ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನಂದ್ ಸಿಂಗ್ ಕಾಂಗ್ರೆಸ್ ಸೇರ್ಪಡೆ ಊಹಾಪೋಹ: ರಾಜೂಗೌಡ

Last Updated 31 ಜನವರಿ 2022, 16:31 IST
ಅಕ್ಷರ ಗಾತ್ರ

ಯಾದಗಿರಿ: ‘ಸಚಿವ ಆನಂದ್ ಸಿಂಗ್ ಕಾಂಗ್ರೆಸ್ ಸೇರುವುದು ಉಹಾಪೋಹ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಸಚಿವ ಆನಂದ ಸಿಂಗ್‌ ಬೆಂಗಳೂರಿನಲ್ಲಿ ಸೌಹಾರ್ದಯುತ ಭೇಟಿಯಾಗಿದ್ದಾರೆ’ ಎಂದು ಸುರಪುರ ಶಾಸಕ ರಾಜೂಗೌಡ (ನರಸಿಂಹನಾಯಕ) ಹೇಳಿದ್ದಾರೆ.

ಹುಣಸಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ‘ಡಿ.ಕೆ.ಶಿವಕುಮಾರ್ ಮತ್ತು ಸಚಿವ ಆನಂದ್ ಸಿಂಗ್ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಮುಖಂಡರ ಹೇಳಿಕೆಯಿಂದ ಯಾರಿಗೂ ಭೇಟಿಯಾಗದ ಪರಿಸ್ಥಿತಿ ಬಂದಿದೆ’ ಎಂದರು.

‘ನಾನು 2004ರಲ್ಲಿ ಶಾಸಕನಾಗಿದ್ದಾಗ ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಜೊತೆ ಓಡಾಡಿದರೆ ಖುಷಿಯಾಗುತ್ತಿತ್ತು. ಮೊದಲು ಯಾರನ್ನು ಬೇಕಾದರೂ ಭೇಟಿ ಆಗಬಹುದಿತ್ತು. ಈಗ ಯಾರನ್ನಾದರೂ ಭೇಟಿಯಾಗುವುದು, ಮದುವೆಗೆ ಹೋಗುವುದೂ ಚಿಂತೆ ಆಗುತ್ತಿದೆ’ ಎಂದರು.

‘ಆನಂದ್ ಸಿಂಗ್ ಕೇಳಿಯೇ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಲಾಗಿದೆ. ಸಚಿವರು ಕೇವಲ ತಮ್ಮ ಕ್ಷೇತ್ರದಲ್ಲಿಯೇ ಓಡಾಡುತ್ತಿದ್ದರು. ಇದರಿಂದ ಎರಡು ಜಿಲ್ಲೆಗಳಲ್ಲಿ ಪಕ್ಷ, ಕೆಲಸ ಮಾಡಬಹುದು. ಮುಖ್ಯಮಂತ್ರಿ ವಿನೂತನ ಪ್ರಯೋಗ ಮಾಡಿದ್ದಾರೆ’ ಎಂದರು.

‘ಕತ್ತಿ ಬ್ರದರ್ಸ್ ಕಾಂಗ್ರೆಸ್‌ಗೆ ಹೋಗುವುದಿಲ್ಲ. ಉಮೇಶ್ ಕತ್ತಿಯವರು ಸಚಿವರಾಗಿ ಒಳ್ಳೆಯ ಕೆಲಸ‌ ಮಾಡುತ್ತಿದ್ದಾರೆ. ಯಾರೂ ಕಾಂಗ್ರೆಸ್‌ಗೆ ಹೋಗುವುದಿಲ್ಲ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT