ಶುಕ್ರವಾರ, ಜನವರಿ 24, 2020
16 °C

ಕಲಿಕೆಗೆ ಶೈಕ್ಷಣಿಕ ಮೇಳ ಸಹಕಾರಿ: ಅಂಬಣ್ಣ ತಳವಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಮಕ್ಕಳ ಕಲಿಕಾ ಅಭಿವೃದ್ಧಿಗೆ ಶೈಕ್ಷಣಿಕ ಮೇಳಗಳು ಸಹಕಾರಿಯಾಗಿವೆ ಎಂದು ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಅಂಬಣ್ಣ ತಳವಾರ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಅಜೀಂ ಪ್ರೇಮಜಿ ಫೌಂಡೇಶನ್ ವತಿಯಿಂದ ಗುರುವಾರ
ಹಮ್ಮಿಕೊಂಡಿದ್ದ ಭಾಷಾ ಮತ್ತು ಗಣಿತ ಮೇಳದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮೇಳಗಳಿಂದ ಮಕ್ಕಳಲ್ಲಿ
ಗುಣಾತ್ಮಕ ಕಲಿಕೆ ಉಂಟಾಗಲು ಸಾಧ್ಯ. ಇಂತಹ ಶೈಕ್ಷಣಿಕ ಮೇಳಗಳಿಂದ ಮಕ್ಕಳಲ್ಲಿ ಯೋಚಿಸುವ, ಪ್ರಶ್ನಿಸುವ ಸಾಮರ್ಥ್ಯಕ್ಕೆ ಸಹಕಾರಿ ಎಂದರು.

ಭಾಷೆ ಮತ್ತು ಗಣಿತ ವಿಷಯದ ಚಟುವಟಿಕೆಗಳಾದ ಸನ್ನಿವೇಶ ನೋಡಿ ವಿವರಿಸುವದು. ಚಿತ್ರನೋಡಿ ಕಥೆ ರಚಿಸುವದು, ಸ್ವಂತ ವಾಕ್ಯ ಬಳಸಿ, ಗಾದೆ ಮಾತುಗಳು, ಪದ ರಚನೆ, ಕಥೆಗೆ ಶೀರ್ಷಿಕೆ ಬರೆಯುವದು, ಗಣಿತದ ಮೂಲಕ್ರಿಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಕ್ಕಳು ವಿವರಿಸಿದರು.

ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಪವನ ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿದರು.

ಸಿಆರ್‌ಪಿ ಮಲ್ಲಣ್ಣ ಸುರಪುರ, ಶ್ರೀಶೈಲ್ ಪಾಸೋಡಿ, ಶಿಕ್ಷಕರಾದ ಮಾಬು ಪಟೇಲ್, ಸಿದ್ರಾಮಪ್ಪ, ಜಯಶ್ರೀ ಹಿರೇಮಠ, ವಿಠಲ ನಾಯಕ, ಜಯಂತಿ ಎಚ್, ವೆಂಕಟೇಶ, ಶ್ರೀಶೈಲ್, ರಾಜ ಅಹ್ಮದ್, ಬಾಬುಲಾಲ‌್, ಶಶಿಕಲಾ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು