ನಾರಾಯಣಪುರ: ಸ್ಥಳೀಯ ಗಜಾನನ ಯುವಕ ಮಂಡಳಿಯವರಿಂದ ವಿವಿದೆಢೆ ಪ್ರತಿಷ್ಠಾಪಿಸಲ್ಪಟ್ಟ ಗಣೇಶ ಮೂರ್ತಿಗಳನ್ನು ಬುಧವಾರ ರಾತ್ರಿ ಭಕ್ತ ಗಣದ ಮಧ್ಯೆ ಅದ್ದೂರಿ ಮೆರವಣಿಗೆಯೊಂದಿಗೆ ಪಟಾಕಿ ಸಿಡಿಸಿ, ಪ್ರಸಾದ ವಿತರಣೆಯೊಂದಿಗೆ ವಿಸರ್ಜನಾ ಕಾರ್ಯ ನೆರವೇರಿಸಲಾಯಿತು.
ಪ್ರತಿಷ್ಠಾಪಿತ ಗಣೇಶನಿಗೆ ಐದು ದಿನಗಳ ಕಾಲ ನಿತ್ಯ ಬೆಳಿಗ್ಗೆ, ಸಂಜೆ ವೇಳೆ ಶ್ರದ್ಧಾ ಭಕ್ತಿಯಿಂದ ಪೂಜೆ ಮಾಡಲಾಯಿತು.
ಬಹುಮಾನ ವಿತರಣೆ: ಇಲ್ಲಿನ ಯುಕೆಪಿ ಕ್ಯಾಂಪ್ ಕಾಲೊನಿಯಲ್ಲಿ ಗಜಾನನ ಯುವಕ ಮಂಡಳಿಯವರು ಬುಧವಾರ ಗಣೇಶೋತ್ಸವ ಅಂಗವಾಗಿ ಆಯೋಜಿಸಿದ್ದ ವಾಲಿಬಾಲ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ಬಹುಮಾನ ವಿತರಿಸಲಾಯಿತು