ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಾರಸ್ವಾಮಿ, ಯಡಿಯೂರಪ್ಪ ಇಬ್ಬರೂ ಕಳ್ಳರೇ, HDK ದೊಡ್ಡ ಕಳ್ಳ: ಸಚಿವ ದರ್ಶನಾಪುರ

Published : 2 ಅಕ್ಟೋಬರ್ 2024, 15:00 IST
Last Updated : 2 ಅಕ್ಟೋಬರ್ 2024, 15:00 IST
ಫಾಲೋ ಮಾಡಿ
Comments

ಯಾದಗಿರಿ: ‘ಮುಡಾದಲ್ಲಿ ಜಾಗ ತೆಗೆದುಕೊಂಡಿರುವುದು ತನಿಖೆಯಲ್ಲಿ ಸತ್ಯಾಸತ್ಯತೆ ಗೊತ್ತಾಗುತ್ತದೆ.‌ ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಯಾವುದೇ ರೀತಿಯಲ್ಲಿ ಮಾತನಾಡುವ ನೈತಿಕತೆ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿಗೆ ಇಲ್ಲ. ಜಾಮೀನನ ಮೇಲೆ ಹೊರಗಡೆ ಇರುವ ಕುಮಾರಸ್ವಾಮಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಇಬ್ಬರೂ ಕಳ್ಳರೇ. ಕುಮಾರಸ್ವಾಮಿ ದೊಡ್ಡಕಳ್ಳ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ಆಪಾದಿಸಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿಯಾಗಲು ₹2,000 ಸಾವಿರ ಕೋಟಿ ಇಟ್ಟುಕೊಂಡಿದ್ದಾರೆ ಎಂದು ಬಿಜೆಪಿ ಪಕ್ಷದವರೇ ಹೇಳಿದ್ದಾರೆ. ಮುಖ್ಯಮಂತ್ರಿ ರಾಜೀನಾಮೆ ಕೊಡುವ ಪ್ರಶ್ನೆ ಬರುವುದಿಲ್ಲ, ಮುಡಾ ಪರ್ಯಾಯವಾಗಿ ಸ್ಥಳ ಹಂಚಿಕೆ ಮಾಡಿದೆ. ಎಷ್ಟು ಪ್ರತಿಶತ ಜಾಗ ನೀಡಬೇಕು ಎನ್ನುವುದು ಮುಡಾ ನಿರ್ಧಾರ ಮಾಡಿತ್ತು, ಅದರಂತೆ ಸೈಟ್ ಕೊಟ್ಟಿದ್ದಾರೆ ಅದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದರು.

‘ಮುಡಾ ಜಾಗ ವಾಪಸ್ ಕೊಟ್ಟಿದ್ದು, ಮುಖ್ಯಮಂತ್ರಿ ಪತ್ನಿ ಅವರ ನೈತಿಕತೆ ಎದ್ದು ಕಾಣುತ್ತದೆ. ಆದರೆ, ಇದನ್ನೇ ಯುಟರ್ನ್‌ ಹೊಡಿದ್ದಾರೆಂಬ ಕೇಂದ್ರ ಸಚಿವ ಕುಮಾರಸ್ವಾಮಿ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಹೇಳಿದರು.

‘ಮುಡಾ ವಿಷಯದಲ್ಲಿ ಸಿಎಂ ಸಿದ್ದರಾಯಮ್ಮ ಅವರ ಪಾತ್ರ ಎಲ್ಲೂ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷದ ಜನಪ್ರಿಯತೆ ತಗ್ಗಿಸುವ ಕೆಲಸವನ್ನು ವಿರೋಧ ಪಕ್ಷದವರು ಮಾಡುತ್ತಿದ್ದಾರೆ. ಮುಡಾದಲ್ಲಿ ಕುಮಾರಸ್ವಾಮಿ ಕುಟುಂಬದವರ ಎಷ್ಟು ಸೈಟ್‌ಗಳಿವೆ ಗೊತ್ತಾ, ಆ ಬಗ್ಗೆ ತುಟ್ಟಿ ಬಿಚ್ಚದ ಅವರು, ಸುಖಾಸುಮ್ಮನೆ ಆರೋಪ‌ ಮಾಡುವುದರಲ್ಲಿ ಕುಮಾರಸ್ವಾಮಿ ಎತ್ತಿದ ಕೈ’ ಎಂದರು.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿ ಇದ್ದರೂ ರಾಜ್ಯದಲ್ಲಿ ನಾವು 9 ಸ್ಥಾನ ಗೆದ್ದಿದ್ದೇವೆ. ಇದರ ಹೊಟ್ಟೆ ಕಿಚ್ಚು ಬಿಜೆಪಿ-ಜೆಡಿಎಸ್‌ನವರಿಗಿದೆ. ದಲಿತ ಸಚಿವರ ಗೌಪ್ಯ ಸಭೆ ಯಾವುದೇ ಬೇರೆ ಅರ್ಥ ಬೇಡ. ಎಲ್ಲರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಇದ್ದೇವೆ‌’ ಎಂದು ಸಚಿವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT