ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೀರ್ಘದಂಡ ನಮಸ್ಕಾರದ ಮೂಲಕ ಹರಕೆ ತೀರಿಸಿದ ಕಾಂಗ್ರೆಸ್ ಕಾರ್ಯಕರ್ತ

Published 30 ಜೂನ್ 2023, 13:15 IST
Last Updated 30 ಜೂನ್ 2023, 13:15 IST
ಅಕ್ಷರ ಗಾತ್ರ

ನಾರಾಯಣಪುರ: ಸುರಪುರ ಮತಕ್ಷೇತ್ರದ ಶಾಸಕರಾಗಿ ರಾಜಾ ವೆಂಕಟಪ್ಪನಾಯಕ ಆಯ್ಕೆಯಾಗಿದ್ದಕ್ಕೆ ಹಗರಟಗಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಕಾಶೀನಾಥ ಅವರು ಸ್ವಗ್ರಾಮದಿಂದ ದೇವರಗಡ್ಡಿಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು.

ಹಗರಟಗಿಯಿಂದ ದೀರ್ಘದಂಡ ನಮಸ್ಕಾರ ಹಾಕಲು ಆರಂಭಿಸಿದ ಕಾಶೀನಾಥ ಅವರು ಶುಕ್ರವಾರ ದೇವರಗಡ್ಡಿ ಗ್ರಾಮಕ್ಕೆ ತಲುಪಿ ಗದ್ದೆಮ್ಮದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಹರಕೆ ಮುಟ್ಟಿಸಿದರು. 

ಶಾಸಕರಿಂದ ಸನ್ಮಾನ: ಶುಕ್ರವಾರ ದೇವರಗಡ್ಡಿ ಗ್ರಾಮಕ್ಕೆ ತೆರಳಿದ ಶಾಸಕ ರಾಜಾ ವೆಂಕಟಪ್ಪನಾಯಕ ಅವರು ಹರಕೆ ತೀರಿಸಿದ ಕಾರ್ಯಕರ್ತ ಕಾಶೀನಾಥ ಅವರನ್ನು ಸನ್ಮಾನಿಸಿ ಗೌರವಿಸಿದರು.

ಈ ವೇಳೆ ಮಾತನಾಡಿದ ಅವರು, ನಾನು ಶಾಸಕನಾಗಲಿ ಎಂದು ಕ್ಷೇತ್ರದ ಅನೇಕರು ಹರಕೆ ಹೊತ್ತಿದ್ದಾರೆ, ನಮ್ಮ ಕುಟುಂಬದ ಮೇಲೆ ಅವರು ಇಟ್ಟಿರುವ ಅಭಿಮಾನಕ್ಕೆ ನಾನು ಋಣಿ. ಕ್ಷೇತ್ರದ ಜನರ ಆಶೋತ್ತರಗಳನ್ನು ಈಡೇರಿಸುತ್ತೇನೆ ಎಂದು ಹೇಳಿದರು.

ಮುಖಂಡರಾದ ಅಮರಣ್ಣ ಕುಂಬಾರ, ಅನಿಫ್ ಮಾಸ್ತರ್, ಹಣಮೇಶ ಕುಲಕರ್ಣಿ, ಸುರೇಶ ನಾಯಕ, ಅಮರೇಶ ಕೋಳೂರ, ಯಮನಪ್ಪ ಜಂಜಿಗಡ್ಡಿ, ವಿರೇಶ ಕಂಬಳಿ, ಗ್ರಾ.ಪಂ ಸದಸ್ಯ ಅಮರೇಶ ಅಮರಾವತಗಿ, ಅಮರೇಶ ಪೂಜಾರಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT