ವಡಗೇರಾ: ಜಮೀನಿನಲ್ಲಿ ಇರುವ ಭತ್ತ ಹಾಗೂ ಹತ್ತಿ ಬೆಳೆಗಳಲ್ಲಿ ಪ್ರವಾಹದ ನೀರು ನುಗ್ಗಿರುವದರಿಮದ ಬೆಳೆಗಳು ಹಾಳಾಗಿವೆ ಬೆಳೆಗಳಲ್ಲಿ ಪ್ರವಾಹದ ನೀರು ಇರುವಾಗಲೇ ಬೆಳೆ ಹಾನಿ ಸಮೀಕ್ಷೆ ಮಾಡಬೇಕೆಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದ ಹೊರ ಭಾಗದಲ್ಲಿ ಭೀಮಾನದಿ ಹಿನ್ನಿರು ನುಗ್ಗಿ ಭತ್ತ ಹಾಗೂ ಹತ್ತಿ ಬೆಳೆ ಹಾನಿಯಾದಜಮೀನುಗಳಿಗೆ ಭೇಟಿ ನೀಡಿದ ನಂತರ ಅವರು ಮಾತನಾಡಿದರು.

ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಹೆಚ್ಚು ನೀರು ಬಿಡುಗಡೆ ಮಾಡಿದ ಪರಿಣಾಮ ಭೀಮಾನದಯ ಒಳ ಹರಿವು ಹೆಚ್ಚಾದ ಪರಿಣಾಮ ಭೀಮಾನದಿ ತೀರದ ನಾಯ್ಕಲ್ ಸೇರಿದಂತೆ ವಿವಿಧ ಗ್ರಾಮದ ರೈತರ ಬೆಳೆಗಳು ಹಾಳಾಗಿವೆ ರೈತರು ಆತಂಕ ಪಡುವ ಅಗತ್ಯವಿಲ್ಲ ಸಕಾಲದಲ್ಲಿ ಬೆಳೆ ಪರಿಹಾರವನ್ನು ಸರ್ಕಾರದ ವತಿಯಿಂದ ನೀಡಲು ಕ್ರಮಗಳನ್ನು ಕೈಗೊಳ್ಳಲಾಗುವದು ಎಂದು ಹೇಳಿದರು.

ಭೀಮಾನದಿಗೆ ಹೆಚ್ಚಿನ ನೀರು ಬಿಡುಗಡೆ ಮಾಡಿದ ಕಾರಣ ನಾಯ್ಕಲ್ ಸೇರಿದಂತೆ ಅನೇಕ ಕಡೆ ಬೆಳೆ ಹಾನಿಯಾಗಿದೆ. ಈಗಾಗಲೇ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ಮಾಡುತ್ತಿದ್ದಾರೆ. ರೈತರು ಕೂಡ ತಮ್ಮ ಬೆಳೆ ಹಾನಿ ಬಗ್ಗೆ ಅಧಿಕಾರಿಗಳಿಗೆ ಸರಿಯಾಗಿ ಮಾಹಿತಿ ಕೊಡಬೇಕೆಂದರು.ಯಾವುದೇ ಕಾರಣಕ್ಕು ಅಧಿಕಾರಿಗಳು ವಿಳಂಬ ಮಾಡದೆ ವರದಿಯನ್ನು ಶೀಘ್ರವೆ ಸಲ್ಲಿಸಬೇಕು ಎಂದು ಕಟ್ಟು ನಿಟ್ಟಿನ ಆದೇಶ ಮಾಡಿದರು.

ಈ ವೇಳೆ ವಡಗೇರಾ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಖಾಜಾ ಮೈನೊದ್ದಿನ್ ಮಿರ್ಚಿ, ಭಾಷುಮಿಯ್ಯ ಹೊಸಳ್ಳಿ, ಶೇಕಪ್ಪಗೌಡ, ಮಲ್ಲಿಕಾರ್ಜುನ ಅನಕಸೂಗುರು, ಮರೇಪ್ಪ, ಶರಣಪ್ಪ ,ಶಿವರಾಯ ನಾಟೇಕಾರ, ಶರಣಪ್ಪ ಕಾಡಂಗೇರಿ, ಅಬ್ಬಾಸಲಿ ಬಂದಗಿ, ಮೈಹೆಬೂಬ, ಖದೀರ ಸಾಬ್, ತಿಮ್ಮಯ್ಯ, ಬಸವರಾಜ, ಪ್ರವೀಣ ನಾಯ್ಕಲ್, ಭೀಮರಾಯ ತುಮಕೂರು, ಅಬ್ದುಲ್, ಮಲ್ಲಿಕಾರ್ಜುನರೆಡ್ಡಿ ,ಸುಭಾಷ್ ರೆಡ್ಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.