ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹಾಲುಮತವು ಹಾಲಿನಷ್ಟೇ ಶ್ರೇಷ್ಠವಾದದ್ದು’

Published 29 ಆಗಸ್ಟ್ 2024, 15:40 IST
Last Updated 29 ಆಗಸ್ಟ್ 2024, 15:40 IST
ಅಕ್ಷರ ಗಾತ್ರ

ವಡಗೇರಾ: ‘ಪ್ರತಿಯೊಬ್ಬರೂ ನಿತ್ಯ ಹಣೆಯ ಮೇಲೆ ಭಂಡಾರ ಧರಿಸಬೇಕು. ಹಾಲುಮತವು ಹಾಲಿನಷ್ಟೇ ಶ್ರೇಷ್ಠವಾದದ್ದು’ ಎಂದು ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲ್ಲೂಕಿನ ಹಂಚಿನಾಳ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬೀರಲಿಂಗೇಶ್ವರ ದೇವಸ್ಥಾನ ಹಾಗೂ ಬೀರಲಿಂಗೇಶ್ವರ ಮೂರ್ತಿ ಪ್ರತಿಷ್ಠಾಪನೆಯನ್ನು ಲೋಕಾರ್ಪಣೆಗೊಳಿಸಿದ ನಂತರ ಅವರು ಮಾತನಾಡಿದರು.

‘ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿಗೆ ಒಳ್ಳೆಯ ಸಂಸ್ಕಾರ ನೀಡಿದರೆ ಮಾತ್ರ ಅವರ ಭವಿಷ್ಯ ಉಜ್ವಲಗೊಳ್ಳುತ್ತದೆ. ಮೂಢನಂಬಿಕೆಗಳಿಗೆ ಬಲಿಯಾಗಬಾರದು. ಪಾಲಕರು ಹೆಣ್ಣು ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ನೀಡಬೇಕು. ಅವರನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬಾರದು’ ಎಂದು ತಿಳಿಸಿದರು.

ಅಗತೀರ್ಥ ಸರೂರು ಶಾಖಾ ಮಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮೀಜಿ ಮಾತನಾಡಿ, ‘ಡೊಳ್ಳು, ಕಂಬಳಿ, ಭಂಡಾರಕ್ಕೆ ತಮ್ಮದೇ ಮಹತ್ವವಿದೆ. ಅವುಗಳನ್ನು ಗೌರವದಿಂದ ಕಾಣಬೇಕು. ಬೀರಲಿಂಗ ದೇವರು ಪವಾಡ ಪುರುಷರು. ಅವರ ತತ್ವ ಆದರ್ಶಗಳು ಸಾರ್ವಕಾಲಿಕ ಶ್ರೇಷ್ಠವಾಗಿವೆ’ ಎಂದು ಹೇಳಿದರು.

ಸಮಾಜದ ಮುಖಂಡರಾದ ಶರಣಪ್ಪ ಸಲಾದಪುರ, ಭೀಮಣ್ಣ ಮೇಟಿ ಮಾತನಾಡಿದರು. ಇದಕ್ಕೂ ಮುಂಚೆ ಗ್ರಾಮಸ್ಥರು ಹಾಗೂ ಮಹಿಳೆಯರು ಪೂರ್ಣ ಕುಂಭ ಕಳಸ, ಡೊಳ್ಳಿನೊಂದಿಗೆ ಸ್ವಾಮೀಜಿ ಅವರನ್ನು ಸ್ವಾಗತಿಸಿದರು.

ಭೋವಿ ಕಾಡಮಗೇರಾ ಹಾಲುಮತದ ಚೆನ್ನಮಲ್ಲಯ್ಯ ಸ್ವಾಮೀಜಿ, ಮಸ್ತೇಪ್ಪ ಪೂಜಾರಿ ಬಬಲಾದ, ಸಕ್ರೆಪ್ಪ ಪೂಜಾರಿ, ದೇವಪ್ಪ ಪೂಜಾರಿ, ಮಾರ್ಥಂಡಪ್ಪ ಪೂಜಾರಿ, ಸಾಬಣ್ಣ ಪೂಜಾರಿ, ಯಲ್ಲಾಲಿಂಗ ಪೂಜಾರಿ, ಜಿಪಂ ಮಾಜಿ ಸದಸ್ಯರಾದ ಸಿದ್ದಣ್ಣಗೌಡ ಕಾಡಂನೋರ, ಹಣಮೇಗೌಡ ಬೀರನಕಲ್, ಕುರುಬ ಸಂಘದ ಜಿಲ್ಲಾಧ್ಯಕ್ಷ ಮಲ್ಲಣ್ಣ ಐಕೂರ, ಸಾಬಣ್ಣ ವರಕೇರಿ, ವಿನೋದ್ ಗೌಡ ಮಾಲಿಪಾಟೀಲ, ಶಿವು ಪೂಜಾರಿ, ಸಿದ್ದರಾಮ ವಕೀಲ, ಹಣಮಂತರಾಯಗೌಡ ತೇಕರಾಳ, ದೇವೇಂದ್ರಪ್ಪ ಖಾನಾಪುರ, ಮಲ್ಲಯ್ಯ ಕಸಬಿ, ಮರೇಪ್ಪ ಬಸವಂತಪುರ, ಬೀರಲಿಂಗ ಮುಂಡರಗಿ, ವಿಜಯ ಬಾದೆಪೂರ, ಗ್ರಾಮಸ್ಥರು, ಬೀರಲಿಂಗೇಶ್ವರ ದೇವಸ್ಥಾನ ಸಮಿತಿಯವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಮೌನೇಶ ಪೂಜಾರಿ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT