ಬುಧವಾರ, 4 ಮಾರ್ಚ್ 2026
×
ADVERTISEMENT

PV Web Exclusive | ಬಳ್ಳೂರು ಕ್ರಾಸ್‌: ನಡುರಸ್ತೆಯಲ್ಲಿ ಆಳೆತ್ತರದ ಕಂಬಗಳು! 

ಏಳೆಂಟು ವರ್ಷದಿಂದ ನಡೆಯುತ್ತಿದೆ ಮೇಲ್ಸೇತುವೆ ಕಾಮಗಾರಿ
Published : 4 ಮಾರ್ಚ್ 2026, 0:30 IST
Last Updated : 4 ಮಾರ್ಚ್ 2026, 0:30 IST
ADVERTISEMENT
ಫಾಲೋ ಮಾಡಿ
Comments
ಕೆಆರ್‌ಐಡಿಸಿಎಲ್‌ ಪೂರ್ವ ಸಿದ್ಧತೆಯಿಲ್ಲದೇ ಅವೈಜ್ಞಾನಿಕವಾಗಿ ವರ್ಷಗಳ ಹಿಂದೆ ಕಾಮಗಾರಿ ಆರಂಭಿಸಿತು. ಆದರೆ  ಕಾಮಗಾರಿ ಪೂರ್ಣಗೊಳ್ಳದೇ ಪಿಲ್ಲರ್‌ ಹಂತದಲ್ಲಿಯೇ ಉಳಿದಿದೆ. ಪಿಲ್ಲರ್‌ಗಳ ನಿರ್ಮಾಣಕ್ಕೆ ₹25 ಲಕ್ಷಕ್ಕೂ ಹೆಚ್ಚು ಹಣ ಖರ್ಚು ಮಾಡಲಾಗಿದೆ. ಆದರೆ, ಇವು ಉಪಯೋಗಕ್ಕೆ ಬಾರದೇ ಇರುವುದರಿಂದ ಸಾರ್ವಜನಿಕರ ತೆರಿಗೆ ಹಣ  ಪೋಲಾಗಿದೆ. ಪಿಲ್ಲರ್‌ಗಳಿಗೆ ಬಳಸಿರುವ ಕಬ್ಬಿಣ ತುಕ್ಕು ಹಿಡಿಯಲು ಆರಂಭಿಸಿದೆ
–ಸತೀಶ್‌, ವಕೀಲ
ಕಿರಿದಾದ ರಸ್ತೆ ಅತ್ತಿಬೆಲೆಯ ಬಳ್ಳೂರು ಕ್ರಾಸ್‌ನಿಂದ ಅರ್ಧ ಕಿ.ಮೀ.ಗೂ ಹೆಚ್ಚು ಪಿಲ್ಲರ್‌ಗಳನ್ನು ಹಾಕಲಾಗಿದೆ. ಇದರಿಂದಾಗಿ ರಸ್ತೆಯ ಕಾಲು ಭಾಗ ಕಂಬಗಳಿಂದ ತುಂಬಿದೆ. ದ್ವಿಪಥದ ರಸ್ತೆ ಕಿರಿದಾಗಿದ್ದು ಪಿಲ್ಲರ್‌ಗಳನ್ನು ತೆರವುಗೊಳಿಸಬೇಕು ಅಥವಾ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಈ ರಸ್ತೆಯಲ್ಲಿ ಪ್ರತಿನಿತ್ಯ ಸಾರ್ವಜನಿಕರು ಪರದಾಡಬೇಕಾಗುತ್ತದೆ. ವಾಹನ ಸವಾರರು ಪಿಲ್ಲರ್‌ಗಳಿಗೆ ಡಿಕ್ಕಿ ಹೊಡೆದ ಘಟನೆಗಳು ನಡೆದಿವೆ.
-ವೆಂಕಟೇಶ್,ಎಳನೀರು ವ್ಯಾಪಾರಿ, ಬಳ್ಳೂರು ಕ್ರಾಸ್‌ 
ADVERTISEMENT
ADVERTISEMENT
ADVERTISEMENT