯಾರಿಸಿದ ಗಣಪತಿ ಮೂರ್ತಿ ಕೂರಿಸಿ, ಪರಿಸರ ಸ್ನೇಹಿಯಾಗಿ ಹಬ್ಬ ಆಚರಿಸಿ, ಗಣಪತಿ ಕೂರಿಸುವ ವಿಷಯದಲ್ಲಿ ಸ್ಪರ್ಧೆ ಬೇಡ, ಭಕ್ತಿ, ಸಡಗರದಿಂದ ಆಚರಿಸಿ ಎಂದರು.

ಜಿಲ್ಲಾಧಿಕಾರಿ ಡಾ.ಆನಂದ್ ಕೆ., ಜಿ.ಪಂ.ಸಿಇಒ ರಿಷಿ ಆನಂದ್, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್ ಮೆಕ್ಕಳಕಿ, ಎಎಸ್ ಪಿ ರಾಮಗೌಡ ಹಟ್ಟಿ, ಡಿಎಸ್ಪಿ ಬಸವರಾಜ ಯಲಿಗಾರ ಇದ್ದರು.

ವಿಜಯಪುರ ಐತಿಹಾಸಿಕ ಜಿಲ್ಲೆಯಾಗಿದ್ದು ಇಲ್ಲಿಯ ಜನರು ಶತ ಶತಮಾನದಿಂದ ಪರಸ್ಪರ ಸೌಹಾರ್ದದಿಂದ ಬಾಳಿದ್ದಾರೆ. ಸೌಹಾರ್ದ ಕೆಡಿಸುವ ಪಟ್ಟಭದ್ರ ಹಿತಾಶಕ್ತಿಗಳಿಗೆ ಕಿವಿಗೊಡಬೇಡಿ
ಲಕ್ಷ್ಮಣ ನಿಂಬರಗಿ ಎಸ್ಪಿ ವಿಜಯಪುರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.