ವಿಜಯಪುರ:‘ವಿಜಯಪುರ ನಗರಕ್ಕೆ ಸಾಕಾಗುವಷ್ಟು ನೀರಿನ ಲಭ್ಯತೆಯಿದ್ದರೂ; ಅಧಿಕಾರಿಗಳ ಬೇಜವಾಬ್ದಾರಿತನದಿಂದ ನಗರದ ಜನರು ನೀರಿಗಾಗಿ ಪರದಾಡುವಂತಾಗಿದೆ’ ಎಂದು ಮಹಾನಗರ ಪಾಲಿಕೆ ಸದಸ್ಯ ರವೀಂದ್ರ ಲೋಣಿ ದೂರಿದ್ದಾರೆ.

‘ಒಂದು ತಿಂಗಳಿನಿಂದ ನಗರದ ಜನತೆ ನೀರಿಗಾಗಿ ಹಾಹಾಕಾರ ಪಡುತ್ತಿದೆ. ಆದರೆ ಯಾವ ಪ್ರಮಾಣದಲ್ಲಿ ನೀರು ಪೂರೈಕೆಯಾಗಬೇಕು, ಅಷ್ಟು ಪ್ರಮಾಣದ ನೀರು ನಿತ್ಯವೂ ನಗರಕ್ಕೆ ವಿವಿಧ ಜಲಮೂಲಗಳಿಂದ ಸರಬರಾಜಾಗುತ್ತಿದೆ. ಇದರ ಜತೆಗೆ 830 ಕೊಳವೆಬಾವಿಗಳು ನೀರು ಪೂರೈಸುತ್ತಿವೆ. ಆದರೂ ಸಮಸ್ಯೆ ಬಿಗಡಾಯಿಸಿದೆ’ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ ನಗರಕ್ಕೆ 24X7 ನೀರು ಪೂರೈಸಬೇಕು. ಈ ಯೋಜನೆ 2016ರಲ್ಲೇ ಆರಂಭಗೊಂಡರೂ; ಇಂದಿಗೂ ಪೂರ್ಣಗೊಂಡಿಲ್ಲ. ಆಮೆಗತಿಯಲ್ಲಿ ಸಾಗುತ್ತಿದೆ. ಜಿಲ್ಲಾಡಳಿತ ತುರ್ತಾಗಿ ಇತ್ತ ಗಮನಹರಿಸಿ, ನೀರಿನ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು’ ಎಂದು ಲೋಣಿ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.