ತಾಳಿಕೋಟೆ: ಹೆತ್ತವರಲ್ಲಿ, ಗುರುಹಿರಿಯರಲ್ಲಿ, ಅತಿಥಿಗಳಲ್ಲಿ ಗೌರವ, ಪರೋಪಕಾರಗಳಂತಹ ಈ ನೆಲದ ಶ್ರೇಷ್ಠ ಸಂಸ್ಕೃತಿಯನ್ನು ಮಕ್ಕಳಲ್ಲಿ ಬೆಳೆಸಿ. ಭಾರತ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠವಾದ ಉತ್ತಮ ಸಂಸ್ಕೃತಿ ಕೊಟ್ಟು ವಿಶ್ವಗುರುವಾಗಿದ್ದ ಭಾರತದೇಶಕ್ಕೆ ಗತ ವೈಭವ ತರಲು ಹಿಂದೂಗಳು ಸಂಘಟಿತರಾದಾಗ ಮಾತ್ರ ಸಾಧ್ಯ ಎಂದು ಬೆಂಗಳೂರಿನ ಸಾಮಾಜಿಕ ಕಾರ್ಯಕರ್ತ ನ. ತಿಪ್ಪೆಸ್ವಾಮಿ ಹೇಳಿದರು.

ಪಟ್ಟಣದ ಎಸ್.ಕೆ.ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ವಿರಾಟ ಹಿಂದೂ ಸಮಾವೇಶದಲ್ಲಿ ಮಾತನಾಡಿದರು.

ಜಾಗೃತ ಸಮಾಜ, ಸಂಘಟಿತ ಸಮಾಜ ಮಾತ್ರ ಎಲ್ಲ ಸಮಸ್ಯೆಗಳನ್ನು ಎದುರಿಸಿನಿಲ್ಲಬಹುದು. ಆದ್ದರಿಂದ ಹಿಂದೂ ಸಮಾಜವನ್ನು ಬಂಧುಗಳನ್ನು ಒಗ್ಗೂಡಿಸುವ ಕೆಲಸ ನಡೆಯುತ್ತಿದೆ. ಜಗತ್ತಿನಲ್ಲಿ ಶ್ರೇಷ್ಠ ವ್ಯವಸ್ಥೆ ನಮ್ಮ ಕುಟುಂಬ ವ್ಯವಸ್ಥೆ. ಆದರೆ ಇಂದು ಈ ಕುಟುಂಬಗಳನ್ನು, ಸಂಸ್ಕೃತಿ ನಮ್ಮ ಯುವಕರನ್ನು ಹಾಳು ಮಾಡುವ ಅನೇಕ ಸಂಗತಿಗಳು ಸಮಾಜದಲ್ಲಿ ನಡೆಯುತ್ತಿವೆ. ಇವುಗಳ ಬಗ್ಗೆ ಜಾಗೃತರಾಗಿ ನಮ್ಮ ಅಸ್ಮಿತೆ ಉಳಿಸಬೇಕಿದೆ. ಪಾಶ್ಚಿಮಾತ್ಯ ಅನುಕರಣೆಯನ್ನು ಬಿಟ್ಟು, ಒಟ್ಟಿಗೆ ಬಾಳುವ ಭಾರತೀಯ ಸಂಸ್ಕೃತಿ ರೂಢಿಸಬೇಕು ಎಂದರು.

ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ನಾಶ ಮಾಡುವ ವ್ಯವಸ್ಥೆ ಹುನ್ನಾರವಾಗಿ. ಶಾಲೆಗಳ ಪಕ್ಕದಲ್ಲಿ ಡ್ರಗ್ಸ್ ಮಾರಾಟ ನಡೆದಿದೆ. ಹಳ್ಳಿಗಳಲ್ಲಿ ಕುಡಿತದ ವ್ಯಸನಿಗಳಾಗಿ ಯುವಕರೇ ಹೆಚ್ಚಾಗಿ ಸಾವಿಗೀಡಾಗುತ್ತಿದ್ದಾರೆ. ನಮ್ಮ ಜೀವನ ಮೌಲ್ಯಗಳನ್ನು, ಕುಟುಂಬ, ಶಾಲೆ, ಸಮಾಜದಲ್ಲಿ ರೂಪಿಸುವ ಅಗತ್ಯತೆ ಇದೆ. ಹಿಂದು ಎಂದರೆ ಸಂಕುಚಿತವಲ್ಲ, ಜಾತಿಯಲ್ಲ, ಮತವಲ್ಲ, ಅದು ಜೀವನಕ್ರಮ. ಈ ದೇಶದಲ್ಲಿ ವಾಸ ಮಾಡುವವರೆಲ್ಲರೂ ಹಿಂದೂಗಳೇ. ಇದು ಸಂಘ ಹೇಳಿದ್ದಲ್ಲ, ನಮ್ಮ ಪುರಾತನ ಕಾವ್ಯಗಳು ಹೇಳಿವೆ ಎಂದರು.

ಸ್ವಾತಂತ್ರ್ಯ ನಂತರವೂ ಸಮಾಜದಲ್ಲಿ ಅಸ್ಪೃಶ್ಯತೆ ಮುಂದುವರೆದಿರುವುದು ನೋವಿನ ಸಂಗತಿ. ಸರ್ವ ಸಮಾನತೆ, ಸಾಮರಸ್ಯಯುಕ್ತ ಸಮಾಜ ನಿರ್ಮಾಣ, ಪರಿಸರ ಸಂರಕ್ಷಣೆ, ಸ್ವದೇಶಿ ಜೀವನಶೈಲಿ ರೂಢಿಸಿಕೊಳ್ಳಿ, ಶಕ್ತಿಶಾಲಿ ಭಾರತವಾಗಲು ಸ್ವಾವಲಂಬಿಯಾಗಲು ಸ್ವದೇಶಿ ಜೀವನ ಅನುಸರಿಸಿ ಎಂದರು.

ಸಂಚಲನಾ ಸಮಿತಿ ಅಧ್ಯಕ್ಷ ಎಸ್.ಎಂ. ಸಜ್ಜನ ಮಾತನಾಡಿ, ಅನಾದಿ ಕಾಲದಿಂದಲೂ ಜಗತ್ತಿನ ಗುರುವಾಗಿ ಬೆಳೆದ ಭಾರತದ ಮೇಲೆ ಹತ್ತಾರು ಆಕ್ರಮಣಗಳು ನಡೆದರೂ ಮೆಟ್ಟಿನಿಂತು ತನ್ನ ನೆಲದ ಮೂಲ ಗುಣವನ್ನು ಬಿಟ್ಟುಕೊಟ್ಟಿಲ್ಲ. ನಮ್ಮ ದೇಶವನ್ನಾಗಲಿ, ಸಂಸ್ಕೃತಿಯನ್ನಾಗಲಿ ನಾಶ ಮಾಡಲು ಸಾಧ್ಯವಿಲ್ಲ ಎಂದರು

ಮಹಿಳಾ ಪ್ರತಿನಿಧಿಯಾಗಿದ್ದ ಎಸ್.ಕೆ. ಮಹಿಳಾ ಪಿಯು ಕಾಲೇಜಿನ ಪ್ರಾಂಶುಪಾಲೆ ಜ್ಯೋತಿ ಹಿರೇಮಠ, ಗುಂಡಕನಾಳಶ್ರೀ, ಕೆಸರಟ್ಟಿಯ ಶ್ರೀ, ಹಿರೂರ ಅನ್ನದಾನೇಶ್ವರಮಠದ ಶ್ರೀ, ಮುರುಗೇಶ ವಿರಕ್ತಮಠ ಇತರ ಶ್ರೀ ಮಾತನಾಡಿದರು. ವಿರಾಟ ಹಿಂದೂ ಸಮಾವೇಶದಲ್ಲಿ ಗೌರವಾಧ್ಯಕ್ಷ ಡಾ.ವಿ.ಎಸ್.ಕಾರ್ಚಿ ಇದ್ದರು. ಪಟ್ಟಣದ ಸಾಂಭಪ್ರಭು ಶರಣಮುತ್ಯಾನ ದೇವಸ್ಥಾನದಿಂದ ಶೋಭಾಯಾತ್ರೆ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.