ಶನಿವಾರ, 17 ಜನವರಿ 2026
×
ADVERTISEMENT
ADVERTISEMENT

ವಿಜಯ‍ಪುರ | ಯತ್ನಾಳಗೆ ಸಿಎಂ ಆದ್ಯತೆ; ಗರಿಗೆದರಿದ ಹಲವು ಪ್ರಶ್ನೆ

Published : 11 ಜನವರಿ 2026, 6:52 IST
Last Updated : 11 ಜನವರಿ 2026, 6:52 IST
ಫಾಲೋ ಮಾಡಿ
Comments
ನಾನು ಸಿದ್ದರಾಮಯ್ಯ ಏಜೆಂಟ್ ಎಂದು ಕೆಲವರು ಟೀಕಿಸುತ್ತಾರೆ. ಆದರೆ ನಾನು ಸಿದ್ದರಾಮಯ್ಯ ಏಜೆಂಟ್‌ ಅಲ್ಲ ಅವರು ಒಳ್ಳೆಯ ಕೆಲಸ ಮಾಡಿದಾಗ ಅಭಿನಂದಿಸುತ್ತೇನೆ. ಅಭಿನಂದಿಸಲು ನಾನು ಯಾರಿಗೂ ಅಂಜುವುದಿಲ್ಲ.
ಬಸನಗೌಡ ಪಾಟೀಲ ಯತ್ನಾಳ ಶಾಸಕ ವಿಜಯಪುರ
ವಿಜಯಪುರ ನಗರ ಬಸನಗೌಡ ಪಾಟೀಲ ಯತ್ನಾಳ ಅವರ ಕ್ಷೇತ್ರ ಅವರ ಅಭಿಮಾನಿಗಳು ಹೆಚ್ಚಿದ್ದಾರೆ. ಯತ್ನಾಳ ಅಭಿಮಾನಿಗಳು ನಮ್ಮ ಅಭಿಮಾನಿಗಳು ಕೂಡ 
ಸಿದ್ದರಾಮಯ್ಯ ಮುಖ್ಯಮಂತ್ರಿ
ಕಾಂಗ್ರೆಸಿಗರಿಗೆ ಇರುಸು
ಮುರುಸು  ವಿಜಯಪುರದಲ್ಲಿ ಜ.9ರಂದು ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರು ಶಾಸಕ ಯತ್ನಾಳ ಅವರಿಗೆ ಆದ್ಯತೆ ನೀಡಿರುವುದು ಕಾಂಗ್ರೆಸಿನ ಸ್ಥಳೀಯ ನಾಯಕರಿಗೆ ಸಾಕಷ್ಟು ಇರುಸುಮುರುಸಿಗೆ ಕಾರಣವಾಗಿದೆ. ‘ವಿಜಯಪುರ ನಗರ ಕ್ಷೇತ್ರದಲ್ಲಿ ಕಾಂಗ್ರೆಸಿನ ಕಟ್ಟಾ ಎದುರಾಳಿಯಾದ ಯತ್ನಾಳ ವಿರುದ್ಧ ರಾಜಕೀಯ ಮಾಡುತ್ತಿದ್ದೇವೆ. ಹೇಗಾದರೂ ಮಾಡಿ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಶ್ರಮಿಸುತ್ತಿದ್ದೇವೆ. ಆದರೆ ಮುಖ್ಯಮಂತ್ರಿಯವರು ನಮ್ಮನ್ನು ಕಡೆಗಣಿಸಿ ಎದುರಾಳಿಗೆ ಆದ್ಯತೆ ನೀಡುವ ಅಗತ್ಯವೇನಿತ್ತು? ದೊಡ್ಡ ನಾಯಕರೇ ‘ಒಳ ಒಪ್ಪಂದ’ ಮಾಡಿಕೊಂಡಿರುವಾಗ ಯತ್ನಾಳ ವಿರುದ್ಧ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕಾಟಾಚಾರಕ್ಕೆ ಸ್ಪರ್ಧಿಸುವುದರಲ್ಲಿ ಅರ್ಥವೇನಿದೆ?’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ವಿಜಯಪುರ ನಗರ ಕ್ಷೇತ್ರದಲ್ಲಿ ಬಾಹುಳ್ಯವಿರುವ ಮುಸ್ಲಿಂ ಮತದಾರರನ್ನು ಕಡೆಗಣಿಸಿ ಮುಖ್ಯಮಂತ್ರಿ ಹಾಗೂ ಜಿಲ್ಲೆಯ ಸಚಿವರು ಯತ್ನಾಳ ಓಲೈಕೆ ರಾಜಕಾರಣ ಮಾಡಿರುವುದು ಆ ಸಮಾಜಕ್ಕೂ ಸಿಟ್ಟು ತರಿಸಿದೆ ಎಂಬ ಮಾತುಗಳು ಕೇಳಿಬಂದಿವೆ.   ಜೊತೆಗೆ ಬಿಜೆಪಿಗೂ ‘ಯತ್ನಾಳ–ಸಿದ್ದರಾಮಯ್ಯ ಸ್ನೇಹ’ ಬಿಸಿತುಪ್ಪವಾಗಿ ಪರಿಣಮಿಸಿದೆ. ಒಂದು ವೇಳೆ ಯತ್ನಾಳ ಅವರು ಕಾಂಗ್ರೆಸ್‌ಗೆ ಆಯುಧವಾದರೆ ಜಿಲ್ಲೆಯ ಲಿಂಗಾಯತ ಪಂಚಮಸಾಲಿ ವೋಟುಗಳು ಕಾಂಗ್ರೆಸ್‌ ಪಾಲಾಗಬಹುದೇ? ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನೆಡೆಯಾಗುವುದೇ ಎಂಬ ಅಳುಕು ಉಂಟಾಗಿದೆ.  ‘ಯತ್ನಾಳ ಅವರು ಕಾಂಗ್ರೆಸ್‌ನ ಪ್ರಮುಖ ನಾಯಕರೊಂದಿಗೆ ಮೊದಲಿನಿಂದಲೂ ಹೊಂದಾಣಿಕೆ ರಾಜಕಾರಣ ಮಾಡಿಕೊಂಡೇ ಬರುತ್ತಿರುವುದರಿಂದ ಇದರಲ್ಲೇನೂ ಹೊಸದಿಲ್ಲ’ ಎಂದು ಕೆಲವರು ವಿಶ್ಲೇಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT