ಯಾದಗಿರಿಯ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡದ ಹಿಂಬದಿಯ ಚರಂಡಿ ಚೇಂಬರ್ ಸುತ್ತಲೂ ನಿಂತ ಕೊಳಚೆ ನೀರು
ಚನ್ನಾರೆಡ್ಡಿ ಪಾಟೀಲ ತುನ್ನೂರು
ಲಲಿತಾ ಅನಪುರ
ಡಾ. ಸಂದೀಪ್ ಹರಸಂಗಿ
ಉಮೇಶ ಚವ್ಹಾಣ್
ಕೆಲವು ದಿನಗಳ ಹಿಂದೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ‘ಯಿಮ್ಸ್’ ನಿರ್ದೇಶಕರ ಗಮನಕ್ಕೂ ತಂದಿದ್ದೇನೆ. ಮತ್ತೊಮ್ಮೆ ಭೇಟಿ ಕೊಟ್ಟು ಕ್ರಮ ತೆಗೆದುಕೊಳ್ಳಲಾಗುವುದು..
ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ
ಆಸ್ಪತ್ರೆಯವರು ಒಳಗಡೆಯಿಂದ ಹೊರಗೆ ಚರಂಡಿ ಜಾಲ ಸಂಪರ್ಕ ಕಲ್ಪಿಸಿದರೆ ಹೊರಗಡೆಯದ್ದನ್ನು ನಾವು ಮಾಡುತ್ತೇವೆ. ನೈರ್ಮಲ್ಯ ಅಧಿಕಾರಿಯನ್ನು ಕಳುಹಿಸಿ ಎರಡ್ಮೂರು ದಿನಗಳಲ್ಲಿ ಇತ್ಯರ್ಥ ಮಾಡಲಾಗುವುದು.
ಲಲತಾ ಅನಾಪುರ ನಗರಸಭೆ ಅಧ್ಯಕ್ಷೆ
ಆಸ್ಪತ್ರೆ ಕಟ್ಟಡದ ನವೀಕರಣದ ಜೊತೆಯಲ್ಲಿ ಆವರಣದಲ್ಲಿನ ಚರಂಡಿ ಜಾಲವನ್ನೂ ನಿರ್ಮಾಣ ಮಾಡಲಾಗುತ್ತಿದೆ. ಅರ್ಧದಷ್ಟು ಕಾಮಗಾರಿಯೂ ಮುಗಿದಿದ್ದು ಚರಂಡಿ ನೀರು ಹೊರಗಡೆ ಸರಿಯಾಗಿ ಹೋಗುತ್ತಿಲ್ಲ.
ಡಾ. ಸಂದೀಪ್ ಹರಸಂಗಿ ‘ಯಿಮ್ಸ್’ ಮುಖ್ಯಸ್ಥ
ನಗರದಲ್ಲಿನ ಚರಂಡಿಯಲ್ಲಿನ ಹೂಳು ತೆಗೆಯಲು ₹ 35 ಲಕ್ಷ ಮೀಸಲಿಟ್ಟಿದ್ದು ಶೀಘ್ರವೇ ಟೆಂಡರ್ ಕರೆಯಲಾಗುವುದು. ಆ ವೇಳೆ ಆಸ್ಪತ್ರೆ ಮುಂಭಾಗದ ಚರಂಡಿಯನ್ನೂ ಸ್ವಚ್ಛ ಮಾಡಲಾಗುವುದು.