ಶನಿವಾರ, 22 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಟಗೇರಾ–ಗಾಜರಕೋಟ ಹಳ್ಳದ ಸೇತುವೆ ಜಲಾವೃತ

ಜಿಲ್ಲೆಯಲ್ಲಿ 15 ಎಂಎಂ ಮಳೆ, ಗುರುಮಠಕಲ್‌ ತಾಲ್ಲೂಕಿನಲ್ಲಿ ಹೆಚ್ಚು ಮಳೆ
Last Updated 15 ಸೆಪ್ಟೆಂಬರ್ 2020, 16:21 IST
ಅಕ್ಷರ ಗಾತ್ರ

ಯಾದಗಿರಿ: ಜಿಲ್ಲೆಯ ಗುರುಮಠಕಲ್‌ ತಾಲ್ಲೂಕಿನಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಗೆಕೊಟಗೇರಾ–ಗಾಜರಕೋಟ ಹಳ್ಳದ ಸೇತುವೆ ಜಲಾವೃತಗೊಂಡಿದೆ. ಇದರಿಂದವಾಹನ ಸವಾರರು ಪರದಾಡಿದರು. ಯಾದಗಿರಿಯಿಂದ ಕೊಟಗೇರಾ, ಹೊಸಹಳ್ಳಿ, ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿಗೆ ತೆರಳುವ ವಾಹನ ಸವಾರರು ಸೇತುವೆ ದಾಟಲು ಪರಿದಾಡಿದರು.

‘ಕೊಟಗೇರಾ ಕೆರೆ ನೀರು ಹಳ್ಳಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದರಿಂದ ಸೇತುವೆ ಮೇಲ್ಭಾಗದಲ್ಲಿ ನೀರು ಹರಿಯಿತು. ಬೈಕ್‌ ಕೊಚ್ಚಿಕೊಂಡು ಹೋಗಿದ್ದು, ಬೈಕ್‌ ಸವಾರರನ್ನು ರಕ್ಷಿಸಲಾಗಿದೆ.ಸಂಜೆ ವೇಳೆಗೆ ಸೇತುವೆ ಮೇಲೆ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗಿದೆ’ ಎಂದು ಗ್ರಾಮಸ್ಥ ಜಾಫರ್‌ ತಿಳಿಸಿದ್ದಾರೆ.

ಗುರುಮಠಕಲ್‌ ತಾಲ್ಲೂಕಿನ ಮಿನಸಾಪುರ ಕೆರೆ ಭರ್ತಿಯಾಗಿದೆ. ಕಾಲುವೆ ಮೂಲಕ ಹರಿಯಲು ಜಾಗವಿಲ್ಲದಿದ್ದರಿಂದ ಭತ್ತದ ಗದ್ದೆಗಳಿಗೆ ನೀರು ನುಗ್ಗಿದೆ.

15 ಎಂಎ ಮಳೆ: ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 15 ಎಂಎಂ ಮಳೆಯಾಗಿದೆ. ಗುರುಮಠಕಲ್‌ ತಾಲ್ಲೂಕಿನಲ್ಲಿ ಹೆಚ್ಚು ಮಳೆಯಾಗಿದೆ. ಗುರುಮಠಕಲ್‌ 64.1, ಕಾಕಲವಾರ 58, ಕೊಂಕಲ್‌ 44.06 ಎಂಎಂ, ಚಪೆಟ್ಲಾ 48, ಜೈಗ್ರಾಮ 27, ಚಂಡರಕಿ 31, ಪುಟಪಾಕ 46, ಮಿನಸಾಪುರ 42, ಪಸಪುಲ್ 42, ಗಾಜರಕೋಟ 46, ಎಲ್ಹೇರಿ 26, ಯಲಸತ್ತಿ 29, ಅರಕೇರಾ (ಕೆ) 16, ಮೋಟನಹಳ್ಳಿ 19 ಎಂಎಂ ಮಳೆಯಾಗಿದೆ.

ಸುರಪುರ 14, ಕಕ್ಕೇರಾ 22.2, ಕೋಡೆಕಲ್‌20.2,ನಾರಾಯಣಪುರ 7.6, ಹುಣಸಗಿ12.2, ಹಗರಟಗಿ 16, ಬರದೇವನಹಾಳ 20, ಮಾರನಾಳ 25, ಜೋಗುಂಡಬಾವಿ 16, ಕೆಂಭಾವಿಯಲ್ಲಿ 7.6 ಎಂಎಂ ಮಳೆಯಾಗಿದೆ.

ಶಹಾಪುರ ತಾಲ್ಲೂಕಿನ ಹತ್ತಿಗೂಡೂರು 15, ರಸ್ತಾಪುರ 16, ಚಾಮನಾಳ 14, ಮೂಡಬೂಳ 14, ನಾಯ್ಕಲ್ 14, ಕರೆಕಲ್‌ 17, ಅಣಬಿ 18, ಮದ್ರಕಿಯಲ್ಲಿ 13 ಎಂಎಂ ಮಳೆ ಸುರಿದಿದೆ.

ಯಾದಗಿರಿ ತಾಲ್ಲೂಕಿನ ಬಾಡಿಯಾಳ 16, ಕಡೇಚೂರು 12, ಮಲ್ಹಾರ 15, ಕೌಳೂರು 22, ಹಳಿಗೇರಾ 22, ಮುಂಡರಗಿಯಲ್ಲಿ 18, ಸೂಗೂರ (ಬಿ) 16, ಠಾಣಗುಂದಿ14, ಅರಕೇರಾ (ಬಿ) 16, ಯರಗೋಳ 22, ಅಲ್ಲಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 16 ಎಂಎಂ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT