ಶಹಾಪುರ: ‘ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕೆಲ ದಿನಗಳಿಂದ ಅನಿವಾರ್ಯ ಕಾರಣದಿಂದ ತುರ್ತು ಸೇವೆಗಳು ಸ್ಥಗಿತಗೊಂಡಿದ್ದವು. ಈಗ ಆಸ್ಪತ್ರೆಯಲ್ಲಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ಪದ್ಮಾನಂದ ಗಾಯಕವಾಡ್ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, ಡಯಾಲಿಸಿಸ್, ಸಿಟಿ ಸ್ಕಾನಿಂಗ್, ಅಲ್ಟ್ರಾಸೌಂಡ್, ಎಕ್ಸರೇ, ಬಿಪಿ, ಶುಗರ್ ಜೊತೆಗೆ ಕಣ್ಣು, ಮೂಗು, ಗಂಟಲು, ಸಂಬಂಧಿಸಿದ ಚಿಕಿತ್ಸೆಗಳು ಅಲ್ಲದೇ ಗರ್ಭಿಣಿ ತಾಯಂದಿರಿಗೆ ಸೀಜರಿನ್, ಸಂತಾನಹರಣ ಶಸ್ತ್ರಚಿಕಿತ್ಸೆ, ಹರ್ನಿಯಾ, ಮೂಲವ್ಯಾದಿ, ಮುಳೆ ಮುರಿತ ಸೇರಿ ಇತರೆ ತುರ್ತು ಶಸ್ತ್ರ ಚಿಕಿತ್ಸೆಗಳನ್ನು ಪ್ರಾರಂಭ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

‘ಆಯುಷ್ಮಾನ ಭಾರತ ಸೇರಿ ಅನೇಕ ಉಚಿತ ಸೌಲಭ್ಯಗಳು ಸಿಗಲಿವೆ. ಸರ್ಕಾರಿ ಆಸ್ಪತ್ರೆಯಲ್ಲಿ ಒಟ್ಟು 18 ಜನ ನುರಿತ ತಜ್ಞ ವೈದ್ಯರಿದ್ದಾರೆ. 24 ಗಂಟೆ ಕಾಲ ಸಾರ್ವತ್ರಿಕ ಚಿಕಿತ್ಸೆಗೆ ಸರ್ಕಾರಿ ವೈದ್ಯರು ಸಿದ್ಧರಿದ್ದಾರೆ. ರಕ್ತದ ಬಗೆಯ ಎಲ್ಲಾ ಪರೀಕ್ಷೆಗಳನ್ನು ಮಾಡಲು ಖಾಸಗಿ ಲ್ಯಾಬ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಪ್ರತಿ ಮಂಗಳವಾರ ಮಕ್ಕಳ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.