ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾದಗಿರಿ | ‘ಯುವಕರು ದುಶ್ಚಟಗಳಿಗೆ ಬಲಿಯಾಗದಿರಿ’

Last Updated 19 ಏಪ್ರಿಲ್ 2022, 7:13 IST
ಅಕ್ಷರ ಗಾತ್ರ

ಶಹಾಪುರ: ‘ಪ್ರತಿಯೊಬ್ಬರೂ ಆರೋಗ್ಯದ ಕಡೆ ಗಮನಹರಿಸಬೇಕು. ಉತ್ತಮ ಜೀವನ ನಡೆಸಬೇಕು. ದುಶ್ಚಟಗಳಿಗೆ ಯುವಕರು ಬಲಿಯಾಗಿ ಆರೋಗ್ಯವನ್ನು ಹಾಳು ಮಾಡಿಕೊಳ್ಳಬಾರದು. ನಿಯಮಿತವಾದ ಆಹಾರ ಸೇವನೆ ಹಾಗೂ ಮಾನಸಿಕ ನೆಮ್ಮದಿಗೆ ಯೋಗ ಮಾಡಬೇಕು’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ರಮೇಶ ಗುತ್ತೆದಾರ ತಿಳಿಸಿದರು.

ತಾಲ್ಲೂಕಿನ ಕೊಂಗಂಡಿ ಗ್ರಾಮದಲ್ಲಿ ಈಚೆಗೆ ನಡೆದ ಆಯುಷ್ಮಾನ್‌ ಭಾರತದ 4ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ,‘ಕೋವಿಡ್ ಸಂಕಷ್ಟದಿಂದ ನಾವೆಲ್ಲರೂ ಆರೋಗ್ಯದ ಪಾಠ ಕಲಿತಿದ್ದೇವೆ. ಕೊರೊನಾ ಹೋಗಿಲ್ಲ. ಆದರೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸುತ್ತ ಅದರ ಜೊತೆಗೆ ಜೀವನ ಸಾಗಿಸಬೇಕಾಗಿದೆ’ ಎಂದರು. ಹತ್ತಿಗೂಡೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ರೈಹಿಮುದ್ದೀನ್‌, ಗ್ರಾಮ ಪಂಚಾಯಿತಿ ಸದಸ್ಯ ಶರಣಗೌಡ ದಳಪತಿ, ತಾಯಣ್ಣ ಕೊಳ್ಳೂರ, ಹಣಮಂತ ದೊಡಮನಿ, ಸಾಯಿಬಣ್ಣ ರಾಜನಾಳ, ದುಂಡಪ್ಪ ಚವಾಣ್‌, ಆರೋಗ್ಯ ಸಹಾಯಕ ಅಧಿಕಾರಿ ಶರಣಪ್ಪ ಬೀರನೂರ ಹಾಗೂ ಶಂಕರ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT