ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ: ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ

Last Updated 25 ಫೆಬ್ರುವರಿ 2022, 4:09 IST
ಅಕ್ಷರ ಗಾತ್ರ

ಯಾದಗಿರಿ:ತಾಲ್ಲೂಕಿನಸೈದಾಪುರ ಸಮುದಾಯದ ಆರೋಗ್ಯ ಕೇಂದ್ರದಲ್ಲಿಕ್ರೈ ಸಂಸ್ಥೆಯ ವತಿಯಿಂದ ಕೊರೊನಾ ವಾರಿಯರ್ಸ್‌ಗಳಿಗೆ ಸನ್ಮಾನ ಮತ್ತು ಕೋವಿಡ್–19 ರ ಕುರಿತು ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಕಾರ್ಯಕ್ರಮ ಉದ್ದೇಶಿಸಿ ಸಮುದಾಯ ಆಸ್ಪತ್ರೆಯ ಡಾ. ಜ್ಯೋತಿ ಕಟ್ಟಿಮನಿ ಮಾತನಾಡಿ, ಕೋವಿಡ್ ಬಗ್ಗೆ ಜಾಗೃತಿ ಇರಲಿ, ಭಯ ಬೇಡ. ನಾವೆಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು. ಯಾರೂ ಲಸಿಕೆ ಪಡೆದಿಲ್ಲವೋ. ಅಂಥವರು ಕಡ್ಡಾಯವಾಗಿ ಚುಚ್ಚುಮದ್ದು ಪಡೆಯಬೇಕು ಎಂದು ಹೇಳಿದರು.

ಸರ್ಕಾರದ ಜೊತೆಗೆ ಸಂಘ–ಸಂಸ್ಥೆಗಳು ಕೈಜೋಡಿಸಿ ಕೆಲಸ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ನಮ್ಮ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ಬರುವ ಹಳ್ಳಿಗಳಿಗೆ ಹೋಗಿ ಸಾರ್ವಜನಿಕರಿಗೆ ಲಸಿಕೆ ಕುರಿತು ಅರಿವು ಮೂಡಿಸಿದ ಕ್ರೈ ಸಂಸ್ಥೆ ನಮಗೆ ಸಹಕಾರಿಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕ್ರೈ ಸಂಸ್ಥೆಯ ಸಿಬ್ಬಂದಿ ತಾಯಪ್ಪ ಹೆಗಸನಹಳ್ಳಿ, ಸಂಸ್ಕಾರ ಪ್ರತಿಷ್ಠಾನ ನಿರ್ದೇಶಕ ವಿಠ್ಠಲ್ ಚಿಕಣಿ, ಡಾ.ಮನಲ್ಲಿ ದೇಶಪಾಂಡೆ , ಡಾ ಅಬ್ದುಲ್ ಭಾಷಾ, ಡಾ. ಫರಾಜ್, ಮಲಪ್ಪ ದೊಡ್ಮನಿ, ಆಶಾ ಕಾರ್ಯಕರ್ತೆಯರು ಹಾಗೂ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT