ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ವೃದ್ಧಿ

ರಕ್ತದಾನ ಶಿಬಿರದಲ್ಲಿ ರಾಮಲಿಂಗೇಶ್ವರ ಅನಾಥ ಆಶ್ರಮದ ಶ್ರೀ ಅಭಿಮತ
Last Updated 2 ಫೆಬ್ರುವರಿ 2021, 16:42 IST
ಅಕ್ಷರ ಗಾತ್ರ

ಹುಣಸಗಿ: ‘ವಿಜ್ಞಾನ ಎಷ್ಟೇ ಮುಂದುವರಿದಿದ್ದರೂ ಕೃತಕವಾಗಿ ರಕ್ತವನ್ನು ಸೃಷ್ಟಿಸಲಾಗದು. ಆದ್ದರಿಂದ ರಕ್ತದಾನ ಶ್ರೇಷ್ಠ ದಾನ’ ಎಂದು ಗುಳಬಾಳ ರಾಮಲಿಂಗೇಶ್ವರ ಅನಾಥ ಆಶ್ರಮದ ಶ್ರೀ ಹೇಳಿದರು.

ತಾಲ್ಲೂಕಿನ ಗುಳಬಾಳ ಗ್ರಾಮದ ರಾಮಲಿಂಗೇಶ್ವರ ಅನಾಥ ಆಶ್ರಮದ ಮರಿ ಹುಚ್ಚೇಶ್ವರ ಸ್ವಾಮಿಗಳ 42ನೇ ಹುಟ್ಟು ಹಬ್ಬದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆಯು, ಯಾದಗಿರಿಯ ಡಾ.ಸುರಗಿಮಠ ರಕ್ತ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದಲ್ಲಿಮಾತನಾಡಿದರು.

‘ಕರ್ನಾಟಕ ರಕ್ಷಣಾ ವೇದಿಕೆಯ (ಶಿವರಾಮೇಗೌಡ ಬಣ) ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಅಂಗಡಿ ಮಾತನಾಡಿ, ‘ರಕ್ತದಾನದ ವಿಷಯದಲ್ಲಿ ಜನರಲ್ಲಿ ಆತಂಕಗಳಿವೆ. ಆದರೆ, ರಕ್ತದಾನದಿಂದ ಯಾವ ಸಮಸ್ಯೆಯೂ ಉಂಟಾಗುವುದಿಲ್ಲ. ಆರೋಗ್ಯವಂತರು ರಕ್ತ ನೀಡುವುದರಿಂದ ಅವರ ಆರೋಗ್ಯ ಇನ್ನೂ ಹೆಚ್ಚುತ್ತದೆ. ಎಲ್ಲರೂ ತಮ್ಮ ರಕ್ತದ ಗುಂಪನ್ನು ತಿಳಿದುಕೊಳ್ಳಬೇಕು. ಅದರಿಂದ ತುರ್ತು ಸಂದರ್ಭಗಳಲ್ಲಿ ರಕ್ತವನ್ನು ಪಡೆಯಲು ಹಾಗೂ ನೀಡಲೂ ಅನುಕೂಲವಾಗಲಿದೆ’ ಎಂದು ಸಲಹೆ ನೀಡಿದರು.

ಗುಡಕನಾಳ, ಕಲಕೇರಿ, ಕೊಡೇಕಲ್ಲ ಹಾಗೂ ಮನಗೂಳ ಶ್ರೀ, ಪಟ್ಟಣ ಪಂಚಾಯಿತಿ ಸದಸ್ಯ ನಾಗಯ್ಯಸ್ವಾಮಿ ದೇಸಾಯಿ ಗುರು, ವಿರೇಶ ಬಿ.ಚಿಂಚೋಳಿ, ಸೋಮಶೇಖರ ಸ್ಥಾವರಮಠ, ಎಪಿಎಂಸಿ ಅಧ್ಯಕ್ಷ ದೇವಣ್ಣ ಮಲಗಲದಿನ್ನಿ, ಬಸಣ್ಣ ದೇಸಾಯಿ, ಬಸವರಾಜ ಬಳಿ, ಕರವೇ ಜಿಲ್ಲಾ ಘಟಕದ ಗೌರವಾಧ್ಯಕ್ಷ ಅಯ್ಯಣ್ಣ ಹೂಗಾರ, ಮಹೇಶ ಸ್ಥಾವರಮಠ, ಪ್ರಭು ಆಲಾಳಮಠ ಹಾಗೂ ಗುಳಬಾಳ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT