ಗುರುಮಠಕಲ್: ತಾಲ್ಲೂಕು ವ್ಯಾಪ್ತಿಯ ಒಟ್ಟು 18 ಗ್ರಾಮ ಪಂಚಾಯಿತಿಗಳಲ್ಲಿ ಅನಪುರ ಪಂಚಾಯಿತಿ ಹೊರತುಪಡಿಸಿ, ಉಳಿದ 17 ಪಂಚಾಯಿತಿಗಳಿಗೆ ಶುಕ್ರವಾರ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಆಯ್ಕೆ ನಡೆದಿದೆ. 9 ಪಂಚಾಯಿತಿಗಳಲ್ಲಿ ಅವಿರೋಧ ಹಾಗೂ 8 ಪಂಚಾಯಿತಿಗಳಲ್ಲಿ ಚುನಾವಣೆ ಮೂಲಕ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆದಿದೆ.

ಅಜಲಾಪುರ, ಮಾಧ್ವಾರ, ಕೊಂಕಲ್, ಯಲ್ಹೇರಿ, ಕಂದಕೂರ, ಕಾಕಲವಾರ, ಪುಟಪಾಕ, ಚಂಡರಕಿ ಹಾಗೂ ಮಿನಾಸಪುರ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಅವಿರೋಧ ಆಯ್ಕೆಯಾಗಿದ್ದಾರೆ. ಉಳಿದಂತೆ ಪಸಪುಲ, ಯಂಪಾಡ, ಜೈಗ್ರಾಂ, ಯಲಸತ್ತಿ, ಚಿನ್ನಾಕಾರ, ಕಾಳಬೆಳಗುಂದಿ, ಚಪೆಟ್ಲಾ, ಗಾಜರಕೋಟ ಪಂಚಾಯಿತಿಗಳಲ್ಲಿ ಚುನಾವಣೆ ನಡೆದಿದೆ ಎಂದು ಅಲ್ಲಿನ ಚುನಾವಣಾಧಿಕಾರಿಗಳು ಮಾಹಿತಿ ನೀಡಿದರು.

ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳ ಚುನಾವಣೆಯ ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ತೀರ್ಥಯಾತ್ರೆಗಳಿಗೆ, ಪ್ರವಾಸಕ್ಕೆ ನೂತನ ಸದಸ್ಯರನ್ನು ಕರೆದೊಯ್ದಿದ್ದ ಆಕಾಂಕ್ಷಿಗಳು, ಈಗ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ದಿನಾಂಕ ನಿಗದಿಯ ನಂತರ ವಾಪಸ್ ಆಗಿದ್ದರು. ಕೆಲವೆಡೆಯಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಮೇಲೆ ಕಣ್ಣಿಟ್ಟು ಸದಸ್ಯರನ್ನು ಪ್ರವಾಸಕ್ಕೆ ಕರೆದೊಯ್ದಿದ್ದ ನಾಯಕರು ಮೀಸಲಾತಿ ಬದಲಾದ ಕಾರಣ ಸಪ್ಪೆಯಾಗಿದ್ದರು.

ರಾಜಕೀಯ ಪಕ್ಷಗಳು ಮುಂದಿನ ಹಂತದ ಚುನಾವಣೆಗಳಲ್ಲಿ ತಮ್ಮ ಪಕ್ಷವನ್ನು ಬಲಪಡಿಸಿಕೊಳ್ಳಲೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದು, ಅಸಮಧಾನದಲ್ಲಿರುವವರಿಗೆ 30 ತಿಂಗಳ ನಂತರದಲ್ಲಿ ತಮಗೆ ಅವಕಾಶ ಸಿಗುತ್ತದೆ ಎಂದು ಸಮಾಧಾನ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.