ಯಾದಗಿರಿ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರೇ ಹೆಚ್ಚು ಪಾಸಾಗಿದ್ದಾರೆ.

2019–20ನೇ ಸಾಲಿನ ಸರ್ಕಾರಿ ಶಾಲೆಯ 5,662ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದು 3,499 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಶೇ 61.80 ರಷ್ಟು ಫಲಿತಾಂಶ ಪಡೆದಿದ್ದಾರೆ. ಪುನರಾವರ್ತಿತ 984ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿ ಕೊಂಡರೆ369 ವಿದ್ಯಾರ್ಥಿನಿ ಯರುಪಾಸಾಗಿದ್ದಾರೆ. ಮೊರಾರ್ಜಿ ದೇಸಾಯಿ ವಸತಿ ಶಾಲೆಯ5,331ರಲ್ಲಿ ವಿದ್ಯಾರ್ಥಿನಿ ಯರಲ್ಲಿ 3,218 ಮಂದಿ ಪಾಸಾಗಿ ಶೇ 60.36 ರಷ್ಟು ಫಲಿತಾಂಶ ಗಳಿಸಿದ್ದಾರೆ. ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆಯ 293 ಬಾಲಕಿ ಯರಲ್ಲಿ244 ಮಂದಿ ಪಾಸಾಗಿ ಶೇ83.28ರಷ್ಟು ಅಂಕ ಗಳಿಸಿದ್ದಾರೆ.

ತಾಲ್ಲೂಕುವಾರು ವಿವರ: ಸರ್ಕಾರಿ ಮತ್ತು ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ವಿದ್ಯಾರ್ಥಿನಿಯರುಯಾದಗಿರಿ ತಾಲ್ಲೂಕಿನಲ್ಲಿ1,991 ಮಂದಿ ಪರೀಕ್ಷೆಗೆ ಕುಳಿತಿದ್ದು,1,156 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶೇ58.06 ಪ್ರತಿಶತ ದಾಖಲಿಸಿದ್ದಾರೆ.ಸುರಪುರ ತಾಲ್ಲೂಕಿನ1,748 ಬಾಲಕಿಯರು ಪರೀಕ್ಷೆಗೆ ನೋಂದಾಯಿಸಿ ಕೊಂಡರೆ ಅದರಲ್ಲಿ1,096 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಶೇ62.7ರಷ್ಟು ಫಲಿತಾಂಶ ಬಂದಿದೆ. ಶಹಾಪುರ ತಾಲ್ಲೂಕಿನಲ್ಲಿ1,592ರಲ್ಲಿ 966 ಮಂದಿ ಪಾಸಾಗಿದ್ದಾರೆ. ಈ ಮೂಲಕ ಶೇ 60.68ರಷ್ಟು ಪ್ರತಿಶತ ಬಂದಿದೆ.

ವಿಷಯವಾರು ಪರೀಕ್ಷೆಗಳಲ್ಲೂ ಮುಂದೆ: ಪ್ರಥಮ ಭಾಷೆಯಲ್ಲಿ5,662 ಬಾಲಕಿಯರಲ್ಲಿ5,113 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಶೇ90.3 ರಷ್ಟು ಫಲಿತಾಂಶ ಬಂದಿದೆ. ದ್ವಿತೀಯ ಭಾಷೆಯಲ್ಲಿ5,660 ವಿದ್ಯಾರ್ಥಿನಿಯರಲ್ಲಿ4,282 ಮಂದಿ ಪಾಸಾಗಿ ಶೇ 75.7 ಅಂಕಗಳಿಸಿದ್ದಾರೆ.

ತೃತೀಯ ಭಾಷೆ ಪರೀಕ್ಷೆಯಲ್ಲಿ5,660 ವಿದ್ಯಾರ್ಥಿನಿಯರು ಪರೀಕ್ಷೆಗೆ ಕುಳಿತಿದ್ದರು. ಅದರಲ್ಲಿ 5,111 ಮಂದಿ ಪಾಸಾಗಿ ಶೇ 90.3 ರಷ್ಟು ಪ್ರತಿಶತ ದಾಖಲಿಸಿದ್ದಾರೆ.

ವಿಜ್ಞಾನ ವಿಷಯದಲ್ಲಿ5,662 ಬಾಲಕಿಯರಲ್ಲಿ 4,217 ವಿದ್ಯಾರ್ಥಿನಿಯರು ಉತ್ತೀರ್ಣರಾಗಿ ಶೇ74.48 ರಷ್ಟು ಸಾಧನೆ ಮಾಡಿದ್ದಾರೆ. ಸಮಾಜ ವಿಜ್ಞಾನದಲ್ಲಿ5,662 ವಿದ್ಯಾರ್ಥಿನಿಯರಲ್ಲಿ 4,823 ಮಂದಿ ಪಾಸಾಗಿ ಶೇ 85.18 ರಷ್ಟು ಫಲಿತಾಂಶ ಬಂದಿದೆ.ಗಣಿತವಿಷಯದಲ್ಲಿ 5,662 ಬಾಲಕಿಯರು ಪರೀಕ್ಷೆಗೆ ಹೆಸರು ನೋಂದಾಯಿಸಿದರೆ4,472 ಮಂದಿ ಪಾಸಾಗಿ ಶೇ 78.98 ಫಲಿತಾಂಶ ಪಡೆದಿದ್ದಾರೆ.

ಪುನರಾವರ್ತಿತ ಬಾಲಕಿಯರು ವಿಷಯವಾರು ಪರೀಕ್ಷೆಗಳಲ್ಲಿ ಬಾಲಕರಿಗಿಂತ ಮುಂದಿದ್ದಾರೆ. ಅಲ್ಲದೆ ಗ್ರಾಮ, ಪಟ್ಟಣದಲ್ಲಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಗ್ರಾಮೀಣ ಭಾಗದ 3,728 ಬಾಲಕಿಯರಲ್ಲಿ 2,306 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ. ಶೇ 61.86 ರಷ್ಟು ಫಲಿತಾಂಶ ಬಂದಿದೆ. ಪಟ್ಟಣ ಮಟ್ಟದಲ್ಲಿ 1,934 ಬಾಲಕಿಯರಲ್ಲಿ 1,193 ಮಂದಿ ಉತ್ತೀರ್ಣರಾಗಿ ಶೇ 61.69ರಷ್ಟು ಪ್ರತಿಶತ ದಾಖಲಿಸಿದ್ದಾರೆ.

ಎರಡು ದಿನಗಳ ನಂತರ ಫಲಿತಾಂಶ!: ರಾಜ್ಯ ಹಾಗೂ ಜಿಲ್ಲಾ ಹಂತದಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಯಿಂದ ಎರಡು ದಿನಗಳ ನಂತರ ವಿದ್ಯಾರ್ಥಿಗಳ ವಿವರ ಲಭ್ಯವಾಗಿದೆ. ಸಿದ್ಧತೆ ಇಲ್ಲದೆ ಪರೀಕ್ಷೆ ಫಲಿತಾಂಶ ಘೋಷಣೆಗೆ ಮಾತ್ರ ಒತ್ತು ನೀಡಿದ್ದರಿಂದ ಜಿಲ್ಲಾ ಹಂತದಲ್ಲಿ ಸರಿಯಾದ ಮಾಹಿತಿ ಸಿಗದೆ ಅಧಿಕಾರಿಗಳು ಎರಡು ದಿನಗಳ ಪರದಾಟ ನಡೆಸಿರುವುದು ಕಂಡು ಬಂದಿದೆ.

ಎಸ್ಸೆಸ್ಸೆಲ್ಸಿ ಫಲಿತಾಂಶ ಹಿನ್ನಡೆಗೆ ಹಲವು ಕಾರಣಗಳಿವೆ. ಶಿಕ್ಷಕರ ಕೊರತೆ ಪ್ರಮುಖವಾಗಿದೆ. ಹೀಗಿದ್ದೂ ಬಾಲಕಿಯರು ಉತ್ತಮ ಸಾಧನೆ ಮಾಡಿದ್ದಾರೆ ಎಂದು ಡಿಡಿಪಿಐಶ್ರೀನಿವಾಸ ರೆಡ್ಡಿ ಪ್ರತಿಕ್ರಿಯಿಸಿದರು.

ಜಿಲ್ಲೆಯಲ್ಲಿ 167 ಶಿಕ್ಷಕರ ಕೊರತೆಯಿದೆ. ಕಳೆದ ವರ್ಷ ಶೇ 54.88 ಇದ್ದದ್ದು, ಈ ವರ್ಷ ಶೇ 58.13 ಪ್ರತಿಶತ ಫಲಿತಾಂಶ ಹೆಚ್ಚಳವಾಗಿದೆ ಎಂದುಜಿಲ್ಲಾ ಎಸ್ಸೆಸ್ಸೆಲ್ಸಿ ನೋಡಲ್ ಅಧಿಕಾರಿ ಡಾ.ಮಲ್ಲಪ್ಪ ಕೆ.ಯರಗೋಳ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.