ಗುರುವಾರ , ಜುಲೈ 29, 2021
24 °C

‘ಕೃಷಿ ಭೂಮಿ ಖರೀದಿ ಕಾನೂನು ರದ್ದುಪಡಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಭೂ ಸುಧಾರಣೆಗೆ ತಿದ್ದುಪಡಿ ಮಾಡಿದ ಕಾಯ್ದೆಯಿಂದ ಕೃಷಿ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರಲಿದೆ. ಕೂಡಲೇ ಕಾಯ್ದೆಯನ್ನು ಮೊದಲಿನ ರೂಪಕ್ಕೆ ತನ್ನಿ ಇಲ್ಲವೇ ಗುತ್ತಿಗೆ ಆಧಾರದ ಮೇಲೆ ಕೃಷಿ ಭೂಮಿ ಹೊಂದುವ ಕಾನೂನು ರೂಪಿಸುವಂತೆ ಕಿಸಾನ್ ಕಾಂಗ್ರೆಸ್‌ನ ಜಿಲ್ಲಾ ಕಾರ್ಯಾಧ್ಯಕ್ಷ ಮಾಣಿಕರೆಡ್ಡಿ ಕುರಕುಂದಿ ಆಗ್ರಹಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಈ ಕಾಯ್ದೆ  ಕಾರ್ಪೋರೆಟ್ ವಲಯದವರಿಗೆ ಪರೋಕ್ಷವಾಗಿ ಅನುಕೂಲ ಮಾಡಿಕೊಡಲು ವೇದಿಕೆ ಸಿದ್ಧಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಈ ಕಾಯ್ದೆಯಿಂದ ಮೇಲ್ನೊಟಕ್ಕೆ ಪ್ರಗತಿಪರ ಎನಿಸಿದರೂ ನಂತರದ ದಿನಗಳಲ್ಲಿ ಆಹಾರ ಉತ್ಪಾದನೆ ಮೇಲೆ ಭಾರಿ ಹೊಡೆತ ಬೀಳಲಿದ್ದು, ಕೃಷಿ ಕ್ಷೇತ್ರ ನಾಶವಾಗಲಿದೆ ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸಣ್ಣ ಪುಟ್ಟ ರೈತರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಇವರಿಗೆ ಇರುವ ಭೂಮಿಯ ಭದ್ರತೆಯ ಮೇಲೆ ಜೀವನ ನಡೆಸುತ್ತಿದ್ದಾರೆ. ಮದುವೆ, ಇನ್ನಿತರ ಪ್ರತಿಯೊಂದಕ್ಕೂ ಕೃಷಿ ಭೂಮಿಯ ಭದ್ರತೆ ಆಧರಿಸಿ ಸಾಲ ಪಡೆಯುತ್ತಿದ್ದಾರೆ. ಇದು ಇನ್ನು ಮುಂದೆ ತಪ್ಪಿ ಹೋಗುವ ಸಾಧ್ಯತೆ ಹೆಚ್ಚಾಗಿದೆ. ಭೂ ಬ್ಯಾಂಕುಗಳು ಸ್ಥಾಪನೆಯಾಗಲಿವೆ. ಆ ಮೂಲಕ ಭೂಮಿಯ ಮೇಲೆ ಕಾರ್ಪೋರೇಟ್ ಹಿಡಿತ ಹೆಚ್ಚಾಗುತ್ತದೆ. ಆಹಾರ ಸ್ವಾವಲಂಬನೆ ಕನಸಿನ ಮಾತಾಗುತ್ತದೆ. ಕೃಷಿ ಉತ್ಪನ್ನಗಳ ಬೆಲೆ ಗಗನಕ್ಕೇರಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು