ಮಂಗಳವಾರ, ಮೇ 26, 2020
27 °C
ವಾರದಲ್ಲಿ ಎರಡು ಹಲ್ಲೆ ಘಟನೆಗಳು ದಾಖಲು

ಹಲ್ಲೆಕೋರರ ಅಡ್ಡೆಯಾದ ಜಿಲ್ಲಾಸ್ಪತ್ರೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಯಾದಗಿರಿ: ಯುವಕರ ಗುಂಪಿನ ನಡುವೆ ಜಗಳವಾಗಿ ಗಾಯಗೊಂಡಿದ್ದ ಗಾಯಾಳು ಮೇಲೆ ಜಿಲ್ಲಾಸ್ಪತ್ರೆ ಒಳಗೆ ನುಗ್ಗಿ ಹಲ್ಲೆ ನಡೆಸಿರುವ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಶನಿವಾರ ಸಂಭವಿಸಿದೆ. ಹಲ್ಲೆ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿವೆ. ವಾರದಲ್ಲೇ ಎರಡನೇ ಗಲಾಟೆಗೆ ಜಿಲ್ಲಾಸ್ಪತ್ರೆ ಸಾಕ್ಷಿಯಾಗಿದೆ.

ತಾಲ್ಲೂಕಿನ ಪೊಗಲಾಪುರ ಗ್ರಾಮದ ಶಂಕರ, ಯಲ್ಲಾಲಿಂಗ ಹಲ್ಲೆಗೆ ಒಳಗಾದವರು. ಎಲ್ಹೇರಿ ಗ್ರಾಮದ ಅಜಯ್ ರೆಡ್ಡಿ ಎನ್ನುವರ ಕಡೆಯವರು ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.

ಘಟನೆ ವಿವರ

ನಗರದ ಖಾಸಗಿ ಕಾಲೇಜು ಬಳಿ ಬೈಕ್‌, ಕಾರು ಹಿಂದೆ ತೆಗೆಯುವ ವಿಷಯವಾಗಿ ಜಗಳ ಆರಂಭವಾಗಿದೆ. ಅಲ್ಲಿಯೇ ಇಬ್ಬರು ಪರಸ್ಪರ ಮಾರಮಾರಿ ಮಾಡಿಕೊಂಡಿದ್ದಾರೆ. ನಂತರ ಗಾಯಗೊಂಡ ಶಂಕರರನ್ನು ಅವರ ಅಣ್ಣ ಯಲ್ಲಾಲಿಂಗ ಜಿಲ್ಲಾಸ್ಪತ್ರೆಯ ತುರ್ತು ಚಿಕಿತ್ಸಾ ಘಟಕದಲ್ಲಿ ದಾಖಲಿಸಿದ್ದಾರೆ. ನಂತರ ಆಸ್ಪತ್ರೆಗೆ ಬಂದ ಎಲ್ಹೇರಿ ಗ್ರಾಮದ ಅಜಯ್ ರೆಡ್ಡಿ ಎನ್ನುವರ ಕಡೆಯವರಿಂದ ಹಲ್ಲೆ ಆಸ್ಪತ್ರೆಗೆ ನುಗ್ಗಿ ಹಲ್ಲೆ ಮಾಡಲಾಗಿದೆ. ಪೊಲೀಸ್ ಪೇದೆ ಎದುರೇ ನಡೆದ ಗಲಾಟೆ ಜಿಲ್ಲಾ ಆಸ್ಪತ್ರೆಯಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಯುವಕರ ಗುಂಪು ಪೊಲೀಸ್ ಅಧಿಕಾರಿಯನ್ನೇ ಬೆದರಿಸಿ ಹಲ್ಲೆಗೆ ಮುಂದಾಗಿದ್ದಾರೆ. ಎರಡು ದಿನದ ಹಿಂದೆ ಹಳಿಗೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗನಗೌಡ ಸ್ವಂತ ತಂಗಿ, ತಂಗಿ ಗಂಡನ ಮೇಲೆ ಆಸ್ಪತ್ರೆಯಲ್ಲಿಯೇ ಹಲ್ಲೆ ನಡೆಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.