ಫಲಿತಾಂಶ ಸುಧಾರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಸಭೆ ನಡೆಯಿತು
ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಭಯ ನಿವಾರಣೆಗೆ ಹಲವಾರು ಕ್ರಮ ಕೈಗೊಳ್ಳಲಾಗಿದೆ. ಇದರ ಭಾಗವಾಗಿ ವೆಬ್ ಕಾಸ್ಟಿಂಗ್ ಪರೀಕ್ಷೆ ಮಾಡಲಾಗಿದೆ
ಸಿ.ಎಸ್.ಮುಜಧೋಳ ಡಿಡಿಪಿಐ
ಫಲಿತಾಂಶ ಸುಧಾರಣೆಗೆ ಸವಾಲುಗಳು
ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಜಿಲ್ಲೆ ಹಿಂದುಳಿಯಲು ಶಿಕ್ಷಣ ಇಲಾಖೆ ಸವಾಲುಗಳನ್ನು ಪತ್ತೆ ಹಚ್ಚಿದೆ. ಜಿಲ್ಲೆಯಲ್ಲಿ ವಿಷಯವಾರು ಶಿಕ್ಷಕರ ಕೊರತೆ ಇದೆ. ಶೇ 47ರಷ್ಟು ಹುದ್ದೆಗಳು ಖಾಲಿ ಇವೆ. ಎಸ್‌ಎಸ್‌ಎಲ್‌ಸಿ ಮಕ್ಕಳು ಹತ್ತಿ ಬಿಡಿಸಲು ಭತ್ತದ ರಾಶಿ ಮಾಡಲು ತೆರಳುತ್ತಿದ್ದಾರೆ. ಪಾಲಕ ಪೋಷಕರ ಅನಕ್ಷರತೆ ಮತ್ತು ನಿರಾಸಕ್ತಿ ವಿದ್ಯಾರ್ಥಿಗಳಲ್ಲಿ ಆಸಕ್ತಿ ಕೊರತೆ ಮನೆಯಲ್ಲಿ ತಮ್ಮಂದಿರನ್ನು ಮತ್ತು ತಂಗಿಯರನ್ನು ಜೋಪಾನ ಮಾಡಲು ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಪಾಲಕರ ವಲಸೆ ಪಾಲಕರಿಗೆ ಶಿಕ್ಷಣದ ಪ್ರಾಮುಖ್ಯತೆ ಮಾಹಿತಿ ಕೊರತೆ ಪಾಲಕರು ಮಕ್ಕಳಿಗೆ ಮನೆಯಲ್ಲಿ ಸರಿಯಾಗಿ ಮೇಲ್ವಿಚಾರಣೆ ಮಾಡದಿರುವುದು ಇತ್ಯಾದಿ ಕಾರಣಗಳನ್ನು ನೀಡಲಾಗಿದೆ.
ಗಿರಿ ವೈಭವ ಸಂಚಿಕೆ
ಪ್ರಶ್ನೆ ಪತ್ರಿಕೆಗಳನ್ನು ಶಿಕ್ಷಣ ಇಲಾಖೆ ರೂಪಿಸಿದೆ. ಗಿರಿ ವೈಭವ ಸಂಚಿಕೆ ಮೂಲಕ ಆರು ವಿಷಯಗಳ ಪ್ರರೀಕ್ಷಾ ತಯಾರಿಗಾಗಿ ಪ್ರಶ್ನೆಗಳನ್ನು ಉತ್ತರ ಸಹಿತವಾಗಿ ಮಕ್ಕಳಿಗೆ https://online.fliphtml 5.com/jcmbz/hplv/ ಮೂಲಕ ತಲುಪಿಸಲಾಗುತ್ತಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.