ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮರಗೋಳದಲ್ಲಿ ವಿಭಿನ್ನ ಮೊಹರಂ ಆಚರಣೆ: ಅಗ್ನಿಕುಂಡದ ಮೇಲೆ ಕಂಬಳಿ ಹಾಸಿ ಕೂತ ಭಕ್ತ!

Published 29 ಜುಲೈ 2023, 13:29 IST
Last Updated 29 ಜುಲೈ 2023, 13:29 IST
ಅಕ್ಷರ ಗಾತ್ರ

ಮುದ್ದೇಬಿಹಾಳ (ವಿಜಯಪುರ ಜಿಲ್ಲೆ): ತಾಲ್ಲೂಕಿನ ಅಮರಗೋಳ ಗ್ರಾಮದಲ್ಲಿ ಶನಿವಾರ ಮೊಹರಂ ಅಂಗವಾಗಿ ಅಲಾಯ್ ದೇವರ ಮುಂದೆ ಹಾಕಿದ ಅಗ್ನಿಕುಂಡದ ಮೇಲೆ ಭಕ್ತರೊಬ್ಬರು ಕಂಬಳಿ ಹಾಸಿ ಕೂತು, ಭಕ್ತಿ ಪರಾಕಾಷ್ಠೆ ಮೆರೆದಿದ್ದಾರೆ. 

ಅಮರಗೋಳದ ಗ್ರಾಮದ  ಹೊರಗಿನ ಮಸೀದಿಯ ಲಾಲ್‍ಸಾಬ್ ದೇವರ ಮುಂದೆ ಹಾಕಿದ್ದ ಅಗ್ನಿಕುಂಡದಲ್ಲಿದ್ದ ನಿಗಿನಿಗಿ ಕೆಂಡದ ಮೇಲೆ ಐದು ಸೆಕೆಂಡ್ ಕಂಬಳಿ ಹಾಸಿ ಕೂತ ಗ್ರಾಮದ ಭಕ್ತ ಯಲ್ಲಾಲಿಂಗ ಹಿರೇಹಾಳ,  ಅಲಾಯ್ ದೇವರಿಗೆ ಭಕ್ತಿ ಸಮರ್ಪಿಸಿದ್ದಾರೆ.

ನಂತರ ಬರಿಗೈಯಲ್ಲಿ ಧೂಪಕ್ಕೆ ಕೆಂಡ ತುಂಬಿ ಅಲಾಯ್ ದೇವರಿಗೆ ಕೆಂಡದಾರತಿ ಮಾಡಿದ್ದಾರೆ. ಯಲ್ಲಾಲಿಂಗನ ಭಕ್ತಿ ಪರಾಕಾಷ್ಠೆಯನ್ನು ಗ್ರಾಮಸ್ಥರು ಕುತೂಹಲದಿಂದ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT