ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಲಸಿಕೆಯಿಂದ ವಂಚಿತರಾಗದಂತೆ ನೋಡಿಕೊಳ್ಳಿ’

ಸಾರ್ವತ್ರಿಕ ಲಸಿಕೆ ಎರಡು ದಿನದ ಜಿಲ್ಲಾ ಮಟ್ಟದ ಆರೋಗ್ಯ ತರಬೇತಿ
Published 21 ಮಾರ್ಚ್ 2024, 5:45 IST
Last Updated 21 ಮಾರ್ಚ್ 2024, 5:45 IST
ಅಕ್ಷರ ಗಾತ್ರ

ಯಾದಗಿರಿ: ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿಯಲ್ಲಿ ಅರ್ಹ ಮಕ್ಕಳನ್ನು ಜಿಲ್ಲೆಯಲ್ಲಿ ಗುರುತಿಸಿ ಲಸಿಕೆಯಿಂದ ಮಕ್ಕಳು ವಂಚಿತರಾಗದಂತೆ ನಿಗಾವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಪ್ರಭುಲಿಂಗ ಮಾನಕರ್‌ ಹೇಳಿದರು.

ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಸಾರ್ವತ್ರಿಕ ಲಸಿಕೆ ಎರಡು ದಿನದ ಜಿಲ್ಲಾ ಮಟ್ಟದ ಆರೋಗ್ಯ ತರಬೇತಿ, ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಅಡಿಯಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಿಗೆ ಎರಡು ದಿನದ ಜಿಲ್ಲಾಮಟ್ಟದ ಆರೋಗ್ಯ ಕಾರ್ಯಕರ್ತರ ಕೈಪಿಡಿ ತರಬೇತಿಯಲ್ಲಿ ಅವರು ಮಾತನಾಡಿದರು.

ಮಗು ಜನಿಸಿದ ನಂತರ ಅದರ ಪಾಲನೆ ಹಾಗೂ ಪೋಷಣೆ ಕುರಿತು ತಾಯಿಗೆ ಹೆರಿಗೆಯಾದ ಸ್ಥಳದಲ್ಲಿಯೇ ಅರಿವು ಮೂಡಿಸಬೇಕು. ಆರೋಗ್ಯ ಸಿಬ್ಬಂದಿ, ಆಶಾ-ಅಂಗನವಾಡಿ ಕಾರ್ಯಕರ್ತೆಯರು, ಮನೆಮನೆಗೆ ಭೇಟಿ ನೀಡಿ ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸಬೇಕು. ಇದರಿಂದ ತಾಯಿ ಮತ್ತು ಮಕ್ಕಳ ಮರಣ ಪ್ರಮಾಣ ಕಡಿಮೆ ಮಾಡಬಹುದು ಎಂದರು.

ವ್ಯವಸ್ಥಿತವಾದ ಲಸಿಕಾ ಗುಣಮಟ್ಟದ ಲಸಿಕಾ ಕೇಂದ್ರಗಳನ್ನು ಹೇಗೆ ಕೈಗೊಳ್ಳಬೇಕೆಂದು, ಲಸಿಕೆಯಿಂದ ತಡೆಗಟ್ಟಬಹುದಾದ ಕಾಯಿಲೆಗಳ ಬಗ್ಗೆ, ಗುಣಮಟ್ಟದ ಉಪ ಕೇಂದ್ರದ ಸೂಕ್ಷ್ಮಕ್ರಿಯ ಯೋಜನೆ ತಯಾರಿಸುವ ಕುರಿತು ಹೀಗೆ ಹಲವಾರು ವಿಷಯಗಳು ಕುರಿತು ತಿಳಿಸಲಾಯಿತು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಲ್ಲಪ್ಪ.ಕೆ ತರಬೇತಿಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ತರಬೇತಿಯಲ್ಲಿ ಡಾ.ಅನಿಲ್ ಕುಮಾರ್ ಎಸ್ ತಾಳಿಕೋಟಿ, ಎಸ್.ಎಂ.ಕಲಬುರಗಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ. ಹನುಮಂತ ರೆಡ್ಡಿ, ಮಲ್ಹಾರ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ. ಯಶ್ವಂತ್ ರಾಠೋಡ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಮನೋಹರ್ ಎಸ್ ಪಾಟೀಲ, ತಾಲ್ಲೂಕು ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿ ಹನುಮಂತರಾವ್ ಕುಲಕರ್ಣಿ, ಮೆಹಬೂಬ್ ಜಿಲ್ಲಾ ಲಸಿಕಾ ಕ್ಷೇತ್ರ ಪರಿವೀಕ್ಷಕರು ಹಾಗೂ ಆರ್‌ಸಿಎಚ್ ಅಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT