ಶನಿವಾರ, ಅಕ್ಟೋಬರ್ 24, 2020
23 °C
ವಿಆರ್‌ಬಿ ಮುದ್ನಾಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜನೆ

ಅಕ್ಟೋಬರ್ 20ಕ್ಕೆ ಮೂಳೆ ತಪಾಸಣೆ ಉಚಿತ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ‘ಅಸ್ಥಿ ಸಾಂದ್ರತಾ (ಮೂಳೆ) ಮಾಪಕ ಉಚಿತ ತಪಾಸಣೆ ಶಿಬಿರ ಅಕ್ಟೋಬರ್ 20ರಂದು ವಿಆರ್‌ಬಿ ಮುದ್ನಾಳ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಬೆಳಿಗ್ಗೆ 10ರಿಂದ ಸಂಜೆವರೆಗೆ ಹಮ್ಮಿಕೊಳ್ಳಲಾಗಿದೆ’ ಎಂದು ಆಸ್ಪತ್ರೆಯ ಡಾ.ವೀರಬಸವಂತರಡ್ಡಿ ಮುದ್ನಾಳ ತಿಳಿಸಿದರು.

‘ಅಂದು ವಿಶ್ವ ಆಸ್ಟಿಯೊಪೊರೋಸಿಸ್ (OSTEOPOROSIS) ದಿನದ ಅಂಗವಾಗಿ ಶಿಬಿರ ಹಮ್ಮಿಕೊಳ್ಳಲಾಗಿದೆ. 35 ವರ್ಷ ಮೇಲ್ಪಟ್ಟ ಪುರುಷರು, ಮಹಿಳೆಯರು ತಪಾಸಣೆ ಮಾಡಿಕೊಳ್ಳಬಹುದು‘ ಎಂದು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಬೆನ್ನು, ಸೊಂಟ, ಮೊಣಕಾಲು, ಸ್ನಾಯು ನೋವು ಇರುವವರಿಗೆ ಅತ್ಯಾಧುನಿಕ ಬಿಎಂಡಿ ಯಂತ್ರದಿಂದ ತಪಾಸಣೆ ಮಾಡಲಾಗುವುದು. ಜೊತೆಗೆ ಒಂದು ವಾರದ ಮಟ್ಟಿಗೆ ಉಚಿತ ಔಷಧಿ ವಿತರಿಸಲಾಗುವುದು. ನಿರ್ಲಕ್ಷ್ಯ ಮಾಡಿದರೆ ಮೂಳೆ ಸವೆತ ಅಥವಾ ಮುರಿತಕ್ಕೆ ಕಾರಣವಾಗಬಹುದು. ನಗರದ ಶುಭಂ ಪೆಟ್ರೋಲ್‌ ಬಂಕ್ ಹಿಂಭಾಗದ ಸಜ್ಜಲಶ್ರೀ ನಗರದಲ್ಲಿ ಆಸ್ಪತ್ರೆ ಇದ್ದು, ಶಿಬಿರದ ಪ್ರಯೋಜನೆ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ತಜ್ಞ ವೈದ್ಯ ಡಾ.ಸುನೀಲ್ ಮುಕನೂರ ಮಾತನಾಡಿ, ‘ವಯಸ್ಸು ಆದಂತೆ ಮೂಳೆ ಸಾಂದ್ರತೆ ಕಳೆದುಕೊಳ್ಳುತ್ತದೆ. ಇದನ್ನು ಕೂಡ ರಕ್ತಪರೀಕ್ಷೆ, ರಕ್ತದೊತ್ತಡ, ಮಧುಮೇಹದಂತೆ ಆಗಾಗ ಪರೀಕ್ಷೆ ಮಾಡಿಕೊಳ್ಳಬೇಕು. ಇದರಿಂದ ಮೂಳೆ ಉಳುಕುವುದು ತಪ್ಪುತ್ತದೆ. ಇದೊಂದು ಮಾರಕ ಕಾಯಿಲೆಯಾಗಿದೆ’ ಎಂದರು.

‘ವಿಟಮಿನ್‌ ಡಿ ಕೊರತೆಯಿಂದ ಮೂಳೆ ಸವೆತ ಉಂಟಾಗುತ್ತದೆ. ಸೂಕ್ತ ತಪಾಸಣೆ ಮಾಡಕೊಳ್ಳುವುದರಿಂದ ಇದನ್ನು ತಪ್ಪಿಸಬಹುದು’ ಎಂದರು.

ಈ ವೇಳೆ ಡಾ.ಬಸವರಾಜ ನರಸಣಗಿ, ಡಾ.ಅಮೋಘ ನರಸಣಗಿ, ಮಾರುತಿ ಕಲಾಲ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು