ಕೆಂಭಾವಿ: ತಾಲ್ಲೂಕಿನ ಮಂಗಳೂರ (ಮಾವಿನಮಟ್ಟಿ) ಗ್ರಾಮದಲ್ಲಿ ಶನಿವಾರ ರಸ್ತೆಯ ಮೇಲೆ ಆಟವಾಡುತ್ತಿದ್ದ ಎರಡು ವರ್ಷದ ಮಗುವಿನ ಮೇಲೆ ಕೆಕೆಆರ್ಟಿಸಿ ಬಸ್ ಗಾಲಿ ಹರಿದು ಗಂಭೀರವಾಗಿ ಗಾಯಗೊಂಡ ಮಗು ಸ್ಥಳದಲ್ಲೇ ಮೃತಪಟ್ಟಿದೆ.

ಗ್ರಾಮದ ಪರಸಪ್ಪ ಹುಣಸ್ಯಾಳ ಅವರ ಪುತ್ರಿ ಲಕ್ಷ್ಮಿ ಮೃತಳು. ಸ್ಥಳಕ್ಕೆ ಪಿಎಸ್ಐ ಅಮೋಜ ಕಾಂಬಳೆ ಅವರು ಭೇಟಿ ನೀಡಿ ಪರಿಶೀಲಿಸಿದ್ದು, ಕೆಂಭಾವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಲಕ್ಷ್ಮಿ ರಸ್ತೆ ಬದಿಯಲ್ಲಿ ಆಟವಾಡುತ್ತಿದ್ದಳು. ಕೂಡಲಗಿ ಗ್ರಾಮದಿಂದ ಸುರಪುರ ಪಟ್ಟಣಕ್ಕೆ ತೆರಳುತ್ತಿದ್ದ ಬಸ್, ಮಗುವಿನ ತಲೆಯ ಮೇಲೆ ಚಕ್ರ ಹರಿದಿದೆ. ಗಾಲಿಗೆ ಸಿಲುಕಿದ ತಲೆ ಛಿದ್ರವಾಗಿದ್ದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ಬಸ್ ಚಾಲಕ ಪರಾರಿಯಾಗಿದ್ದು, ಬಸ್ನಲ್ಲಿದ್ದ ನಿರ್ವಾಹಕನನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡು ಹಲ್ಲೆಗೆ ಯತ್ನಿಸಿದ್ದರು ಎಂದು ತಿಳಿದುಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.