ಕೆಂಭಾವಿ:ಮಕ್ಕಳ ಕಲಿಕಾ ಅಭಿವೃದ್ಧಿಗೆ ಶೈಕ್ಷಣಿಕ ಮೇಳಗಳು ಸಹಕಾರಿಯಾಗಿವೆ ಎಂದು ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಂಬಣ್ಣ ತಳವಾರ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಜೀಂ ಪ್ರೇಮಜಿ ಫೌಂಡೇಶನ್ ವತಿಯಿಂದ ಗುರುವಾರ
ಹಮ್ಮಿಕೊಂಡಿದ್ದ ಭಾಷಾ ಮತ್ತು ಗಣಿತ ಮೇಳದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇಳಗಳಿಂದ ಮಕ್ಕಳಲ್ಲಿ
ಗುಣಾತ್ಮಕ ಕಲಿಕೆ ಉಂಟಾಗಲು ಸಾಧ್ಯ. ಇಂತಹ ಶೈಕ್ಷಣಿಕ ಮೇಳಗಳಿಂದ ಮಕ್ಕಳಲ್ಲಿ ಯೋಚಿಸುವ, ಪ್ರಶ್ನಿಸುವ ಸಾಮರ್ಥ್ಯಕ್ಕೆ ಸಹಕಾರಿ ಎಂದರು.

ಭಾಷೆ ಮತ್ತು ಗಣಿತ ವಿಷಯದ ಚಟುವಟಿಕೆಗಳಾದ ಸನ್ನಿವೇಶ ನೋಡಿ ವಿವರಿಸುವದು. ಚಿತ್ರನೋಡಿ ಕಥೆ ರಚಿಸುವದು, ಸ್ವಂತ ವಾಕ್ಯ ಬಳಸಿ, ಗಾದೆ ಮಾತುಗಳು, ಪದ ರಚನೆ, ಕಥೆಗೆ ಶೀರ್ಷಿಕೆ ಬರೆಯುವದು, ಗಣಿತದ ಮೂಲಕ್ರಿಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಕ್ಕಳು ವಿವರಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಪವನ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು.

ಸಿಆರ್‌ಪಿ ಮಲ್ಲಣ್ಣ ಸುರಪುರ, ಶ್ರೀಶೈಲ್ ಪಾಸೋಡಿ, ಶಿಕ್ಷಕರಾದ ಮಾಬು ಪಟೇಲ್, ಸಿದ್ರಾಮಪ್ಪ, ಜಯಶ್ರೀ ಹಿರೇಮಠ, ವಿಠಲ ನಾಯಕ, ಜಯಂತಿ ಎಚ್, ವೆಂಕಟೇಶ, ಶ್ರೀಶೈಲ್, ರಾಜ ಅಹ್ಮದ್, ಬಾಬುಲಾಲ‌್, ಶಶಿಕಲಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.