ಸುರಪುರ: ತಾಲ್ಲೂಕಿನ ಆಲ್ದಾಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಈಶ್ವರಪ್ಪ ಬಡಿಗೇರ ಅವರನ್ನು ಡಿಡಿಪಿಐ ಮಂಜುನಾಥ ಗುರುವಾರ ಅಮಾನತು ಮಾಡಿದ್ದಾರೆ.
ಈಶ್ವರಪ್ಪ ಅವರು ವಿದ್ಯಾರ್ಥಿನಿಯರೊಂದಿಗೆ ಅನುಚಿತವಾಗಿ ವರ್ತಿಸುತ್ತಾರೆ ಎಂದು ಶಾಲೆಯ ಮುಖ್ಯಶಿಕ್ಷಕ ಮತ್ತು ಎಸ್‍ಡಿಎಂಸಿ ಸದಸ್ಯರು ದೂರು ನೀಡಿದ್ದ ಹಿನ್ನಲೆ ಕ್ಷೇತ್ರ ಶಿಕ್ಷಣಾಧಿಕಾರಿ ಯಲ್ಲಪ್ಪ ಕಾಡ್ಲೂರು ಅವರು ಬುಧವಾರ ಶಾಲೆಗೆ ಭೇಟಿ ನೀಡಿ ವಿಚಾರಣೆ ನಡೆಸಿ ಡಿಡಿಪಿಐಗೆ ವರದಿ ಸಲ್ಲಿಸಿದ್ದರು.