ಶಹಾಪುರ: ‘ಸಮಾಜದ ಸ್ವಾಸ್ಥ್ಯ ನಿರ್ಮಾಣದಲ್ಲಿ ಧಾರ್ಮಿಕ ಕ್ಷೇತ್ರಗಳ ಪ್ರತಿನಿಧಿಗಳ ಹಾಗೂ ಸ್ವಾಮೀಜಿಗಳ ಪಾತ್ರ ಪ್ರಮುಖವಾಗಿದೆ’ ಎಂದು ರಾಜ್ಯ ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಹೇಳಿದರು.

ನಗರದಲ್ಲಿ ಗುರುವಾರ ನಾನಾ ಮಠಗಳಿಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ‘ಮಠಮಾನ್ಯಗಳಿಗೆ ಭೇಟಿ ನೀಡುವ ಭಕ್ತರಿಗೆ ಶ್ರೀಗಳು ಹೆಚ್ಚಿನ ಮುತುವರ್ಜಿ ವಹಿಸಿ ಆಣೆಪ್ರಮಾಣವನ್ನು ಮಾಡಿಸುವ ಮೂಲಕ ಭಕ್ತರನ್ನು ಮದ್ಯಪಾನ ಸೇರಿ ನಾನಾ ವ್ಯಸನಗಳಿಂದ ಮುಕ್ತರನ್ನಾಗಿಸಬೇಕು. ಜನರು ಸಹ ಸ್ವಯಂಜಾಗೃತರಾಗುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬದ್ಧರಾಗಬೇಕು’ ಎಂದರು.

ಕುಂಬರಗಿರಿ ಮಠದ ಷಟಸ್ಥಲ ಬ್ರಹ್ಮಿ ಸೂಗುರೇಶ್ವರ ಶಿವಾಚಾರ್ಯರರು, ಹೋತಪೇಟದ ಕೈಲಾಸ ಮಠದ ಶ್ರೀಶಿವಲಿಂಗೇಶ್ವರ ಶರಣರು ಸೇರಿದಂತೆ ಹಲವು ಮಠಾಧೀಶರನ್ನು ಭೇಟಿ ಮಾಡಿ ಮಂಡಳಿ ಉದ್ದೇಶ, ಗುರಿಗಳ ಕುರಿತು ಚರ್ಚೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.