ಭಾನುವಾರ, ಆಗಸ್ಟ್ 1, 2021
27 °C
868 ಜನ ಗುಣಮುಖ

ಯಾದಗಿರಿ | ಮತ್ತೆ 35 ಜನರಿಗೆ ಕೋವಿಡ್‌: ಸೋಂಕಿತರ ಸಂಖ್ಯೆ 1006ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯಲ್ಲಿ ಸೋಮವಾರ 6 ವರ್ಷದ ಬಾಲಕ ಸೇರಿ ಒಟ್ಟು 35 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಸೋಂಕಿತರಲ್ಲಿ 19 ಪುರುಷರು,16 ಮಹಿಳೆಯರು ಇದ್ದಾರೆ.

ಜಿಲ್ಲೆಯಲ್ಲಿ ಖಚಿತಪಟ್ಟ ಒಟ್ಟು 1,006 ಪ್ರಕರಣಗಳ ಪೈಕಿ 868 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಒಬ್ಬರು ಮೃತಪಟ್ಟಿರುತ್ತಾರೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಣಸಗಿ ತಾಲ್ಲೂಕಿನ ರಾಜ್ವಾಳ ತಾಂಡಾದ 10 ವರ್ಷದ ಬಾಲಕ, ಹಳ್ಳಿ ತಾಂಡಾದ 12 ವರ್ಷದ ಬಾಲಕಿ, ಕೋಳಿಹಾಳದ 22 ವರ್ಷದ ಪುರುಷ, ಬನಹಟ್ಟಿ ಗ್ರಾಮದ 16 ವರ್ಷದ ಬಾಲಕ, ಗುಂಡಲಗೇರಾ ಗ್ರಾಮದ 9 ವರ್ಷದ ಬಾಲಕ, ಶಹಾಪುರದ 26 ವರ್ಷದ ಪುರುಷ, ಶಹಾಪುರ ತಾಲ್ಲೂಕಿನ ಮುಡಬೂಳ ಗ್ರಾಮದ 16 ವರ್ಷದ ಬಾಲಕ, ಗುರುಮಠಕಲ್ ತಾಲ್ಲೂಕಿನ ಕುಂಟಿಮರಿ ಗ್ರಾಮದ 34 ವರ್ಷದ ಮಹಿಳೆ , 25 ವರ್ಷದ ಮಹಿಳೆ ಹಾಗೂ 11 ವರ್ಷದ ಬಾಲಕ ಇವರಿಗೆ ಸೋಂಕು ದೃಢಪಟ್ಟಿದೆ.

ಯಾದಗಿರಿ ನಗರದ 37 ವರ್ಷದ ಪುರುಷ, 25 ವರ್ಷದ ಪುರುಷ, 45 ವರ್ಷದ ಮಹಿಳೆ, ಯಾದಗಿರಿ ತಾಲ್ಲೂಕಿನ ಠಾಣಗುಂದಿ ಗ್ರಾಮದ 12 ವರ್ಷದ ಬಾಲಕ, ಆಶನಾಳ ತಾಂಡಾದ 50 ವರ್ಷದ ಪುರುಷ ಮೈಲಾಪುರ ಹೊಸಳ್ಳಿಯ 22 ವರ್ಷದ ಮಹಿಳೆ ಹಾಗೂ 60 ವರ್ಷದ ಮಹಿಳೆ  ಶಹಾಪುರ ತಾಲ್ಲೂಕಿನ ಚಂದಾಪೂರದ 50 ವರ್ಷದ ಪುರುಷ, ಕನ್ಯಾಕೋಳೂರು ತಾಂಡಾದ 38 ವರ್ಷದ ಪುರುಷ, ಶಹಾಪುರ ತಾಲ್ಲೂಕಿನ ತಡಿಬಿಡಿ ಗ್ರಾಮದ 22 ವರ್ಷದ ಮಹಿಳೆ ಸೋಂಕಿತರು.

ಆಶನಾಳ ತಾಂಡಾದ 25 ವರ್ಷದ ಪುರುಷ , 21 ವರ್ಷದ ಮಹಿಳೆ, 19 ವರ್ಷದ ಯುವಕ, 27 ವರ್ಷದ ಮಹಿಳೆ, 27 ವರ್ಷದ ಇನ್ನೊಬ್ಬಳು ಮಹಿಳೆ, 21 ವರ್ಷದ ಪುರುಷ, ಶಹಾಪುರ ತಾಲ್ಲೂಕಿನ ಭೀ.ಗುಡಿ ಹೆಲಿಕ್ಯಾಪ್ಟರ್ ಗ್ರೌಂಡ್ ಸಮೀಪದ 55 ವರ್ಷದ ಮಹಿಳೆ, ಶಹಾಪುರ ತಾಲ್ಲೂಕಿನ ದಿಗ್ಗಿ ಗ್ರಾಮದ 30 ವರ್ಷದ ಮಹಿಳೆ, ಹಾಲಬಾವಿ ಗ್ರಾಮದ 6 ವರ್ಷದ ಬಾಲಕ ಗೋಗಿ ಗ್ರಾಮದ 28 ವರ್ಷದ ಮಹಿಳೆಗೆ ಕೋವಿಡ್‌ ದೃಢಪಟ್ಟಿದೆ.

ಗುರುಮಠಕಲ್ ತಾಲ್ಲೂಕಿನ ನಂದೆಪಲ್ಲಿ ಗ್ರಾಮದ 26 ವರ್ಷದ ಪುರುಷ, ಯದ್ಲಾಪುರದ 34 ವರ್ಷದ ಪುರುಷ, 23 ವರ್ಷದ ಮಹಿಳೆ, 24 ವರ್ಷದ ಮಹಿಳೆ, 20 ವರ್ಷದ ಮಹಿಳೆಗೆ ಸೋಂಕು ತಗುಲಿದೆ.

ಶಹಾಪುರ ನಗರದ ವ್ಯಕ್ತಿ, ಭೀಮರಾಯನಗುಡಿ ಹೆಲಿಕ್ಯಾಪ್ಟರ್ ಗ್ರೌಂಡ್ ಸಮೀಪದ ಹಾಗೂ ದಿಗ್ಗಿ ಗ್ರಾಮದ ಮಹಿಳೆಯರ ಸಂಪರ್ಕದ ಹಿನ್ನೆಲೆಯನ್ನು ಪತ್ತೆ ಹಚ್ಚಲಾಗುತ್ತಿದೆ. ಹಾಲಬಾವಿ ಗ್ರಾಮದ ಬಾಲಕ ಪಿ-16868 ವ್ಯಕ್ತಿಯ ಸಂಪರ್ಕದ ಹಿನ್ನೆಲೆ ಹೊಂದಿದ್ದಾನೆ. ಉಳಿದವರು ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದಾರೆ. ಮಹಾರಾಷ್ಟ್ರದ ಮುಂಬೈ, ಸೊಲ್ಲಾಪುರ, ಗುಜರಾತ್, ತೆಲಂಗಾಣ, ಹೈದರಾಬಾದ್‍ನಿಂದ ಯಾದಗಿರಿ ಜಿಲ್ಲೆಗೆ ಹಿಂದಿರುಗಿರುತ್ತಾರೆ ಎಂದು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು