ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವೇಶ್ವರ ಮೂರ್ತಿ ಅದ್ದೂರಿ ಮೆರವಣಿಗೆ

ದಾರಿಯುದ್ದಕ್ಕೂ ಜಗಜ್ಯೋತಿ ಮಹಾರಾಜಕೀ ಜೈ ಎಂಬ ಘೋಷಣೆ
Published 25 ಮೇ 2024, 16:11 IST
Last Updated 25 ಮೇ 2024, 16:11 IST
ಅಕ್ಷರ ಗಾತ್ರ

ಯಾದಗಿರಿ: ಬಸವ ಉತ್ಸವ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರ‌ ಮೂರ್ತಿಯ ಬೃಹತ್ ಮೆರವಣಿಗೆ ಗಂಜ್ ವೃತ್ತದಲ್ಲಿರುವ ಬಸವೇಶ್ವರ ನಾಮಫಲಕ್ಕೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ ಪುಷ್ಪಾರ್ಚನೆ ಸಲ್ಲಿಸಿದರು.

ಇದೇ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ ತುನ್ನೂರ, ಮಾಜಿ ಶಾಸಕ ವೆಂಕಟರಡ್ಡಿಗೌಡ ಮುದ್ನಾಳ ಅವರು ಬಸವ ಧ್ವಜ ಹಾರಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.

ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಬಸವೇಶ್ವರ‌ ಮೂರ್ತಿಯ ಬೃಹತ್ ಮೆರವಣಿಗೆಯೂ ಮೈಲಾಪುರ ಅಗಸಿ, ಚಕ್ರಕಟ್ಟಾ, ಮಹಾತ್ಮ ಗಾಂಧಿವೃತ್ತದ ಮೂಲಕ‌ ಅಮೃತೇಶ್ವರ ಮಂದಿರದ ವರೆಗೆ ಅದ್ದೂರಿ ಮೆರವಣಿಗೆ ನಡೆಯಿತು.

ಡಿಜೆ ಸಂಗೀತಕ್ಕೆ ಯುವಕರು ಕಣಿದ್ದು ಕುಪ್ಪಳಿಸಿದರು. ದಾರಿಯುದ್ದಕ್ಕೂ ಜಗಜ್ಯೋತಿ ಮಹಾರಾಜಕೀ ಜೈ ಎಂಬ ಘೋಷಣೆ ಮುಗಿಲು ಮುಟ್ಟಿತ್ತು.

ಮೆರವಣಿಗೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಸೋಮಶೇಖರ್ ಮಣ್ಣೂರ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ, ಮುಖಂಡರಾದ ಚಿದಾನಂದ ಕಾಳೆಬೆಳಗುಂದಿ, ಬಾಬುಗೌಡ ಅಗತೀರ್ಥ, ಸನ್ನಿಗೌಡ ತೂನ್ನೂರು, ಮಹೇಶರಡ್ಡಿ ಮುದ್ನಾಳ, ಮಂಜುಳಾ ಗೂಳಿ, ವೀಣಾ ಮೋದಿ, ಅವಿನಾಶ್ ಜಗನ್ನಾಥ, ರಾಕೇಶ್ ಜೈನ್‌, ಅಪ್ಪಣ್ಣ ಜೈನ್‌, ಶರಣುಗೌಡ ಮಾಲಿಪಾಟೀಲ, ರಮೇಶ್ ದೊಡ್ಡಮನಿ, ಗೌರಿಶಂಕರ ವಡಗೇರಾ, ಮಲ್ಲಿಕಾರ್ಜುನಗೌಡ ಅನಕಸೂಗುರ, ರಾಜು ಸ್ವಾಮಿ ಅಲಂಪಲ್ಲಿ, ಬಸವರಾಜ ಮೋಟ್ನನಳ್ಳಿ, ಸುಭಾಷ್ ದೇವದುರ್ಗ, ಭರತ್ ಕುಮಾರ್, ಅರವಿಂದ್ ಕೆಂಭಾವಿ, ಮಂಜುನಾಥ ವಟ್ಟಿ, ಸೂಗು, ನಾಗರಡ್ಡಿ ಬೋಮ್ಮರಡ್ಡಿ ಬಿಳ್ಹಾರ ಸೇರಿದಂತೆ ಅನೇಕ ಬಸವ ಉತ್ಸವ ಸದಸ್ಯರು ಭಾಗವಹಿಸಿದ್ದರು.

ಮೆರವಣಿಗೆಗೆ ಆಗಮಿಸಿದ ಬಸವ ಭಕ್ತರಿಗೆ ಶಂಕ್ರಣ್ಣ ಸಾಹು ವಡಗೇರಾ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಯಾದಗಿರಿಯಲ್ಲಿ ಬಸವ ಉತ್ಸವ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರ‌ ಮೂರ್ತಿಯ ಬೃಹತ್ ಮೆರವಣಿಗೆ ನಡೆಯಿತು
ಯಾದಗಿರಿಯಲ್ಲಿ ಬಸವ ಉತ್ಸವ ಸಮಿತಿ ವತಿಯಿಂದ ಜಗಜ್ಯೋತಿ ಬಸವೇಶ್ವರ‌ ಮೂರ್ತಿಯ ಬೃಹತ್ ಮೆರವಣಿಗೆ ನಡೆಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT