ಹುಬ್ಬಳ್ಳಿ: ಡಾ.ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಫೌಂಡೇಶನ್ ಮತ್ತು ಹುಬ್ಬಳ್ಳಿ ಆರ್ಟ್ ಸರ್ಕಲ್ ಸಹಯೋಗದಲ್ಲಿ ರಾಷ್ಟ್ರೀಯ ಸಂಗೀ ತೋತ್ಸವವನ್ನು ಇದೇ 21ರಂದು ದೇಶ ಪಾಂಡೆ ನಗರದ ಸವಾಯಿ ಗಂಧರ್ವ ಹಾಲ್‌ನಲ್ಲಿ ಆಯೋಜಿಸಲಾಗಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹುಬ್ಬಳ್ಳಿ ಆರ್ಟ್ ಸರ್ಕಲ್‌ನ ಕಾರ್ಯದರ್ಶಿ ಬಾಬು ರಾವ್ ಹಾನಗಲ್, ಗಂಗಜ್ಜಿಯವರ 4ನೇ ಪುಣ್ಯಸ್ಮರಣೆ ಅಂಗವಾಗಿ ಈ ಸಂಗೀತೋತ್ಸವ ಹಮ್ಮಿಕೊಳ್ಳಲಾಗಿದೆ ಎಂದರು.

ಅಂದು ಬೆಳಿಗ್ಗೆ 10ರಿಂದ ರಾತ್ರಿ 10 ಗಂಟೆಯವರೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಒಟ್ಟು 35 ಯುವ ಹಾಗೂ ಹಿರಿಯ ಗಾಯಕರು ಪಾಲ್ಗೊ ಳ್ಳುವರು. ತರುಣ ಗಾಯಕರಿಗೆ ಹೆಚ್ಚಿನ ಅವಕಾಶ ಮಾಡಿಕೊಡುವ ಉದ್ದೇಶ ದಿಂದ ಅವರನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಆಹ್ವಾನಿಸಲಾಗಿದೆ ಎಂದರು.

ಮ್ಯೂಸಿಕ್ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ಮನೋಜ ಹಾನಗಲ್ ಮಾತನಾಡಿ, ಶಾಸ್ತ್ರೀಯ ಸಂಗೀತಕ್ಕೆ ಮಾತ್ರವೇ ಆದ್ಯತೆ ನೀಡುವ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಶಹನಾಯಿ, ಹಾರ್ಮೋನಿಯಂ, ತಬಲಾ ಮತ್ತು ಕೊಳಲುವಾದನ ಹೊರತುಪಡಿಸಿ ಉಳಿದಂತೆ ಗಾಯನಕ್ಕೆ ಒತ್ತು ನೀಡಲಾಗಿದೆ, ಸಾರ್ವಜನಿಕರಿಗೆ ಉಚಿತ ಪ್ರವೇಶವಿದೆ ಎಂದರು.

ಉತ್ತರ ಕನ್ನಡ, ವಿಜಾಪುರ, ಬೆಂಗಳೂರು ಹಾಗೂ ಹುಬ್ಬಳ್ಳಿ- ಧಾರವಾಡದ ಯುವ ಗಾಯಕರು ಈ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳುವರು. ಬೆಳಿಗ್ಗೆ 10ರಿಂದ ನಡೆಯುವ ಕಾರ್ಯ ಕ್ರಮದಲ್ಲಿ ಹಾನಗಲ್ ಸ್ಕೂಲ್ ಆಫ್ ಇಂಡಿಯನ್ ಮ್ಯೂಸಿಕ್‌ನ ವಿದ್ಯಾರ್ಥಿ ಗಳಿಂದ ಸಮೂಹ ಗಾಯನ.

ಬಳಿಕ ನಾಗಭೂಷಣ ಎಸ್.ಜಿ. (ತಬಲಾ ಸೋಲೋ), ಎಸ್.ಡಿ.ಭಜಂತ್ರಿ (ಶಹನಾಯ್), ಸುಪ್ರಿಯಾ ಹೆಗಡೆ ಹಿತ್ಲಳ್ಳಿ, ಗೀತಾ ಆಲೂರ, ವಲ್ಲಭ ಮುಳಗುಂದ, ವಾಸುದೇವ ಕಾರೇಕರ, ವಿನಾಯಕ ಹೆಗಡೆ ಮುತ್ತಮುರುಡು, ಹರೀಶ ಹೆಗಡೆ ಹಳವಳ್ಳಿ, ಸುಪ್ರಿಯಾ ಭಟ್, ಪರಶುರಾಮ ಭಜಂತ್ರಿ, ತೇಜಸ್ವಿನಿ ಮಳಗಿ, ಪವನ ಎಂ.ಹೆಗಡೆ ಪಾಲ್ಗೊಳ್ಳುವರು.

ಸಂಜೆ 4 ಗಂಟೆಯಿಂದ ನಡೆಯುವ ಗಾಯನದಲ್ಲಿ ಶ್ರೀಪಾದ ಹೆಗಡೆ ಸೋಮನಮನೆ ಹಾಗೂ ಬಕುಲಾ ಹೆಗಡೆ ಸೋಮನಮನೆ (ಶಾಸ್ತ್ರೀಯ ದ್ವಂದ್ವ ಗಾಯನ), ಪ್ರಕಾಶ್ ಹೆಗಡೆ ಯಡಳ್ಳಿ (ಹಾರ್ಮೋನಿಯಂ ಸೋಲೋ), ವಿಕಾಸ ನರೇಗಲ್ (ತಬಲಾ ಸೋಲೋ), ಭರತ ಹೆಗಡೆ, ಹೆಬ್ಬಳಸು (ಹಾರ್ಮೋನಿಯಂ ಸೋಲೋ), ಕೃಷ್ಣಾ ಜೋಶಿ (ಕೊಳಲು), ವೈ ಕಾಶೀನಾಥ, ಅರುಣ ನೆಗಳೂರು, ಗಾಯತ್ರಿ ದೇಶಪಾಂಡೆ, ಜಯರಾಮ ಕುಲಕರ್ಣಿ, ಶ್ರೀಕಾಂತ ಬಾಕಳೆ, ಹನುಮಂತಪ್ಪ ಅಳಗವಾಡಿ ಗಾಯನ ಕಾರ್ಯಕ್ರಮ ನೀಡುವರು.

ಗಂಗೂಬಾಯಿ ಹಾನಗಲ್ ಜನ್ಮ ಶತಮಾನೋತ್ಸವ ವರ್ಷಾಚರಣೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಮತ್ತು ಧಾರವಾಡದ ಒಟ್ಟು 5 ಕಡೆಗಳಲ್ಲಿ ಬಡ ವಿದ್ಯಾರ್ಥಿಗಳಿಗೆ ಲಘು ಸಂಗೀತ ಮತ್ತು ಶಾಸ್ತ್ರೀಯ ಸಂಗೀತವನ್ನು ಉಚಿತವಾಗಿ ಕಲಿಸುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ನಾರಾಯಣ ರಾವ್ ಹಾನಗಲ್, ವೀರೇಶ ಕಾಲವಾಡ ಮತ್ತು ಪಲ್ಲವಿ ಖಾನ್‌ಪೇಟ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.