ಬೆಂಗಳೂರು: ದೇವಸ್ಥಾನದ ಸಮೀಪದ ಅರಳೀ ಮರಗಳ ಬಳಿ, ಹಲವು ಬೀದಿಯಲ್ಲಿ, ರಸ್ತೆಯ ಮೋರಿಗಳಲ್ಲಿ ದೇವರ ಚಿತ್ರಗಳನ್ನು ಮನಬಂದಂತೆ ಎಸೆಯಲಾಗಿರುತ್ತದೆ. ಅದನ್ನು ನೋಡಿದಾಗ, ದೇವರಿಗೆ ಇಂಥಾ ಸ್ಥಿತಿ ಬಂದೀತೆ... ಎಂದು ಮನ ಕರಗುತ್ತದೆ. ಇಂತಹ ಹಳೆಯ, ಗಾಜು ಒಡೆದ ಹಾಗೂ ಬೇಡವಾದ ದೇವರ ಚಿತ್ರಗಳಿಗೆ ಈಗ ಗೌರವಯುತವಾಗಿ ವಿದಾಯ ಹೇಳಬಹುದು.

ಹೌದು ನಿಜ, ನೀವು ಓದಿದ್ದು ಅದನ್ನೇ. ದೇವರ ಚಿತ್ರಗಳಿಗೂ ಗೌರವಯುತವಾಗಿ ವಿದಾಯ ಹೇಳುವ ಅವಕಾಶವಿದೆ. ಎಲ್ಲೆಂದರಲ್ಲಿ ದೇವರ ಫೋಟೊಗಳನ್ನು ಎಸೆಯುವ ಬದಲು, ಗುಡಿಯ ಆವರಣದಲ್ಲಿಸಿರುವ ಪ್ರತ್ಯೇಕ ಸ್ಥಳದಲ್ಲಿ ಬೇಡವಾದ ಫೋಟೊಗಳನ್ನು ಇರಿಸಿ, ದೇವಸ್ಥಾನದ ಗುಂಡಿಗೆ ಸಾಧ್ಯವಾದಷ್ಟು ಕಾಣಿಕೆ ಹಾಕಿದರೆ ಸಾಕು, ದೇವರ ಫೋಟೊಗಳನ್ನು ಗೌರವಯುತವಾಗಿ ಸಂಸ್ಕರಣೆ ಮಾಡಲಾಗುತ್ತದೆ. ಅದಕ್ಕೆಂದೇ ನಾಗರಬಾವಿಯಲ್ಲಿ ನಗರದ ಮೊದಲ ‘ಮೆಷ್ ಬಾಕ್ಸ್’ ಸ್ಥಾಪನೆಯಾಗಿದೆ.

ಮನೆಯಲ್ಲಿ ತುಂಬಾ ವರ್ಷದಿಂದ ದೇವರ ಫೋಟೊಗಳಿಗೆ ಪೂಜೆ ಸಲ್ಲಿಸಿರುತ್ತಾರೆ, ಯಾವುದೋ ಒಂದು ಸಂದರ್ಭದಲ್ಲಿ ಕೈಜಾರಿಯೋ, ಏನೋ ಒಂದು ತಾಕಿ ಆ ಫೋಟೊ ಬಿದ್ದು, ಗಾಜು ಒಡೆದುಹೋಗುತ್ತದೆ. ಅದನ್ನು ಎಲ್ಲೆಂದರಲ್ಲಿ ಬಿಸಾಡುವ ಅಭ್ಯಾಸ ಹಲವರಿಗಿದೆ. ಏಕೆಂದರೆ, ಅದನ್ನು ಕಸದ ಜೊತೆಗೆ ಕೊಡುವುದಕ್ಕೆ ಆಗುವುದಿಲ್ಲ. ಅದಕ್ಕೇ ಕಸ ಬಿಸಾಡುವ ಸ್ಥಳದಲ್ಲಿ ಎಸೆಯಲಾಗುತ್ತಿದೆ. ವರ್ಷಾನುಗಟ್ಟಲೆ ಭಕ್ತಿಯಿಂದ ಪೂಜಿಸಿದ್ದ ಫೋಟೊಗೆ ಇಂತಹ ವಿದಾಯ ಸರಿಯಲ್ಲ ಅಲ್ಲವೇ? ಅದಕ್ಕೇ ಅವುಗಳಿಗೆ ಗೌರವಯುತ ವಿಸರ್ಜನೆ, ಸಂಸ್ಕರಣೆಯನ್ನು ಮಾಡಲು ನಾಗರಬಾವಿಯ ಅನ್ನಪೂರ್ಣೇಶ್ವರಿನಗರದ ಆರೋಗ್ಯ ಬಡಾವಣೆಯಲ್ಲಿರುವ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯ ಮುಂದಾಗಿದೆ.

ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯ ಟ್ರಸ್ಟ್, ಶಿವೋಹಂ ಯೋಗ ಮತ್ತು ಸಾಂಸ್ಕೃತಿಕ ಕೇಂದ್ರ, ಪರ್ಯಾವರಣ ಸಂರಕ್ಷಣಾ ಗತಿವಿಧಿ, ಉಸಿರು ಫೌಂಡೇಶನ್ ವತಿಯಿಂದ ನಗರದಲ್ಲಿ ಮೊದಲನೇ ‘ಮೆಸ್ ಬಾಕ್ಸ್’ ಸ್ಥಾಪಿಸಲಾಗಿದೆ. ಉಸಿರು ಫೌಂಡೇಷನ್ ಹಾಗೂ ಸ್ವಯಂ ಸೇವಕರು ಅನ್ನಪೂರ್ಣೇಶ್ವರಿ ನಗರದ ಸುತ್ತಮುತ್ತ ಬಿಸಾಡಿರುವ ದೇವರ ಫೋಟೊಗಳನ್ನು ಸಂಗ್ರಹಿಸಿ, ಅವುಗಳನ್ನು ಗೌರವಯುತವಾಗಿ ವಿಲೇವಾರಿ ಮಾಡುತ್ತಿದ್ದರು. ಇಂತಹ ಒಂದು ಕಾರ್ಯಕ್ಕೆ ಮುನ್ನುಡಿಯಾಗಲು ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯ ಟ್ರಸ್ಟ್ ಆಡಳಿತ ಮಂಡಳಿಯವರು ನಿರ್ಧರಿಸಿದರು. ದೇವಸ್ಥಾನದ ಆವರಣದೊಳಗೇ ‘ದೇವರ ಅನಗತ್ಯ ಫೋಟೊಗಳನ್ನು ಇಡಲು ಮೆಷ್ ಬಾಕ್ಸ್’ ಸ್ಥಾಪಿಸಿದ್ದಾರೆ. ಆ ಮೆಷ್ ಬಾಕ್ಸ್ ಅಲುಗಾಡದಂತೆ ಅಲ್ಲಿರುವ ಫೆನ್ಸಿಂಗ್ ವೆಲ್ಡ್ ಕೂಡ ಮಾಡಲಾಗಿದೆ.

‘ದಯವಿಟ್ಟು ಗಮನಿಸಿ: ಅನಗತ್ಯ ದೇವರ ಫೋಟೊಗಳನ್ನು ಮಾತ್ರ ಇಲ್ಲಿ ಹಾಕಿ! ದೇವಾಲಯದಲ್ಲಿ ಕಾಣಿಕೆ ಹಾಕಿ, ಗೌರವಯುತ ವಿಸರ್ಜನೆ ಮಾಡಲು ಸಹಕರಿಸಿ’... ಇದು ಮೆಷ್ ಬಾಕ್ಸ್ ಮೇಲಿನ ಬರಹ.

‘ನಾವು ನಮ್ಮ ಪ್ರಕೃತಿ, ನಮ್ಮ ಧರ್ಮ, ನಮ್ಮ ಸಂಸ್ಕೃತಿ, ನಮ್ಮ ಆಚಾರ ವಿಚಾರವನ್ನು, ಅದರ ಹಿಂದೆ ಇರುವ ವೈಜ್ಕಾನಿಕ ವಿಷಯಗಳನ್ನು ಬಲ್ಲವರಲ್ಲಿ ತಿಳಿದುಕೊಂಡು ಅದರಂತೆ ನಡೆದರೆ ಸುಖ,ಸಮೃದ್ಧಿ ಎಲ್ಲ ಜೀವ ಸಂಕುಲಗಳಿಗೂ ಆಗುವುದು. ಭಕ್ತಿ, ಭಾವನೆ, ಕಲ್ಪನೆಗೆ ಅನುಕೂಲಕ್ಕಾಗಿ ನಾವು ದೇವರ ಫೋಟೊ ಅಥವಾ ವಿಗ್ರಹ ಇಟ್ಟುಕೊಳ್ಳುತ್ತೇವೆ. ಫೋಟೊ ಇಟ್ಟು ಪೂಜೆ ಮಾಡಿ ಭಿನ್ನವಾದ ಅಥವಾ ಅನಗತ್ಯ ಎನಿಸಿದ ಫೋಟೊಗಳು, ವಿಗ್ರಹಗಳು ನಮ್ಮ ಅರಳೀ ಮರದ ಕೆಳಗೆ, ದೇವಾಲಯದ ಸುತ್ತ, ನಾಗರಕಟ್ಟೆ ಹತ್ತಿರ, ದೇವಾಲಯದ ಆರ್ಚ್ ಕೆಳಗೆ ಹೀಗೆಲ್ಲಾ ಹಾಕಿ ಅವು ಅಲ್ಲೇ ಕಸದ ಜೊತೆ ತುಂಬಿರುವುದು ಕಾಣಿಸುತ್ತಿದೆ. ಇದು ಸರ್ವಥಾ ದೋಷ, ಒಳ್ಳೆಯದಲ್ಲ. ಇದನ್ನು ಹಾಕಲು ನಾವು ಆರೋಗ್ಯ ಬಡಾವಣೆಯ ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದ ಹೊರಗೆ ನಾಗರಕಟ್ಟೆಯ ಸಮೀಪ ಒಂದು ‘ಮೆಷ್ ಬಾಕ್ಸ್’ ಇಟ್ಟಿದ್ದೇವೆ. ಜನರು ಅಲ್ಲಿ ಇಲ್ಲಿ ದೇವರ ಫೋಟೊಗಳನ್ನು ಹಾಕುವ ಬದಲು ಇಲ್ಲೇ ತಂದು ಹಾಕಬಹುದು’ ಎಂದು ಉಸಿರು ಫೌಂಡೇಷನ್ನ ಶೋಭಾ ಭಟ್ ಹೇಳಿದರು.

‘ಮೆಷ್ ಬಾಕ್ಸ್’ ನಂತರ ಏನಾಗುತ್ತದೆ?

ಶ್ರೀ ವಿನಾಯಕ ವೆಂಕಟೇಶ್ವರ ದೇವಾಲಯದ ಆವರಣದಲ್ಲಿರುವ ‘ಮೆಷ್ ಬಾಕ್ಸ್’ನಲ್ಲಿ ಸಂಗ್ರಹವಾಗುವ ದೇವರ ಅನಗತ್ಯ ಫೋಟೊಗಳನ್ನು ತೆಗೆದು ಅವುಗಳನ್ನು ಮರ (ಫೋಟೊದ ಫ್ರೇಂ), ಗಾಜು, ಕಾಗದದ ಚಿತ್ರಗಳನ್ನು ವಿಂಗಡಿಸಲಾಗುತ್ತದೆ. ಮರ ಹಾಗೂ ಗಾಜುಗಳನ್ನು ಮರುಬಳಕೆ/ ಸಂಸ್ಕರಣೆ ಘಟಕಗಳಿಗೆ ರವಾನಿಸಲಾಗುತ್ತದೆ. ಕಾಗದದಲ್ಲಿ ಮುದ್ರಣವಾಗಿರುವ ದೇವರ ಚಿತ್ರಗಳನ್ನು ಒಂದೆಡೆ ಇರಿಸಿ, ಅವುಗಳನ್ನು ಬಕೆಟ್ ಅಥವಾ ಡ್ರಮ್ನಲ್ಲಿ ನೀರಿನಲ್ಲಿ ನೆನೆಸಲಾಗುತ್ತದೆ. ಒಂದೆರಡು ದಿನವಾದ ನಂತರ ಅದು ಬಹುತೇಕ ಕರಗುತ್ತದೆ. ಆಡಳಿತ ಮಂಡಳಿಯವರು ದೇವಾಲಯದ ಆವಣದಲ್ಲೇ ನೀಡಲಾಗಿರುವ ಪ್ರತ್ಯೇಕ ಸ್ಥಳದಲ್ಲಿ ಗುಂಡಿ ತೋಡಿ, ಕರಗಿರುವ ಕಾಗದವನ್ನು ಮಾತ್ರ ತುಂಬಲಾಗುತ್ತದೆ. ಕಾಲಕ್ರಮೇಣ ಇದು ಗೊಬ್ಬರವಾಗುತ್ತದೆ. ಈ ಮೂಲಕ ದೇವರ ಫೋಟೊಗಳನ್ನು ಪ್ರಕೃತಿದತ್ತವಾಗಿ ವಿಲೇವಾರಿ ಮಾಡಲಾಗುತ್ತದೆ.

ನಾಗರಿಕರಿಗೆ ಕಿವಿಮಾತು:

1. ಅಗತ್ಯ ಇಲ್ಲದೆ ದೇವರ ಫೋಟೊ ಖರೀದಿಸುವುದು ಬೇಡ.

2. ದೇವಸ್ಥಾನಕ್ಕೆ ಹೋದಾಗ, ಭಕ್ತಿಭಾವ ತುಂಬಿಬಂದು ಅಲ್ಲಿರುವ ಫೋಟೊಗಳನ್ನು ತಂದು ಮನೆಯಲ್ಲಿ ಸಂಗ್ರಹಿಸಿಡುವುದು ಬೇಡ. ಏಕೆಂದರೆ, ಸ್ವಲ್ಪ ದಿನ ನಂತರ ಅವುಗಳನ್ನು ಬಿಸಾಡುತ್ತೀರಿ.

3. ಯಾವುದೇ ಗೃಹ ಪ್ರವೇಶ.. ಮುಂತಾದ ಸಮಾರಂಭಗಳಿಗೆ ದೇವರ ಫೋಟೊ ಉಡುಗೊರೆ ಕೊಡುವ ಬದಲು ಉಪಯುಕ್ತ ವಸ್ತು, ಪುಸ್ತಕವನ್ನೋ ಅಥವಾ ದುಡ್ಡನ್ನೇ ಕೊಡುವುದು ಒಳಿತು

ನೀವೇ ಸಂಸ್ಕರಿಸಿಕೊಳ್ಳಿ...

ಅನಗತ್ಯ ಫೋಟೊಗಳನ್ನು ಭಾಗಗಳನ್ನು ವಿಂಗಡಿಸಿ, ಅವುಗಳನ್ನು ಸಂಸ್ಕರಣೆ ಮಾಡಬಹುದು. ಮರದ ಫ್ರೇಂ ಹಾಗೂ ಗಾಜುಗಳನ್ನು ಸಂಸ್ಕರಣೆ/ ಮರುಬಳಕೆ ಘಟಕಗಳಿಗೆ ನೀಡಬಹುದು. ದೇವರ ಚಿತ್ರ ಇರುವ ಕಾಗದವನ್ನು ದೇವ ನಾಮಸ್ಮರಣೆಯೊಂದಿಗೆ ಬಕೆಟ್ನ ನೀರಲ್ಲಿ ಹಾಕಿ.. ಒಂದೆರಡು ದಿನವಾಗದ ಮೇಲೆ ಅದು ಕರಗಿದಂತಾಗುತ್ತದೆ. ಅದನ್ನು ಮನೆ ಮುಂದಿನ ಗಿಡದ ಬುಡಕ್ಕೆ ಹಾಕಿದರೆ ಗೊಬ್ಬರವಾಗುತ್ತದೆ. ಗಿಡವಿಲ್ಲದಿದ್ದರೆ ಮಣ್ಣಿಗೆ ಹಾಕಿದರೂ ಅದು ಅಲ್ಲಿ ಕರಗುತ್ತದೆ. ಹೀಗೇ ನಮ್ಮ ನಮ್ಮ ದೇವರ ಅನಗತ್ಯ ಫೋಟೊಗಳನ್ನು ನಾವೇ ನಿರ್ವಹಣೆ ಮಾಡಬಹುದು. ಪ್ರಕೃತಿ, ಸಂಸ್ಕೃತಿ ಉಳಿಸಿ ರಕ್ಷಿಸುವ ಜವಾಬ್ದಾರಿಯನ್ನೂ ಮೆರೆಯಬಹದು. ಸರ್ವರಿಗೂ ಒಳಿತನ್ನೇ ಬಯಸಿ, ಸರಿಯಾದ ಕೆಲಸವನ್ನೆ ಮಾಡೋಣ. ಸಹಕರಿಸೋಣ ಎಂದು ಶೋಭಾ ಭಟ್ ಹೇಳಿದರು.

ಎಲ್ಲ ದೇವಾಲಯಗಳೂ ‘ಮೆಷ್ ಬಾಕ್ಸ್’ ಸ್ಥಾಪಿಸಲಿ...

ನಗರದಲ್ಲಿರುವ ಎಲ್ಲ ದೇವಸ್ಥಾನಗಳಲ್ಲೂ ‘ಮೆಷ್ ಬಾಕ್ಸ್’ ಪರಿಕಲ್ಪನೆ ಜಾರಿಯಾದರೆ, ರಸ್ತೆ–ಚರಂಡಿಗಳಲ್ಲಿ ದೇವರ ಬೇಡವಾದ ಫೋಟೊಗಳು ಬೀಳುವುದಿಲ್ಲ. ಅಲ್ಲಲ್ಲಿ ಸ್ವಯಂ ಸೇವಕರು ಇಂತಹ ಚಿತ್ರಗಳನ್ನು ಸಂಗ್ರಹಿಸಿ, ವಿಲೇವಾರಿ ಮಾಡುತ್ತಿದ್ದರೂ, ದೇವಾಲಯಗಳ ಬಳಿ ಅನಗತ್ಯ ಫೋಟೊಗಳನ್ನು ಇರಿಸುವುದು ಕಡಿಮೆಯಾಗಿಲ್ಲ. ಹೀಗಾಗಿ, ಎಲ್ಲೆಡೆಯೂ ಇಂತಹ ‘ಮೆಷ್ ಬಾಕ್’ ಅಳಡಿಸಬೇಕೆಂಬುದು ಆಶಯ.

‘ನಗರದಲ್ಲಿರುವ ದೇವಸ್ಥಾನದ ಸುತ್ತಮುತ್ತ ಎಲ್ಲ ಜಾಗಗಳಲ್ಲೂ ದೇವರ ಫೋಟೊಗಳನ್ನು ಬಿಸಾಡಿರುತ್ತಾರೆ. ರಸ್ತೆಗಳಲ್ಲಿ, ಮೋರಿಗಳಲ್ಲಿ ತ್ಯಾಜ್ಯದೊಂದಿಗೆ ದೇವರ ಫೋಟೊ ಕಾಣುತ್ತವೆ. ವರ್ಷಗಟ್ಟಲೆ ಮಡಿಯಿಂದ ಪೂಜೆ ಮಾಡಿದ ದೇವರ ಫೋಟೊ, ಭಗ್ನವಾದ ಕೂಡಲೇ ಅದು ತ್ಯಾಜ್ಯವಾಗಿ ಬಿಡುತ್ತದೆ. ಇಂತಹ ಮನಃಸ್ಥಿತಿಯಿಂದ ಹೊರಬಂದು ಜನರು, ದೇವರ ಬೇಡವಾದ ಫೋಟೊಗಳನ್ನು ಗೌರವಯುತವಾಗಿ ವಿಲೇವಾರಿ ಮಾಡಬೇಕು’ ಎಂದು ಶೋಭಾ ಭಟ್ ಆಶಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.