ಸುರಪುರ: ‘ಸಂವಿಧಾನದ ಮೂಲ ಆಶಯದಂತೆ ಎಲ್ಲರಿಗೂ ನ್ಯಾಯ ಸಿಗಬೇಕು. ಕಕ್ಷಿದಾರರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಹೆಚ್ಚುವರಿ 2ನೇ ಜಿಲ್ಲಾ ಸೇಷನ್ಸ್ ಕೋರ್ಟ್ ಮಂಜೂರು ಮಾಡಲಾಗಿದೆ. ಕಕ್ಷಿದಾರರಿಗೆ ನ್ಯಾಯ ದೊರಕಿಸಲು ವಕೀಲರು ಶ್ರಮವಹಿಸಬೇಕು’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.

ಇಲ್ಲಿನ ಕೋರ್ಟ್ ಸಂಕೀರ್ಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 2ನೇ ಹೆಚ್ಚುವರಿ ಜಿಲ್ಲಾ ಸೇಷನ್ಸ್ ನ್ಯಾಯಾಲಯದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೋರ್ಟ್ ಉದ್ಘಾಟನೆ ಬಳಿಕ ಜನರಿಗೆ ನ್ಯಾಯ ಒದಗಿಸಿ ಕೊಡುವ ಹೆಚ್ಚಿನ ಜವಾಬ್ದಾರಿ ವಕೀಲರ ಮೇಲಿದೆ. ಆ ನಿಟ್ಟಿನಲ್ಲಿ ಅವರು ಸೇವೆ ನೀಡಿ ಜನರಿಗೆ ನ್ಯಾಯ ಒದಗಿಸುವ ಮೂಲಕ ಕೋರ್ಟ್ ಸ್ಥಾಪಿಸಿರುವುದನ್ನು ಸಾರ್ಥಕಗೊಳಿಸಬೇಕು’ ಎಂದು ಸಲಹೆ ನೀಡಿದರು.

ಹೈಕೋರ್ಟ್ ನ್ಯಾಯಮೂರ್ತಿ ಅಶೋಕ್ ಕಿಣಗಿ ಮಾತನಾಡಿ, ‘ಕೋರ್ಟ್ ಸ್ಥಾಪನೆ ಕೊಡುಗೆ ನಿವೃತ್ತ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ ಅವರಿಗೆ ಸಲ್ಲುತ್ತದೆ. ಅವರ ಕನಸು ಇಂದು ನನಸಾಗಿದೆ. ಕಲ್ಯಾಣ ಕರ್ನಾಟಕ ಭಾಗದಿಂದ ಆಯ್ಕೆಯಾದ ಪ್ರಥಮ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಂದು ಹೇಳಲು ಹೆಮ್ಮೆಯನ್ನಿಸುತ್ತದೆ. ಯಾದಗಿರಿ ಜಿಲ್ಲೆಯಲ್ಲಿ 47 ಸಾವಿರ ಪ್ರಕರಣಗಳು ಲೋಕ ಅದಾಲತ್ನಲ್ಲಿ ಇತ್ಯರ್ಥವಾಗಿರುವುದು ಪತ್ರಿಕೆಗಳಲ್ಲಿ ಓದಿ ಸಂತೋಷವಾಯಿತು. ಈ ಶ್ರೇಯಸ್ಸು ಎಲ್ಲಾ ನ್ಯಾಯಾಧೀಶರಿಗೂ ಮತ್ತು ವಕೀಲರಿಗೆ ಸಲ್ಲುತ್ತದೆ. ಅವರ ಪ್ರಯತ್ನ ಫಲವಾಗಿ ಇಷ್ಟೊಂದು ಕೇಸ್ಗಳು ಬಗೆಹರಿಯಲು ಸಾಧ್ಯವಾಗಿದೆ’ ಎಂದು ತಿಳಿಸಿದರು.

ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಪಿ.ಎಸ್.ದಿನೇಶ್ಕುಮಾರ ಮಾತನಾಡಿ, ‘ಇಲ್ಲಿನ ವಕೀಲರ ಸಂಘದವರು ಹೆಚ್ಚುವರಿ ಸೇಷನ್ಸ್ ಕೋರ್ಟ್ ಬೇಕು ಎಂದು ನನ್ನ ಬಳಿ ಪ್ರಸ್ತಾವ ತಂದಿದ್ದರು. ಕಾನೂನು ರೀತಿಯಲ್ಲಿ ಆಗುವುದಾದರೆ ಮಾಡೋಣ ಎಂದು ಭರವಸೆ ನೀಡಿ ಮಂಜೂರಿ ಮಾಡಿಸಿದೆ. ನಂತರ ಅನೇಕರು ನಾನಾ ಹಂತಗಳಲ್ಲಿ ಮಂಜೂರಾತಿಗೆ ಸಹಕರಿಸಿದರು. ವಕೀಲರೆಲ್ಲರ ವೈಯಕ್ತಿಕ ಸಂಘಟನೆ ಕೂಡ ಇದಕ್ಕೆ ಕಾರಣವಾಯಿತು. ಈ ಶ್ರೇಯಸ್ಸು ನನ್ನದಲ್ಲ, ನಿಮ್ಮೆಲ್ಲರದು’ ಎಂದರು.

‘ಈ ಸೇಷನ್ಸ್ ಕೋರ್ಟ್ನಲ್ಲಿ 700 ವ್ಯಾಜ್ಯಗಳು ಇರುವುದಾಗಿ ಕೇಳಿರುವೆ. ವಕೀಲರ ತಮ್ಮ ಸಹಕಾರದಿಂದ ಆದಷ್ಟು ಶೀಘ್ರವೇ ಇತ್ಯರ್ಥಪಡಿಸಿಕೊಳ್ಳಬೇಕು. ಈ ಕೋರ್ಟ್ನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಿಟ್ಟಿನಲ್ಲಿ ಎಲ್ಲರೂ ಕಾರಣೀಭೂತರಾಗಬೇಕು, ಇದಕ್ಕೆ ಪ್ರತಿಯೊಬ್ಬರ ಸಹಕಾರ ಅಗತ್ಯವಾಗಿದೆ. ನಮ್ಮೂರಿನಲ್ಲಿ ಈ ಕೋರ್ಟ್ ಇರುವುದು ನಿಜಕ್ಕೂ ಹೆಮ್ಮೆಪಡುವ ವಿಷಯ. ಈ ಕಾರ್ಯಕ್ರಮಕ್ಕೆ ಮೂವರು ನ್ಯಾಯಮೂರ್ತಿಗಳು ಆಗಮಿಸಿ ಯಶಸ್ವಿಗೊಳಿಸಿರುವುದು ಸಂತೋಷದ ಸಂಗತಿ’ ಎಂದರು.

ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಯಾದಗಿರಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಾಧೀಶೆ ಕೆ.ಎಸ್.ಹೇಮಲೇಖಾ 2ನೇ ಹೆಚ್ಚುವರಿ ಜಿಲ್ಲಾ ಸೇಷನ್ಸ್ ಕೋರ್ಟ್ ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾ ಪ್ರಧಾನ ಹಾಗೂ ಸತ್ರ ನ್ಯಾಯಾಧೀಶ ಮರುಳಸಿದ್ಧಾರಾಧ್ಯ ಎಚ್.ಜಿ ವೇದಿಕೆಯಲ್ಲಿದ್ದರು. ಯಾದಗಿರಿ, ಸುರಪುರ, ಶಹಾಪುರ ಕೋರ್ಟ್ನ ನ್ಯಾಯಾಧೀಶರು, ಶಹಾಪುರ, ಕಲಬುರಗಿ, ಯಾದಗಿರಿ, ಲಿಂಗಸೂಗೂರು, ದೇವದುರ್ಗ ವಕೀಲರು, ಕಕ್ಷಿದಾರರು, ಸಾರ್ವಜನಿಕರು, ನ್ಯಾಯಾಲಯಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.

ವಕೀಲ ನಿಂಗಣ್ಣ ಚಿಂಚೋಡಿ ಪ್ರಾಸ್ತಾವಿಕ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ರಮಾನಂದ ಕವಲಿ ಸ್ವಾಗತಿಸಿದರು. ವಕೀಲೆ ಜ್ಯೋತಿ ನಾಯಕ ಪ್ರಾರ್ಥಿಸಿದರು. ವಕೀಲರಾದ ನಂದಕುಮಾರ ಕನ್ನೆಳ್ಳಿ ನಿರೂಪಿಸಿದರು. ಮಲ್ಲಿಕಾರ್ಜುನ ಮಂಗ್ಯಾಳ ವಂದಿಸಿದರು.

‘ನ್ಯಾಯಾಲಯ ಪವಿತ್ರ ಸ್ಥಳ’

‘ಜನ ನ್ಯಾಯ ಪಡೆಯುವ ವಿಶ್ವಾಸಾರ್ಹ ವೇದಿಕೆಯಾಗಿರುವ ನ್ಯಾಯಾಲಯ ಪವಿತ್ರ ಸ್ಥಳವಾಗಿದೆ. ಇದು ಸತ್ಯವನ್ನು ಹುಡುಕುವ ನ್ಯಾಯವನ್ನು ಸ್ಥಾಪಿಸುವ ಮತ್ತು ಜನರನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಸುರಪುರದಲ್ಲಿ 2ನೇ ಹೆಚ್ಚುವರಿ ಜಿಲ್ಲಾ ಸೇಷನ್ಸ್ ಕೋರ್ಟ್ ಉದ್ಘಾಟನೆಯಾಗಿರುವುದು ಸಂತೋಷದ ಸಂಗತಿ. ಈ ನೆಲದ ಹೆಮ್ಮೆಯ ಪುತ್ರ ನಿವೃತ್ತ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ ಅವರು ಈ ನ್ಯಾಯಾಲಯದ ಮಂಜೂರಾತಿಗೆ ಸಹಕರಿಸಿದ್ದಾರೆ’ ಎಂದು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಯಾದಗಿರಿ ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶೆ ಕೆ.ಎಸ್.ಹೇಮಲೇಖಾ ಹೇಳಿದರು.

‘ಸುರಪುರ ಮರೆತಿಲ್ಲ’

ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಪಿ.ಎಸ್.ದಿನೇಶಕುಮಾರ ಅವರು ಸುರಪುರವನ್ನು ಎಂದೂ ಮರೆತಿಲ್ಲ. ತವರಿನ ಅಭಿಮಾನದಿಂದ ಈ ಕೋರ್ಟ್ ಸ್ಥಾಪಿಸಲು ಸಹಕರಿಸಿದ್ದಾರೆ. ವಕೀಲರು ಶ್ರದ್ಧೆ ವಹಿಸಿ ಕೆಲಸ ಮಾಡಬೇಕು. ಸಂವಿಧಾನದ ಹಕ್ಕುಗಳನ್ನು ಕಕ್ಷಿದಾರರಿಗೆ ತಲುಪಿಸುವ ಜವಾಬ್ದಾರಿ ನ್ಯಾಯಾಧೀಶರ ಮತ್ತು ನ್ಯಾಯವಾದಿಗಳ ಕೈಯಲಿದೆ ಎಂದು ನ್ಯಾಯಮೂರ್ತಿ ಹೆಚ್.ಟಿ.ನರೇಂದ್ರ ಪ್ರಸಾದ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.