ಸಿಂದಗಿ: ಪಟ್ಟಣದ ಸ.ನಂ.842 ದಲ್ಲಿ ವಾಸವಾಗಿದ್ದ 84 ಕುಟುಂಬಗಳು ಪುರಸಭೆಯಿಂದ ಹಕ್ಕುಪತ್ರ, ಕಟ್ಟಡದ ಅನುಮತಿ ಪಡೆದು ಸ್ವಂತ ಸೂರು ಮಾಡಿಕೊಂಡಿದ್ದವರನ್ನು ಬೀದಿ ಪಾಲಾಗಿದ್ದಾರೆ. ಇದಕ್ಕೆಲ್ಲ ಪುರಸಭೆ ಆಡಳಿತ ಸರಿಯಾಗಿ ಸ್ಪಂದನೆ ಮಾಡದಿರುವುದೇ ಪ್ರಮುಖ ಕಾರಣವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಪುರಸಭೆ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು.

ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ನಿರಾಶ್ರಿತರ ಹೋರಾಟಕ್ಕೆ ಬೆಂಬಲಿಸಿ ಅವರು ಮಾತನಾಡಿದರು.

ವೃದ್ಧರು, ಮಕ್ಕಳು ಮಳೆ, ಗಾಳಿಯಲ್ಲೂ ಬೀದಿಯಲ್ಲಿ ಸಂಕಷ್ಟ ಪಡುತ್ತಿರುವ ದೃಶ್ಯ ಕಂಡಾಗ ಕರುಳು ಚುರ್ ಅನ್ನುತ್ತದೆ. ಸ.ನಂ 842 ಜಮೀನು ಗೊಂದಲದ ಗೂಡಾಗಿದೆ. ಜಮೀನಿನ ದಾಖಲೆಗಳ ತಿದ್ದುಪಡಿಯಾಗಿರುವ ಬಲವಾದ ಶಂಕೆ ಕೇಳಿ ಬರುತ್ತಿದೆ. ಈ ಕುರಿತು ತನಿಖೆಯಾಗಿ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಕುಟುಂಬಗಳೆಲ್ಲ ಬೀದಿಗೆ ಬಂದಿದ್ದರೂ ತಾಲ್ಲೂಕು ಆಡಳಿತ, ಪುರಸಭೆ, ಶಾಸಕರು ಏನು ಮಾಡುತ್ತಿದ್ದಾರೆ. ತಾವು ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ನಿರಾಶ್ರಿತ 84 ಕುಟುಂಬಗಳಿಗೆ ತಕ್ಷಣವೇ ತಾತ್ಪೂರ್ತಿಕ ಪುಪುನರ್ವಸತಿ ಶೆಡ್ಗಳನ್ನು ಹಾಕಿಕೊಡಬೇಕು. ಧರಣಿನಿರತ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ತಾಲ್ಲೂಕು ಆಡಳಿತ, ಪುರಸಭೆ ಮತ್ತು ಮತಕ್ಷೇತ್ರದ ಶಾಸಕರು ಇನ್ನಾದರೂ ಎಚ್ಚೆತ್ತುಕೊಳ್ಳದಿದ್ದರೆ ರೈತ ಸಂಘ ಉಗ್ರವಾದ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಭೀಮೂ ರತ್ನಾಕರ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಿಚಾರವಾದ) ರಾಜ್ಯ ಸಂಚಾಲಕ ರಾಕೇಶ ಕಾಂಬಳೆ ಮಾತನಾಡಿದರು.

ಒಕ್ಕಲೆಬ್ಬಿಸುವುದು ಆಡಳಿತ ವೈಖರಿಯೇ?

ಸಿಂದಗಿ: ಪಟ್ಟಣದಲ್ಲಿ ರಸ್ತೆ ವಿಸ್ತರಣೆ ಹೆಸರಿನಲ್ಲಿ ಬಡ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿದರು. ಕಾಳಿಕಾನಗರ ಉದ್ಯಾನದಲ್ಲಿದ್ದ ಬಡಜನತೆ ಮನೆಗಳನ್ನು ನೆಲಸಮಗೊಳಿಸಲಾಯಿತು. ಖಬರಸ್ಥಾನ ಜಾಗೆಯಲ್ಲಿದ್ದ ಸಣ್ಣ-ಪುಟ್ಟ ಬಡ ವ್ಯಾಪಾರಿಗಳನ್ನು ತೆರುವುಗೊಳಿಸಲಾಯಿತು. ಈಗ 84 ಕುಟುಂಬಗಳ ಮನೆಗಳು ನೆಲಸಮಗೊಂಡವು.

ಹೀಗೆ ಬಡವರನ್ನು ಒಕ್ಕಲೆಬ್ಬಿಸುವುದೇ ಪ್ರಸ್ತುತ ಆಡಳಿತ ವೈಖರಿಯಾಗಿದೆ. ತಾಲ್ಲೂಕು ಆಡಳಿತ ಪುರಸಭೆ ಹೃದಯಹೀನವಾಗಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.